ಶಿವಮೊಗ್ಗ- ಬಹುಕೋಟಿ ವಂಚನೆ : ಮಂಜುನಾಥ ಗೌಡ ವಿರುದ್ಧ ಎಫ್‌ಐಆರ್
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾರ್ಥ ಗೌಡ ವಿರುದ್ಧ ಎಫ್‌ಐ ಆರ್ ದಾಖಲಿಸಲಾಗಿದೆ.
ಶಿವಮೊಗ್ಗ (ಫೆ.27): ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದಿದ್ದು ನಕಲಿ ಬಂಗಾರ ಅಡಮಾನ ಸಾಲದ ಬಹುಕೋಟಿ ರು. ಹಗರಣಕ್ಕೆ ಸಂಬಂಧಿಸಿ ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ವಿರುದ್ಧ ನಗರದ ಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಂಜುನಾಥ ಗೌಡ ಮತ್ತು ಬ್ಯಾಂಕಿನ ಎಂಡಿ ರಾಜಣ್ಣ ರೆಡ್ಡಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಪಾಂಡುರಂಗ ಗರಗ್ ಆದೇಶ ನೀಡಿದ್ದಾರೆ.
'ಮಧು ಬಂಗಾರಪ್ಪಗೆ ಕಾಂಗ್ರೆಸ್‌ಗೆ ಸ್ವಾಗತ : ಆದರೆ ಮತ್ತೋರ್ವಗೆ ಪಕ್ಷದಲ್ಲಿ ಅವಕಾಶವಿಲ್ಲ' .
2004-05ರಿಂದ 15.07.2014 ನಡುವಿನ ಅವಧಿಯಲ್ಲಿ 490 ಸಾಲದ ಖಾತೆಗಳ ಮೂಲಕ ನಕಲಿ ಬಂಗಾರವನ್ನು ಅಡವಿಟ್ಟುಕೊಂಡು ಮತ್ತು 171 ಖಾತೆಗಳಲ್ಲಿ ಸುಮಾರು 63 ಕೋಟಿ ಸಾಲ ನೀಡಿ ಭಾರೀ ಅಕ್ರಮ ನಡೆಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಘಟನೆ 2014ರಲ್ಲಿ ಬೆಳಕಿಗೆ ಬಂದ ನಂತರ ಸಿಒಡಿ ತನಿಖೆ ನಡೆಸಿ ಆರೋಪಿಗಳಾದ ನಗರ ಶಾಖೆ ಮ್ಯಾನೇಜರ್ ಆಗಿದ್ದ ಶೋಭಾ, ಅಧ್ಯಕ್ಷರಾಗಿದ್ದ ಮಂಜುನಾಥ ಗೌಡ ಮತ್ತಿತರರನ್ನು ಬಂಧಿಸಲಾಗಿತ್ತು.