ಶಿವಮೊಗ್ಗ : ಜೇನುಕಲ್ಲಮ್ಮ ದೇವಸ್ಥಾನದ ಸಮಿತಿ ರದ್ದು
ಶಿವಮೊಗ್ಗ ಜಿಲ್ಲೆಯ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಾಡಿದ್ದಾರೆ.
ರಿಪ್ಪನ್‌ಪೇಟೆ [ಸೆ.17]: ಇತಿಹಾಸ ಪ್ರಸಿದ್ಧ ಶಿವಮೊಗ್ಗ ಜಿಲ್ಲೆಯ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಶಾಸಕರ ಪತ್ರದ ಶಿಪಾರಸ್ಸಿನಂತೆ ವಜಾಮಾಡಿ ಆದೇಶ ಹೊರಡಿಸಿದ್ದಾರೆ.
ಹಾಲಿ ವ್ಯವಸ್ಥಾಪನಾ ಸಮಿತಿಯಲ್ಲಿ ಜಿಪಂ ಸದಸ್ಯರು ಮತ್ತು ಇತರ ಸದಸ್ಯರು ಒಂದೇ ಪಕ್ಷದವರಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಯಾವುದೇ ಹಂತದಲ್ಲಿ ರಾಜಕೀಯ ಪಕ್ಷದ ಪದಾಧಿಕಾರಿಯಾಗಿದ್ದಲ್ಲಿ ಅಂತಹವರ ಸದಸ್ಯತ್ವವು ಸಹಜವಾಗಿ ನಿಯಮಾನುಸಾರ ರದ್ದು ಮಾಡಲಾಗುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜೇನುಕಲ್ಲಮ್ಮ ದೇವಾಲಯವು ಶಿವಮೊಗ್ಗ ಜಿಲ್ಲೆಯ ಐತಿಹಾಸಿಕ ಹಾಗು ಪುರಾಣ ಪ್ರಸಿದ್ಧ ಸ್ಥಳವಾಗಿದ್ದು, ಜಿಲ್ಲೆಯ ಅನೇಕ ಕುಟುಂಬಗಳ ಆರಾಧ್ಯ ದೈವವಾಗಿದೆ.