Harsha Murder Case: ಶಿವಮೊಗ್ಗ ಘಟನೆ ರಾಜಕೀಯ ಬಳಕೆ ಸಲ್ಲದು: ಸಂಗಣ್ಣ
* ಕೊಲೆ ಮಾಡುವ ಹಂತಕ್ಕೆ ಹೋಗುವುದು ನೋವಿನ ಸಂಗತಿ
* ತಪ್ಪು ಯಾರೇ ಮಾಡಿದ್ದರೂ ಕಠಿಣ ಶಿಕ್ಷೆಯಾಗಬೇಕು
* ಕೋರ್ಟ್ ಆದೇಶ ಪಾಲಿಸಿ
ಕೊಪ್ಪಳ(ಫೆ.23): ಶಿವಮೊಗ್ಗದಲ್ಲಿ(Shivamogga) ನಡೆದ ಹಿಂದೂ(Hindu) ವ್ಯಕ್ತಿ ಹತ್ಯೆಯನ್ನು ರಾಜಕೀಯಕ್ಕೆ ಯಾರೂ ಬಳಸಿಕೊಳ್ಳಬಾರದು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಸಚಿವ ಕೆ.ಎಸ್. ಈಶ್ವರಪ್ಪ ಅವರ ಕುರಿತು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಂಸದ ಸಂಗಣ್ಣ ಕರಡಿ(Sanganna Karadi) ಆಕ್ಷೇಪಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಘಟನೆಯಿಂದ ಅತ್ಯಂತ ನೋವಾಗಿದೆ. ಕೊಲೆ ಮಾಡುವ ಹಂತಕ್ಕೆ ಹೋಗುವುದು ಅಮಾನವೀಯ. ತಮ್ಮಲ್ಲಿರುವ ವಿವಾದಗಳನ್ನು ಆಯಾ ಧರ್ಮಗುರುಗಳು ಮತ್ತು ಮೌಲ್ವಿಗಳ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಇದೆ. ಈ ರೀತಿ ದ್ವೇಷದಿಂದ ಕೊಲೆ(Murder) ಮಾಡುತ್ತಾರೆ ಎಂದರೆ ಏನರ್ಥ? ಇದನ್ನು ಯಾರೇ ಮಾಡಿದರೂ ಸಹಿಸಿಕೊಳ್ಳಲು ಆಗುವುದಿಲ್ಲ ಎಂದರು.
Koppal: ಅಂಜನಾದ್ರಿಗೆ ಹೋಗುವ ದಾರಿ ಯಾವುದಯ್ಯ?
ಕೊಲೆಯ ನಂತರವೂ ಹೇಳಿಕೆಯನ್ನು ಎಚ್ಚರಿಕೆಯಿಂದ ನೀಡಬೇಕೇ ವಿನಾ ಸಾಮಾಜಿಕ ಶಾಂತಿಯನ್ನು ಕದಡುವ ಮಾತು ಆಡಬಾರದು. ಕೊಲೆ ಮಾಡಿದವರು ಯಾರೇ ಆಗಿದ್ದರೂ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು ಎಂದ ಅವರು, ಸಂಸದ ಪ್ರತಾಪ ಸಿಂಹ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಆ ಕುರಿತು ಪ್ರತಿಕ್ರಿಯೆ ನೀಡಲಾರೆ. ಆದರೆ, ಇದೆಲ್ಲವೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾಧಿಸಿದರು.
ಕೋರ್ಟ್ ಆದೇಶ ಪಾಲಿಸಿ:
ಯಾರೇ ಆಗಲಿ ಕೋರ್ಟ್(Court) ಆದೇಶವನ್ನು ಪಾಲನೆ ಮಾಡಬೇಕು. ಕೋರ್ಟ್‌ಗಿಂತ ಯಾರೂ ದೊಡ್ಡವರು ಇಲ್ಲ. ಈಗಾಗಲೇ ಸಮವಸ್ತ್ರ ಧರಿಸುವಂತೆ ಮಧ್ಯಂತರ ಆದೇಶ ಹೊರಡಿಸಿದ್ದು, ಅದರನ್ವಯ ಪಾಲನೆ ಮಾಡಬೇಕು. ಅಂತಿಮ ತೀರ್ಪು ಬಂದ ಮೇಲೆ ಅದನ್ನು ಅನುಸರಿಸಬೇಕು. ವಿವಾದ ಮಾಡುವುದು, ಕೋರ್ಟ್ ಆದೇಶ ಧಿಕ್ಕರಿಸುವುದನ್ನು ಒಪ್ಪಲು ಆಗುವುದಿಲ್ಲ. ಈ ಕುರಿತು ಅದೇ ಧರ್ಮದ ಮುಖಂಡರು ಸಹ ತಿಳಿವಳಿಕೆಯನ್ನು ನೀಡಿದ್ದಾರೆ. ಕೋರ್ಟ್ ಆದೇಶ ಪಾಲನೆಗೆ ಮನವಿ ಮಾಡಿದ್ದಾರೆ ಎಂದರು.
ಕೊಪ್ಪಳದಲ್ಲಿ(Koppal) ಮಾಧ್ಯಮದವರ ಹಲ್ಲೆ ಯತ್ನ ನಡೆದಿರುವುದು ವಿಷಾದಕರ. ಮಾಧ್ಯಮದವರು ಸುದ್ದಿ ಮಾಡಲು ಅಲ್ಲಿಗೆ ಹೋಗಿರುತ್ತಾರೆ. ಅವರ ಮೇಲೆ ಎರಗುವುದು ಸರಿಯಲ್ಲ. ಈ ದಿಸೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಹನುಮಂತ ಎರಡೆರಡು ಬಾರಿ ಜನಿಸಿದನೇ?: ಸಂಸದ ಕರಡಿ
ಹನುಮಂತ (Anjaneya) ಎರಡೆರಡು ಬಾರಿ ಜನಿಸಿದನೇ? ಕಿಷ್ಕಿಂಧೆಯ ಅಂಜನಾದ್ರಿಯಲ್ಲಿಯೇ ಹನುಮ ಜನಿಸಿರುವ(Birth Place) ಕುರಿತು ಸಾಕಷ್ಟು ದಾಖಲೆ ಇದ್ದರೂ ಟಿಟಿಡಿಯವರು(TTD) ಯಾಕೆ ವಿವಾದ ಮಾಡುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಈ ಕುರಿತು ಹೇಳಿಕೆ ನೀಡಿ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯನ್ನು(Anjanadri) ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವುದಾಗಿ ಘೋಷಿಸಿದ್ದಾರೆ. ಮತ್ತೆ ಹನುಮನ ಜನ್ಮಸ್ಥಳ ವಿವಾದದ ಅಗತ್ಯವಿಲ್ಲ. ಆದರೂ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ಕುರಿತು ಸ್ಪಷ್ಟಪಡಿಸುವಂತೆ ಕೋರುತ್ತೇವೆ ಎಂದರು.
Union Budget ಪ್ರತಿಪಕ್ಷಕ್ಕೂ ಟೀಕಿಸದಂಥ ಸ್ಥಿತಿ: ಸಂಸದ ಕರಡಿ
ಜಿಲ್ಲೆಯ ಇತಿಹಾಸಕಾರರು(Historians) ಅನೇಕ ದಾಖಲೆ(Rocords) ನೀಡಿದ್ದಾರೆ. ಅದನ್ನು ಸರ್ಕಾರವೂ ಘೋಷಣೆ ಮಾಡಿದೆ. ಹೀಗಾಗಿ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ. ಇದರಲ್ಲಿ ಎರಡು ಮಾತಿಲ್ಲ ಎಂದರು.
ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು
ತಿರುಮಲ: ತಿರುಮಲ(Tirumala) ಬೆಟ್ಟದಲ್ಲಿರುವ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಾನ ಎಂಬ ಹೊಸ ವಾದ ಹುಟ್ಟುಹಾಕಿರುವ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ(Tirupati Tirumala Temple Board), ಇದೀಗ ಈ ಸ್ಥಳವನ್ನು ಆಂಜನೇಯನ ಜನ್ಮಸ್ಥಳವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಫೆ.15 ರಂದು ಭೂಮಿಪೂಜೆ ನಡೆಸಿದೆ.
ಕರ್ನಾಟಕದ(Karnataka) ಕೊಪ್ಪಳ(Koppal) ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟವು ಆಂಜನೇಯನ ಜನ್ಮಸ್ಥಾನವೆಂದು ಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಆದರೆ ಇದೀಗ ಟಿಟಿಡಿ ಹೊಸ ವಾದ ಮುಂದಿಟ್ಟು ತನ್ನ ತಿರುಪತಿ ಸಮೀಪದ ಅಂಜನಾದ್ರಿ ಬೆಟ್ಟವನ್ನು ಹಾಗೂ ಬಾಲ ಹನುಮಾನ್ ಮಂದಿರವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.