Asianet Suvarna News Asianet Suvarna News

10 ಕಡೆ​ ಡಾ.ಶಿ​ವ​ಕು​ಮಾ​ರ ​ಸ್ವಾ​ಮೀ​ಜಿ​ ಪುತ್ಥಳಿ ನಿರ್ಮಾಣ

10 ಸ್ಥಳಗಳಲ್ಲಿ ಶಿವಕುಮಾರಸ್ವಾಮೀಜಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗುತ್ತಿದೆ. 

Shivakumar Swamiji Statue To Put 10 place
Author
Bengaluru, First Published Oct 7, 2019, 11:17 AM IST

ಮಾಗಡಿ [ಅ.07]:  ರಾಮ​ನ​ಗರ ಜಿಲ್ಲೆಯಲ್ಲಿ 10 ಕಡೆಗಳಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಿಸಲು ಚಿಂತನೆ ನಡೆ​ಸ​ಲಾ​ಗಿದೆ ಎಂದು ಮಲ್ಲತ್ತಹಳ್ಳಿ ವೀರಶೈವ ಲಿಂಗಾಯಿತ ಬಳಗ ರಾಜ್ಯಾಧ್ಯಕ್ಷ ಪರಮಶಿವಯ್ಯ ಹೇಳಿದರು.

ತಾಲೂಕಿನ ಕಲ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಶೌಚಾಲಯ, ಸಂಪು ಮತ್ತು ಶಾಲಾ ಕೊಠಡಿಗಳ ಚುರುಕಿ ಹಾಕಿಸಲು ಶುಕ್ರವಾರ ಸ್ಥಳ ವೀಕ್ಷಿಸಿ ಮಾತನಾಡಿದರು.

ನಾಡಿಗೆ ಶಿಕ್ಷಣ, ಅನ್ನದಾಸೋಹ ನೀಡುವ ಮೂಲಕ ವಿಶ್ವವಿಖ್ಯಾತರಾದ ಸಿದ್ಧಗಂಗಾಶ್ರೀಗಳ ಪುತ್ಥಳಿಯನ್ನು ಜಿಲ್ಲೆಯ 10 ಕಡೆಗಳಲ್ಲಿ ನಿರ್ಮಿಸಿ ಅನಾವರಣಗೊಳಿಸಲು ಬಳಗದ ವತಿಯಿಂದ ತೀರ್ಮಾನಿಸಲಾಗಿದೆ ಎಂದ​ರು.

ಸರ್ಕಾರಿ ಶಾಲೆಗಳ ಉಳಿವಿಗಾಗಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಈಗಾಗಲೇ ರಾಮನಗರ ತಾಲೂಕಿನ ಹಿಂದುಳಿದ ಶಾಲೆಗಳಲ್ಲಿ ಮೂರು ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಇತರೆ ಕಾಮಗಾರಿಗಳನ್ನು ಮಲ್ಲತ್ತಹಳ್ಳಿ ವೀರಶೈವ ಲಿಂಗಾಯಿತ ಬಳಗದಿಂದ ಪ್ರಾರಂಭಿಸಲಾಗಿದೆ.

ಕಲ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಂದಿನ ಬುಧವಾರ ಎರಡು ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ನಂತರ ಹಂತ, ಹಂತವಾಗಿ ಶಾಲೆಯ ಸಂಪು, ಚುರುಕಿ ಹಾಕಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಲ್ಲತ್ತಹಳ್ಳಿ ವೀರಶೈವ ಲಿಂಗಾಯಿತ ಬಳಗ ನಿರ್ದೆಶಕ ವೀರಭದ್ರ ಮಾತನಾಡಿ, ಮುಚ್ಚುವ ಹಂತ​ದ​ಲ್ಲಿದ್ದ ಶಾಲೆ​ಯನ್ನು ಅಭಿ​ವೃದ್ಧಿ ಪಡಿ​ಸುವ ಮೂಲಕ ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗು​ತ್ತಿ​ದೆ. ಶಾಲೆಗಳಲ್ಲಿ ಶಾಲಾ ಕಟ್ಟಡದ ಕೊಠಡಿ ಸಮಸ್ಯೆ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಬಳಗದ ಅಧ್ಯಕ್ಷ ಪರಮಶಿವಯ್ಯ ಅವರು ಈ ಶಾಲೆಗೆ ಬಂದಿರುವುದು ಶ್ಲಾಘನೀಯ ಎಂದರು.

ಮಲ್ಲತ್ತಹಳ್ಳಿ ವೀರಶೈವ ಲಿಂಗಾಯಿತ ಬಳಗ ನಿರ್ದೆಶಕ ಪಂಚಾಕ್ಷರಯ್ಯ, ಚಕ್ರಭಾವಿ ಬಸವಣ್ಣ, ಸತೀಶ್‌, ಮೋಹನ್‌ ಕುಮಾರ್‌ , ವಿಜಯ್‌ ಕುಮಾರ್‌, ಪ್ರದೀಪ್‌,ಶಾಲೆಯ ಮುಖ್ಯ ಶಿಕ್ಷಕ ಪರಮೇಶ್‌, ಸಹ ಶಿಕ್ಷಕ ಹೂಜಗಲ್ಲು ನಾಗರಾಜು ಉಪ​ಸ್ಥಿ​ತ​ರಿ​ದ್ದ​ರು.

Follow Us:
Download App:
  • android
  • ios