ರೈತರಿಗೆ ಸಾಲ ಮನ್ನಾ ಬಂಪರ್ : ಎಷ್ಟು ಮೊತ್ತದವರೆಗೆ ಅನ್ವಯ..?

ರೈತರಿಗೆ ಇಲ್ಲಿಗೆ ಭರ್ಜರಿ ಗುಡ್ ನ್ಯೂಸ್ ನೀವು ಪಡೆದ ಸಾಲ ಮನ್ನಾ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಇಲ್ಲಿದೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ.

Shivamogga District Co operative Society Director Announced Farm Loan Waiver

ಶಿವಮೊಗ್ಗ [ಮಾ.14]: ಜಿಲ್ಲೆಯಲ್ಲಿನ ರೈತರು ಸಹಕಾರ ಸಂಘ/ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018 ಜುಲೈಗೆ ಹೊರ ಬಾಕಿ ಹೊಂದಿರುವ ಗರಿಷ್ಠ ರು. 1 ಲಕ್ಷದವರೆಗಿನ ಬೆಳೆ ಸಾಲದ ಮೊತ್ತವನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ. ರೈತರು ಸಂಬಂಧಪಟ್ಟಆಧಾರ್‌, ಪಡಿತರ ಚೀಟಿ ಮತ್ತು ಭೂಮಿ ದಾಖಲೆಗಳನ್ನು ಹಾಗೂ ಸ್ವಯಂ ದೃಢೀಕರಣ ಪತ್ರವನ್ನು ಸಂಬಂಧಪಟ್ಟಸಹಕಾರ ಸಂಘ/ಬ್ಯಾಂಕುಗಳಿಗೆ ಮಾಚ್‌ರ್‍ 25 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಅವಧಿಯಲ್ಲಿ ದಾಖಲೆ ಸಲ್ಲಿಸಲು ವಿಫಲರಾದಲ್ಲಿ ಅಂತಹ ರೈತರು ಸಾಲ ಮನ್ನಾ ಸೌಲಭ್ಯ ಪಡೆಯಲು ಅನರ್ಹತೆ ಹೊಂದುತ್ತಾರೆ. ಅಲ್ಲದೇ ಪಡಿತರ ಚೀಟಿಯನ್ನು ಹೊಂದಿಲ್ಲದೇ ಇರುವ ರೈತರು ಅಥವಾ ರೈತರು ಪಡಿತರ ಚೀಟಿ ಹೊಂದಿದ್ದರೂ ಚಾಲನೆಯಿಲ್ಲಿಲ್ಲದಿದ್ದರೆ ಅಂತಹವರೂ ಹೊಸ ಪಡಿತರ ಚೀಟಿಯನ್ನು ಪಡೆದು ಸಂಬಂಧಪಟ್ಟಸಹಕಾರ ಸಂಘಗಳಿಗೆ/ಬ್ಯಾಂಕುಗಳಿಗೆ ಮಾ. 25 ಸಲ್ಲಿಸಲು ಅಂತಿಮ ಅವಕಾಶವನ್ನು ನೀಡಲಾಗಿದೆ.

ರೈತ ಮಹಿಳೆ ಕಣ್ಣೀರಿಗೆ ಒಂದಿಷ್ಟು ಸಾಂತ್ವನ; ಸುವರ್ಣ ನ್ಯೂಸ್ ವರದಿಯಿಂದ ಸಂಚಲನ!...

ರೈತರು ಈ ಸದವಕಾಶವನ್ನು ಉಪಯೋಗಿಸಿಕೊಂಡು ನಿಗದಿತ ದಿನಾಂಕದೊಳಗೆ ಸಲ್ಲಿಸಿ ಸಾಲ ಮನ್ನಾ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios