ಮಂಡ್ಯ  (ಅ.26):  ರಾಜ್ಯದಲ್ಲಿ ಉಪ ಚುನಾವಣೆ  ಕಣ ರಂಗೇರಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. 
 
ಅಭ್ಯರ್ಥಿಗಳೆಲ್ಲಾ ದೇವರುಗಳ ಮೊರೆ ಹೋಗುತ್ತಿದ್ದು, ಇದೀಗ ಶಿರಾ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ  ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 
  
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿರೊ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಶ್ರೀಗಳ ಆಶಿಜರ್ವಾದ ಪಡೆದುಕೊಂಡಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಸಂದರ್ಶನ: ಡಿ.ಕೆ. ರವಿ ಬಗ್ಗೆ ಮನದ ಮಾತು..!

ದಸರಾ ಹಿನ್ನಲೆ ಬೆಳ್ಳಂಬೆಳಗ್ಗೆ ದೇವಾಲಯಕ್ಕೆ ಆಗಮಿಸಿ  ಎರಡು ಗಂಟೆಗೂ ಹೆಚ್ಚು ಸಮಯ ಪೂಜೆ ಸಲ್ಲಿಸಿದ್ದಾರೆ.  ದಸರಾ ಹಿನ್ನಲೆಯಲ್ಲಿ ದೇವಾಲಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ  ಪೂಜಾ ಕೈಂಕರ್ಯದಲ್ಲಿ ರಾಜೇಶ್ ಗೌಡ ಪಾಲ್ಗೊಂಡಿದ್ದಾರೆ. 

ಕಾಲಭೈರವೇಶ್ವರನ ಪೂಜೆಯ ನಂತರ ಸ್ವಾಮೀಜಿಗಳ ಆಶೀರ್ವಾದವನ್ನೂ ಪಡೆದಿದ್ದು, ಬಿಜೆಪಿ ಅಭ್ಯರ್ಥಿಗೆ ಶಾಲು ಹೊದಿಸಿ ಶುಭವಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ.