ನಾನು ಈ ಹಿಂದೆ ಕರ್ನಾಟಕದಲ್ಲಿ ಸೂತ್ರಧಾರಿ ಸರ್ಕಾರ ನಡೆಯುತ್ತದೆ ಎಂದು ಹೇಳಿದ್ದೆ - ಅದರಂತೆ ಆಗಿದೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮಿಗಳ ಭವಿಷ್ಯ
ಶಿವಮೊಗ್ಗ (ಸೆ.12): ನಾನು ಈ ಹಿಂದೆ ಕರ್ನಾಟಕದಲ್ಲಿ ಸೂತ್ರಧಾರಿ ಸರ್ಕಾರ ನಡೆಯುತ್ತದೆ ಎಂದು ಹೇಳಿದ್ದೆ. ಆದರಂತೆ ಈಗ ರಾಜ್ಯದಲ್ಲಿ ಸೂತ್ರಧಾರಿ ಸರ್ಕಾರ ನಡೆಯುತ್ತಿದೆ, ಇದು ಮುಂದುವರಿಯುತ್ತದೆ ಎಂದು ಅರಸಿಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮಿಗಳು ನುಡಿದರು.
ನಗರಕ್ಕೆ ಸಮೀಪದ ಕುಂಚೇನಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ನಾನು ಹೇಳಿದಂತೆ ರಾಜ್ಯದಲ್ಲಿ ಯಡಿಯೂರಪ್ಪನವರು ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ. ಹೊಸದಾಗಿ ಅಧಿಕಾರಕ್ಕೆ ಬಂದವರು ಸೂತ್ರಧಾರಿ ಆಗಿರುತ್ತಾರೆ. ವಿವೇಕದಿಂದ ರಾಜ್ಯ ನಡೆಸುತ್ತಾರೆ. ಈ ಸೂತ್ರಧಾರಿ ಆಡಳಿತ ಮುಂದುವರಿಯುತ್ತದೆ ಎಂದು ಭವಿಷ್ಯ ನುಡಿದರು.
ಇನ್ನೂ ಕಾದಿದೆ ಘನಘೋರ ಆಪತ್ತು : ಕೋಡಿ ಸ್ವಾಮೀಜಿಯಿಂದ ಭಾರೀ ಎಚ್ಚರಿಕೆ
ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರು ಬುದ್ಧಿವಂತರಿದ್ದಾರೆ. ಉತ್ತಮ ರೀತಿಯಲ್ಲಿ, ವಿವೇಕದಿಂದ ರಾಜ್ಯ ಮುನ್ನಡೆಸುತ್ತಾರೆ. ಸದ್ಯಕ್ಕೆ ಈ ಸರ್ಕಾರಕ್ಕೆ ತೊಂದರೆ ಇಲ್ಲ. ಮುಂದೆ ನಾಲ್ಕೈದು ವರ್ಷಗಳಲ್ಲಿ ಈ ರೋಗ ರುಜಿನದಿಂದ ಮುಕ್ತಿ ಸಿಗಲಿದೆ ಎಂದು ಹೇಳಿದರು.
