Asianet Suvarna News Asianet Suvarna News

ಶಿವಮೊಗ್ಗ: ಹೈನುಗಾರರಿಗೆ ಬಂಪರ್ ಸುದ್ದಿ, ಹಾಲಿನ ದರ ಹೆಚ್ಚಳ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟವು ರೈತರಿಂದ ಖರೀದಿಸುವ ಪ್ರತಿ ಲೀ. ಹಾಲಿನ ದರವನ್ನು 2. 50 ರು. ಹೆಚ್ಚಿಸಿದ್ದು, ಇದು ಆ. 3 ರಿಂದಲೇ ಜಾರಿಗೆ ಬರಲಿದೆ.

Shivamogga Milk producers Federation hikes Milk Rate
Author
Bangalore, First Published Aug 2, 2019, 3:33 PM IST

ಶಿವಮೊಗ್ಗ(ಆ.02): ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟವು ರೈತರಿಂದ ಖರೀದಿಸುವ ಪ್ರತಿ ಲೀ. ಹಾಲಿನ ದರವನ್ನು 2. 50 ರು. ಹೆಚ್ಚಿಸಿದೆ.

ಇದು ಆ. 3 ರಿಂದಲೇ ಜಾರಿಗೆ ಬರಲಿದೆ. ಇದರಿಂದ ರೈತರಿಂದ ಖರೀದಿಸುವ ಪ್ರತಿ ಲೀ. ಹಾಲಿಗೆ 24.50 ರು. ಮತ್ತು ಹಾಲು ಉತ್ಪಾದಕ ಸಂಘಗಳಿಗೆ 23.80ರ ಬದಲಿಗೆ 26.80 ರು. ನೀಡಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುರುವಾರ ಮಾಚೇನಹಳ್ಳಿಯಲ್ಲಿನ ಶಿಮುಲ್‌ ಕಚೇರಿ ಆವರಣದಲ್ಲಿ ಅಧ್ಯಕ್ಷ ಆನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮಾರಾಟ ದರದಲ್ಲಿ ಯಾವುದೇ ಹೆಚ್ಚಳ ಇಲ್ಲ ಎಂದು ಶಿಮುಲ್‌ ಎಂ.ಡಿ. ಲೋಹಿತೇಶ್ವರ್‌ ತಿಳಿಸಿದ್ದಾರೆ.

Follow Us:
Download App:
  • android
  • ios