ಶಿವಮೊಗ್ಗ (ಜು.14): ಶಿರಾಳಕೊಪ್ಪ ಪಟ್ಟಣದ ಶಿಕಾರಿಪುರ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಟೆಂಟ್‌ ಹಾಕಿಕೊಂಡು ಜೀವನ ಮಾಡುತ್ತಿರುವ ಅಲೆಮಾರಿಗಳ ಮಕ್ಕಳಿಗೆ ಲಯನ್ಸ್‌ ಕ್ಲಬ್‌ ವತಿಯಿಂದ ಬುಕ್‌ ಮತ್ತು ಇತರ ಪರಿಕರಗಳನ್ನು ವಿತರಿಸಲಾಯಿತು.

ಬಡ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು, ಎಲ್ಲ ಮಕ್ಕಳಂತೆ ವಿದ್ಯೆ ಕಲಿಯಲಿ ಎಂಬ ಉದ್ದೇಶದಿಂದ ಲಯನ್ಸ್‌ ಕ್ಲಬ್‌ ಪುಸ್ತಕ ಮತ್ತು ಇತರ ಸಾಮಗ್ರಿಗಳನ್ನು ವಿತರಿಸುತ್ತಿದೆ ಎಂದು ಲಯನ್ಸ್‌ ಕ್ಲಬ್‌ ನೂತನ ಅಧ್ಯಕ್ಷ ಉಮೇಶ್‌ ಇಸಳೂರು ತಿಳಿಸಿದರು. ಪಟ್ಟಣದ ಶಿಕಾರಿಪುರ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಟೆಂಟ್‌ ಹಾಕಿಕೊಂಡು ಜೀವನ ಮಾಡುತ್ತಿರುವ ಅಲೆಮಾರಿಗಳ ಮಕ್ಕಳಿಗೆ ಬುಕ್‌ ಮತ್ತು ಇತರ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ವಲಯಾಧ್ಯಕ್ಷ ರಾಜೀವ್‌ ಮಳೂರ್‌ ಮಾತನಾಡಿ, ನಿಮ್ಮ ಮಕ್ಕಳೂ ಸಹ ಇತರ ಮಕ್ಕಳಂತೆ ಶಿಕ್ಷಣ ಪಡೆಯಲಿ ಎಂದು ನಾವು ಕಳೆದ ಹಲವಾರು ವಷÜರ್‍ಗಳಿಂದ ಪುಸ್ತಕ ಮತ್ತು ಇತರ ವಸ್ತುಗಳನ್ನು ವಿತರಿಸುತ್ತಿದ್ದು, ನೀವು ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳಿಸುವ ಕಡೆ ಗಮನ ಹರಿಸಬೇಕು. ಇಲ್ಲವಾದರೆ ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದರು.

ಹಿರಿಯ ಲಯನ್ಸ್‌ ಸದಸ್ಯ ಗಿರೀಶ್‌, ಲಯನ್ಸ್‌ ಕಾರ್ಯದರ್ಶಿ ಶಿವಯೋಗಿ ಗೌಡ, ಖಜಾಂಚಿ ರೇಣುಕಯ್ಯ, ಸುರೇಶ್‌ ಕುಬಸದ್‌, ಶಿವಕುಮಾರ್‌, ಮಂಗಳಾ, ಪ್ರಿಯದರ್ಶಿನಿ ಸೇರಿ ಸದಸ್ಯರು ಹಾಜರಿದ್ದರು.