ನಂಜಾವಧೂತ ಶ್ರೀಗೆ ಶಿರಾ ಕೋರ್ಟ್‌ನಿಂದ ಜಾಮೀನು

  • ಭೂ ವಿವಾದದ ಆರೋಪ ಎದುರಿಸುತ್ತಿರುವ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಶ್ರೀ
  • ನಂಜಾವಧೂತ ಶ್ರೀಗಳಿಗೆ ಶಿರಾ ನ್ಯಾಯಾಲಯ ಜಾಮೀನು
shira court grants bail for nanjavadutha swamiji snr

ತುಮಕೂರು (ಸೆ.14): ಭೂ ವಿವಾದದ ಆರೋಪ ಎದುರಿಸುತ್ತಿರುವ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಶ್ರೀಗಳಿಗೆ ಶಿರಾ ನ್ಯಾಯಾಲಯ ಜಾಮೀನು ನೀಡಿದೆ. 

ಪಟ್ಟನಾಯಕನಹಳ್ಳಿ ಗ್ರಾಮದ ಸುಮಾರು 250 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಂಜಾವಧೂತ ಶ್ರೀಗಳು ಸೇರಿ 7 ಮಂದಿ ವಿರುದ್ಧ ಕೃಷ್ಣಪ್ಪ ಎಂಬುವರು 2012ರಲ್ಲಿ ಶಿರಾ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. 

ರಾಜ್ಯದಲ್ಲಿ ರಾಜಕೀಯದ ಬಗ್ಗೆ ಕೋಡಿಮಠದ ಶ್ರೀಗಳಿಂದ ಮಹತ್ವದ ಭವಿಷ್ಯ

8 ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ 2020ರ ಸೆ.3ರಂದು ಕೇಸು ದಾಖಲಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ವಜಾಗೊಳಿಸುವಂತೆ ಕೋರಿ ಶ್ರೀಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಸೆ.1ರಂದು ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿತ್ತು. 

ಸೋಮವಾರ ಶ್ರೀಗಳು ಶಿರಾ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ 50 ಸಾವಿರ ರು. ಮೊತ್ತದ ಬಾಂಡ್‌ ಹಾಗೂ ಒಬ್ಬ ಜಾಮೀನುದಾರರನು ನೀಡುವಂತೆ ಸೂಚಿಸಿ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದೆ. ಕೃಷ್ಣಪ್ಪ ಪರ ತುಮಕೂರು ವಕೀಲರಾದ ಟಿ.ಎಸ್‌. ರವಿ ವಾದ ಮಂಡಿಸಿದ್ದರು.

Latest Videos
Follow Us:
Download App:
  • android
  • ios