Asianet Suvarna News Asianet Suvarna News

ಪ್ರೋತ್ಸಾಹ ಧನದೊಂದಿಗೆ ಭತ್ತ ಖರೀದಿಗೆ ರೈತ ಸಂಘ ಆಗ್ರಹ

ಜಿಲ್ಲೆಯಾದ್ಯಂತ ರೈತರು ಬೆಳೆದಿರುವ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಈಗಾಗಲೇ ಕೊಯ್ಲು ಆರಂಭವಾಗಿದೆ. ಆದರೆ ಕೊರೋನಾ ಹಾವಳಿಯಿಂದಾಗಿ ಈಗಾಗಲೇ ಕೃಷಿ ಕ್ಷೇತ್ರ ಕಂಗೆಟ್ಟಿದೆ. ಹೀಗಾಗಿ ರೈತರಿಗೆ ಪ್ರೋತ್ಸಾಹ  ಧನ ವಿತರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Shivamogga Farmers Group Demands MSP For Paddy
Author
Shivamogga, First Published May 13, 2020, 11:39 AM IST

ಶಿವಮೊಗ್ಗ(ಮೇ.13): ಭತ್ತದ ಬೆಳೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬೆಲೆ ಸೇರಿಸಿ ರೈತರಿಂದ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಾದ್ಯಂತ ರೈತರು ಬೆಳೆದಿರುವ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಈಗಾಗಲೇ ಕೊಯ್ಲು ಆರಂಭವಾಗಿದೆ. ಆದರೆ ಕೊರೋನಾ ಹಾವಳಿಯಿಂದಾಗಿ ಈಗಾಗಲೇ ಕೃಷಿ ಕ್ಷೇತ್ರ ಕಂಗೆಟ್ಟಿದೆ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ, ಖರೀದಾರರು ಇಲ್ಲದೆ ರೈತರು ಕಂಗಾಲಾಗಿ ಹೋಗಿದ್ದಾರೆ. ಈ ಹಂತದಲ್ಲಿ ರೈತರು ಬೆಳೆದಿರುವ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಬೆಳೆದಿರುವ ಬೆಳೆ ಖರೀದಿ ಆಗುವುದೋ, ಇಲ್ಲವೋ ಎಂದು ರೈತರು ಚಿಂತೆಗೀಡಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬೆಲೆಯನ್ನೂ ಸೇರಿಸಿ ರೈತರಿಂದ ಭತ್ತವನ್ನು ಖರೀದಿಸಬೇಕು. ಆ ಮೂಲಕ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಭತ್ತ ಉತ್ಪಾದನೆಯಲ್ಲಿ ವಿಶೇಷತೆಯನ್ನು ಹೊಂದಿದೆ. ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೂ ಸಹ ಭತ್ತ ಹಾಗೂ ಅಕ್ಕಿಯನ್ನು ರಫ್ತು ಮಾಡುತ್ತಿದೆ. ಸರ್ಕಾರ ರೈತರು ಕಷ್ಟದಲ್ಲಿರುವ ಸಂದರ್ಭದಲ್ಲಿ ವಿಶೇಷ ಅನುದಾನ ಬೆಲೆಯನ್ನು ನೀಡಿ ಸಂಕಷ್ಟದ ಸಂದರ್ಭದಲ್ಲಿ ರೈತರಿಂದ ಭತ್ತ ಖರೀದಿಸುವುದರಿಂದ ರೈತರಿಗೆ ಅನುಕೂಲ ವಾಗುತ್ತದೆ. ಅಲ್ಲದೆ ಆಹಾರ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ದೇಶದ ಆಹಾರ ಭದ್ರತೆ ಕೂಡಾ ಹೆಚ್ಚಾಗುತ್ತದೆ ಎಂದು ಹೇಳಿದರು. ರಾಜ್ಯ ಸರ್ಕಾರ ರೈತರು ಬೆಳೆದಿರುವ ಭತ್ತಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಜೊತೆಗೆ ಕನಿಷ್ಠ 200 ರು.ಗಳನ್ನಾದರೂ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಕೆಂಪು ವಲಯವಿದ್ರೂ ಆರ್ಥಿಕ ಚಟುವಟಿಕೆಗೆ ಅಸ್ತು: ಡಿಸಿ ಮಹಾಂತೇಶ ಬೀಳಗಿ

ಜಿಲ್ಲೆಯಾದ್ಯಂತ ಕಟಾವಿಗೆ ಹಂತದಲ್ಲಿರುವ ಭತ್ತವನ್ನು ಕೊಯ್ಲು ಮಾಡಲು ಜಿಲ್ಲಾಧಿಕಾರಿಗಳು ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಾಳಜಿಯಿಂದಾಗಿ ಭತ್ತದ ಕಟಾವು ಯಂತ್ರ ಬಂದಿದೆ. ರೈತರ ಸಂಕಷ್ಟದ ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕೆಲವರು ರೈತರಿಂದ ಹೆಚ್ಚಿನ ದರವನ್ನು ಕಟಾವು ಯಂತ್ರಕ್ಕೆ ವಸೂಲಿ ಮಾಡುತ್ತಿದ್ದಾರೆ. ಮೊದಲೇ ರೈತರು ಸಂಕಷ್ಟದಲ್ಲಿದ್ದು. ಹೆಚ್ಚುವರಿ ಹಣ ಪಡೆಯುವುದರ ಮೂಲಕ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಭತ್ತ ಕಟಾವು ಯಂತ್ರಗಳಿಗೆ ನ್ಯಾಯಯುತ ದರ ನಿಗದಿ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್‌, ಪ್ರಮುಖರಾದ ಯಶವಂತರಾವ್‌ ಘೋರ್ಪಡೆ, ಹಿರಿಯಣ್ಣಯ್ಯ, ಶರಶ್ಚಂದ್ರ, ಜಗದೀಶ್‌ ನಾಯಕ್‌, ಸಣ್ಣ ರಂಗಪ್ಪ ಇದ್ದರು.
 

Follow Us:
Download App:
  • android
  • ios