ಹಾವೇರಿ(ನ.21):ಜಿಲ್ಲೆಯ ಹಿರೇಕೆರೂರು ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಇಂದು(ಗುರುವಾರ) ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. 

ಬಳಿಕ ಮಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ನಾಮಪತ್ರ ವಾಪಸ್ಸು ಪಡೆದಿದ್ದೇನೆ. ನನ್ನ ಅಜೆಂಡಾಗೆ ಬಿಜೆಪಿ ಪಕ್ಷ ಒಪ್ಪಿದೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದ ಸ್ವಾಮೀಜಿ ಅವರು ಹೇಳಿದ್ದಾರೆ. 

ನಾಮಪತ್ರ ವಾಪಸ್ ಪಡೆಯುವ ಸಂಬಂಧ ಯಾಕೆ ಹೀಗೆ ಗೊಂದಲ ಸೃಷ್ಟಿಸಿದ್ರಿ ಎಂದು ಪತ್ರಕರ್ತತರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸ್ವಾಮೀಜಿ, ನಾನು ಹೇಳಿದ್ದನ್ನೂ ಪೂರಾ ನೀವೂ ತೋರಿಸ್ತೀರಾ, ಅವತ್ತು ಇಂಟರವ್ಯೂವ್ ಮಾಡಿದ್ರಿ ನಿಮಗೆ ಬೇಕಾದ್ದನ್ನು ಮಾತ್ರ ಹಾಕಿದ್ರಿ, ಮೊನ್ನೆ ನಾ ಹೇಳಿದ್ದೆ ಬೇರೆ ನೀವೂ ಹಾಕಿದ್ದೆ ಬೇರೆ, ಒಂದು ಸಮಯ ನಿಗದಿ ಮಾಡಿ ಸತ್ಯ ಸಂಗತಿನ ಹೇಳ್ತೇನೆ, ಆದರೆ ಎಲ್ಲವನ್ನು ಪ್ರಕಟ ಮಾಡ್ತೇವಿ ಅಂತಾ ಹೇಳಿದ್ರೆ  ನಾವು ಸತ್ಯ ಹೇಳಲು ಸಿದ್ದ ಎಂದು ಹೇಳಿದ್ದಾರೆ.

ನಾನು 32 ವರ್ಷದಿಂದ ಸೇವಾ ಕಾರ್ಯ ಮಾಡಿಕೊಂಡು ಬಂದಿದ್ದೇನೆ. ನಾನೇ ನಮ್ಮ ಮಠದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮತ್ತು ಯು ಬಿ ಬಣಕಾರಗೆ ಕ್ಲಾಸ್ ತಗೊಂಡಿದ್ದೇನೆ. ಮಾಧ್ಯಮಗಳಲ್ಲಿ ಸ್ವಾಮೀಜಿಗೆ ಕ್ಲಾಸ್ ಎಂದು ಬಂದಿದೆ ಎಂದು ಸ್ವಾಮೀಜಿ ಗರಂ ಆದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸ್ವಾಮೀಜಿ ಕೋಪಗೊಂಡು ಮಾತಾಡುತ್ತಿದ್ದ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರು ಸಮಾಧಾನ ಮಾಡಿ  ಸುಮ್ಮನೆ ಹೋಗಲಿ ಬಿಡಿ ಸ್ವಾಮೀಜಿ ಎಂದರು. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.