ಶಿರಾ (ಅ.02):  ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬಾರದು ಎಂದು ಬಿಜೆಪಿಯವರೇ ಅಂದಿನ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಇಂದು ಅವರೇ ಮದಲೂರು ಕೆರೆಗೆ ನೀರು ಹರಿಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್‌ ಉಪಾಧ್ಯಕ್ಷ, ಕ್ರಿಪೊ್ಕೕ ಸಂಸ್ಥೆಯ ನಿರ್ದೇಶಕ ಆರ್‌.ರಾಜೇಂದ್ರ ತಿಳಿಸಿದರು.

ಅವರು ತಾಲೂಕಿನ ಮಾಗೋಡು ಗೊಲ್ಲರಹಟ್ಟಿಯ ಶ್ರೀ ಮಾಗೋಡು ಕಂಬದ ರಂಗನಾಥ ಸ್ವಾಮಿ ದೇಗುಲಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ಬಿಜೆಪಿಯವರು ಚುನಾವಣೆ ಬಂದಿದೆ ಎಂದು ಶಿರಾ ಕ್ಷೇತ್ರದಾದ್ಯಂತ ಓಡಾಡುತ್ತ ಕೇವಲ ಭರವಸೆಗಳನ್ನು ಕೊಡುತ್ತಿದ್ದಾರೆ. ಮದಲೂರು ಕೆರೆಗೆ ನೀರು ತರುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಬೇಕಾದ ಕಾಲುವೆ ಮಾಡಿದ್ದು ಯಾರು? ಕಾಲುವೆಯೇ ಇಲ್ಲದಿದ್ದರೆ ನೀರು ಹರಿಸಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದ ಅವರು ಈಗಾಗಲೇ ಅದಕ್ಕಾಗಿ ಶ್ರಮಪಟ್ಟಿರುವ ಟಿ.ಬಿ. ಜಯಚಂದ್ರ ಅವರನ್ನು ನೆನೆಯಬೇಕಿದೆ. ಅದನ್ನು ಬಿಟ್ಟು ಕೇವಲ ಈಗ ನೀರು ಹರಿಸುತ್ತೇವೆ ಎಂದು ಹೇಳುವುದು ಸಮಂಜಸವಲ್ಲ.

ಬಿಜೆಪಿ ಅಭ್ಯರ್ಥಿಯಿಂದ ನಕಲಿ ಮತದಾರರ ನೋಂದಣಿ ಆರೋಪ ...

ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಸುಮಾರು 2000 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಶಿರಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಯಾರು ಏನೇ ಹೇಳಲಿ, ಯಾವ ಪಕ್ಷ ಯಾರಿಗಾದರೂ ಟಿಕೆಟ್‌ ಕೊಡಲಿ ನಾವು ಕಾಂಗ್ರೆಸ್‌ ಪಕ್ಷದಿಂದ ಜಯಚಂದ್ರ ಅವರನ್ನು ಗೆಲ್ಲಿಸಲು ಶ್ರಮವಹಿಸುತ್ತೇವೆ ಹಾಗೂ ಗೆದ್ದೆ ಗೆಲ್ಲಿಸುತ್ತೇವೆ ಎಂದರು.

ಶಿರಾ ಚುನಾವಣೆ : ಈ ಮುಖಂಡಗೆ ಬಿಜೆಪಿ ಟಿಕೆಟ್‌ ?

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ರಾಮಚಂದ್ರಯ್ಯ, ಜಿ.ಎಸ್‌.ರವಿ, ಜಿ.ಎನ್‌.ಮೂರ್ತಿ, ಶಿರಾ ಅಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ನಾಗೇಶ್‌ ಬಾಬು, ತಾ.ಪಂ. ಮಾಜಿ ಅಧ್ಯಕ್ಷೆ ಸುವರ್ಣಮ್ಮ, ಮಾಜಿ ಸದಸ್ಯ ತಿಮ್ಮಣ್ಣ, ಅಜಯ್‌ಕುಮಾರ್‌, ಮುಕುಂದಪ್ಪ, ಚಿದಾನಂದ್‌, ಮಾಗೋಡು ಶ್ರೀರಂಗಪ್ಪ, ಗಿರೀಶ್‌, ನಾಗಣ್ಣ, ಜನಾರ್ಧನ್‌, ವಿಠ್ಠಲ್‌, ಧರಣಿಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು.