ಮಾಜಿ ಪ್ರಧಾನಿ ಎಚ್ ಡಿ ದೇದೇಗೌಡರ ಪುತ್ಥಳಿಗೆ ಮುಸುಕು ಹಾಕಲಾಗಿದೆ
ತುಮಕೂರು (ಅ.04): ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ತಿಪಟೂರು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಷ್ಠಾಪಿಸಿರುವ ಮಾಜಿ ಪ್ರಧಾನಿ ದೇವೇಗೌಡರ ಪುತ್ಥಳಿಗೆ ತಾಲೂಕು ಆಡಳಿತ ಮುಸುಕು ಹಾಕಿದೆ.
ತುಮಕೂರಿನಲ್ಲಿ ಚುನಾವಣಾ ಕಣ ಸಾಕಷ್ಟು ರಂಗೇರಿದೆ. ಶಿರಾದಲ್ಲಿ ಚುನಾವಣಾ ರಣತಂತ್ರ ಜೋರಾಗಿದೆ.
ಇಂದು ಡಿ.ಕೆ. ರವಿ ಪತ್ನಿ ಕಾಂಗ್ರೆಸ್ ಸೇರ್ಪಡೆ, ಟಿಕೆಟ್ ಯಾರಿಗೆ ಅನ್ನೋದು ನಿಗೂಢ! .
ಎಲ್ಲಾ ಪಕ್ಷಗಳು ಚುನಾವಣೆಯ ಗೆಲುವಿವಾಗಿ ಸಾಕಷ್ಟು ಹರಸಾಹಸ ಪಡುತ್ತಿವೆ. ಜೆಡಿಎಸ್ ಕ್ಷೇತ್ರ ಉಳಿಸಿಕೊಳ್ಳುವ ಯತ್ನದಲ್ಲಿ ತೊಡಗಿದ್ದರೆ. ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ಮುಂದುವರಿಸಿಕೊಳ್ಳಲು ನಡೆದಿದೆ. ಇನ್ನು ಬಿಜೆಪಿಗೆ ಪ್ರತಿಷ್ಠೆಯಾಗಿದೆ.
ಈ ಮೂಲಕ ಚುನಾವಣೆ ಗೆಲುವಿಗಾಗಿ ಎಲ್ಲಾ ಪಕ್ಷಗಳು ಸಾಕಷ್ಟು ರೀತಿಯಲ್ಲಿ ಯತ್ನ ನಡೆಸುತ್ತಿವೆ
