ಅಯೋಧ್ಯೆಯಲ್ಲಿ ನೆಡಲು ಕರ್ನಾಟಕದ ನಿಡ್ಡೋಡಿಯ ನಾಗಲಿಂಗ ಗಿಡಗಳ ರವಾನೆ..!

ಕಿನ್ನಿಗೋಳಿ ಸಮೀಪದ ನಿಡ್ಡೋಡಿಯಲ್ಲಿ ವಿನೇಶ್‌ ಪೂಜಾರಿ ವೃಕ್ಷ ಪ್ರೇಮಿ. ವಿವಿಧ ರೀತಿಯ ಗಿಡಗಳ ಬೀಜಗಳು ಹಾಗೂ ಗಿಡಗಳನ್ನು ತಂದು ತಮ್ಮ ಜಾಗದಲ್ಲಿ ಪೋಷಿಸಿ ಅವಶ್ಯಕತೆಯಿರುವವರಿಗೆ ನೀಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯ ಹಲವಾರು ದೇವಸ್ಥಾನಗಳ ವಠಾರದಲ್ಲಿ ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿದ್ದಾರೆ.

Shipment of Nagalinga plants from Niddodi, Karnataka for planting in Ayodhya grg

ಮೂಲ್ಕಿ(ಸೆ.23): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮೆರುಗು ಹೆಚ್ಚಿಸಲು ನಿಡ್ಡೋಡಿಯ ವಿನೇಶ್‌ ಪೂಜಾರಿ ಅವರು ಅಭಿವೃದ್ಧಿ ಪಡಿಸಿದ ನಾಗ ಲಿಂಗ ಗಿಡಗಳು ಕೊರಿಯರ್‌ ಮೂಲಕ ರವಾನೆಯಾಗಿವೆ. ಗಿಡಗಳು ಅಯೋಧ್ಯೆ ರಾಮ ಮಂದಿರದ ಆಡಳಿತ ಮಂಡಳಿಗೆ ದೊರಕಿದ್ದು, ಅಧಿಕಾರಿಗಳಿಂದ ದೂರವಾಣಿ ಮೂಲಕ ಪ್ರಶಂಸೆ ಬಂದಿದೆ. ಜೊತೆಗೆ ನಾಗಲಿಂಗ ಗಿಡವನ್ನು ನೂತನ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ತಿಳಿಸಿದ್ದಾರೆ.

ಕಿನ್ನಿಗೋಳಿ ಸಮೀಪದ ನಿಡ್ಡೋಡಿಯಲ್ಲಿ ವಿನೇಶ್‌ ಪೂಜಾರಿ ವೃಕ್ಷ ಪ್ರೇಮಿ. ವಿವಿಧ ರೀತಿಯ ಗಿಡಗಳ ಬೀಜಗಳು ಹಾಗೂ ಗಿಡಗಳನ್ನು ತಂದು ತಮ್ಮ ಜಾಗದಲ್ಲಿ ಪೋಷಿಸಿ ಅವಶ್ಯಕತೆಯಿರುವವರಿಗೆ ನೀಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯ ಹಲವಾರು ದೇವಸ್ಥಾನಗಳ ವಠಾರದಲ್ಲಿ ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿದ್ದಾರೆ.

ಬರೀ 20 ಕಿಮೀ ದೂರ ಪ್ರಯಾಣಕ್ಕೆ ಒಂದು ಟ್ರೇನ್‌ಗೆ 45 ನಿಮಿಷ, ಇನ್ನೊಂದು ರೈಲಿಗೆ 2 ಗಂಟೆ, ಏನು ಕಾರಣ?

ಹಲವಾರು ಜಾತಿಯ ಗಿಡಗಳು ಅವರಲ್ಲಿದ್ದು ದಕ್ಷಿಣ ಅಮೇರಿಕಾದಲ್ಲಿ ಬೆಳೆಯುವಂತಹ ನಾಗಲಿಂಗ ವೃಕ್ಷದ (ಕೆನೊನ್‌ ಬಾಲ್‌ ಟ್ರೀ) ಬೀಜವನ್ನು ಮಂಗಳೂರಿನಿಂದ ತಂದು ಅವರು ಗಿಡಗಳನ್ನು ಅಭಿವೃದ್ಧಿ ಪಡಿಸಿದ್ದರು. ನಾಗಲಿಂಗ ವೃಕ್ಷವು ನಾಗಲಿಂಗದ ರೀತಿಯ ಹೂವು ಬಿಡುವ ದೊಡ್ಡ ವೃಕ್ಷವಾಗಿದ್ದು ಅಯೋಧ್ಯೆಯಲ್ಲಿ ನೆಡಬೇಕೆಂಬ ಆಶಯವನ್ನು ಅವರು ಹೊಂದಿದ್ದರು. ಈ ಬಗ್ಗೆ ಅಂತರ್ಜಾಲ ಸಹಾಯದಿಂದ ಅಯೋಧ್ಯ ದೇವಸ್ಥಾನ ಆಡಳಿತ ಮಂಡಳಿಯನ್ನು ಅವರು ಸಂಪರ್ಕಿಸಿದಾಗ, ಅಯೋಧ್ಯೆಯಿಂದ ಗಿಡಗಳನ್ನು ಕಳುಹಿಸಲು ಸೂಚನೆ ಬಂದಿತ್ತು.

ಅದರಂತೆ ಸೆ. 5 ರಂದು 5 ಗಿಡಗಳನ್ನು ಕೊರಿಯರ್‌ ಮೂಲಕ ಕಳುಹಿಸಿದ್ದರು. ಕೆಲವು ದಿನಗಳ ಬಳಿಕ ಅಲ್ಲಿನ ಅಧಿಕಾರಿಗಳಿಂದ ದೂರವಾಣಿ ಕರೆ ಬಂದಿದ್ದು ಗಿಡ ಸಿಕ್ಕಿದ್ದು ಗಿಡವನ್ನು ಆಯೋಧ್ಯೆಯ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ಹಾಗೂ ಬಳಿಕ ಚಿತ್ರವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ವಿನೇಶ್‌ ಈವರೆಗೆ ಸುಮಾರು 3000 ಕ್ಕೂ ಮಿಕ್ಕಿ ನಾಗಲಿಂಗ ವೃಕ್ಷ ಗಿಡಗಳನ್ನು ಉಚಿತವಾಗಿ ಹಂಚಿದ್ದಾರೆ.

ಕಳೆದ ಕೆಲವು ಸಮಯಗಳಿಂದ ನಾಗಲಿಂಗ ವೃಕ್ಷವನ್ನು ಬೆಳೆಸಿ ಕರ್ನಾಟಕದ ಶಿವಮೊಗ್ಗ, ಕೋಲಾರ, ರಾಯಚೂರು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಉಚಿತವಾಗಿ ನೀಡಿದ್ದೇನೆ. ಅಯೋಧ್ಯೆಯಲ್ಲಿ ಗಿಡ ನೆಡುವ ಉದ್ದೇಶ ಹೊಂದಿದ್ದು ಈ ಬಗ್ಗೆ ಇಂಟರ್‌ ನೆಟ್‌ ಮೂಲಕ ಸಂಪರ್ಕಿಸಿದಾಗ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕಳುಹಿಸಲು ತಿಳಿಸಿದ್ದರು. ಅದರಂತೆ ಕೊರಿಯರ್‌ ಮೂಲಕ ಕಳುಹಿಸಿದ್ದು ಗಿಡಗಳು ತಲುಪಿದ ಬಳಿಕ ಅಧಿಕಾರಿಗಳು ದೂರವಾಣಿ ಮೂಲಕ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ ವೃಕ್ಷಪ್ರೇಮಿ ವಿನೇಶ್‌ ಪೂಜಾರಿ. 

Latest Videos
Follow Us:
Download App:
  • android
  • ios