ಶಿವಮೊಗ್ಗವಿನ್ನು ರಾಷ್ಟ್ರೀಯ ಭದ್ರತೆಯ ಪಾಠಶಾಲೆ! ರಕ್ಷಾ ವಿವಿಗೆ ನಾಳೆ ಚಾಲನೆ!
ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿವಿ ಆರಂಭವಾಗುತ್ತಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ನಾಳೆ ಕೇಂದ್ರದ ಮತ್ತು ರಾಜ್ಯದ ಗೃಹ ಸಚಿವರು ವರ್ಚುವಲ್ ಮೂಲಕ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ಶಿವಮೊಗ್ಗ (ಮಾ.23) : ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿವಿ ಆರಂಭವಾಗುತ್ತಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ನಾಳೆ ಕೇಂದ್ರದ ಮತ್ತು ರಾಜ್ಯದ ಗೃಹ ಸಚಿವರು ವರ್ಚುವಲ್ ಮೂಲಕ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ಶಿವಮೊಗ್ಗದಲ್ಲಿ ಎಂಟು ಎಕರೆ ಜಾಗವನ್ನು ತೆಗೆದಿರಿಸಲಾಗಿದೆ. ಮುಂದಿನ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತರಗತಿಗಳು ಆರಂಭವಾಗಲಿವೆ. ಈ ರಕ್ಷಾ ವಿವಿಯ ಕೋರ್ಸ್ ಗಳಿಗೆ ಎರಡು ಸಾವಿರ ರೂಗಳಿಂದ 55,000 ಗಳವರೆಗೆ ಶುಲ್ಕ ಇದೆ. ಸೈಬರ್ ಕ್ರೈಂ ಸೇರಿದಂತೆ ರಾಷ್ಟ್ರೀಯ ಭದ್ರತೆಯ ವಿಚಾರ ಕೋರ್ಸ್ ಕಲಿಸಲಾಗುತ್ತದೆ ಎಂದರು.
ವಿಶ್ವವೇ ಪ್ರಧಾನಿ ಮೋದಿ ನಾಯಕತ್ವ ಒಪ್ಪಿದೆ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದ ಗೃಹ ಸಚಿವರು ಇಂಥದೊಂದು ವಿಶ್ವವಿದ್ಯಾಲಯವನ್ನು ರಾಜ್ಯಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿ ಈ ವಿಶ್ವವಿದ್ಯಾಲಯದ ಕೇಂದ್ರವಿದೆ. ಇದೀಗ ದೇಶದಲ್ಲಿ ಇದು ನಾಲ್ಕನೇ ರಕ್ಷಾ ವಿಶ್ವವಿದ್ಯಾಲಯವಾಗಿದೆ ಎಂದರು.
ರಾಷ್ಟ್ರೀಯ ಭದ್ರತಾ ಪಡೆಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಇಲ್ಲಿಂದ ತರಬೇತಿ ಹೊಂದಿದ ಯುವಕರ ನೇಮಕಾತಿ ನಡೆಯುತ್ತದೆ. ಸುಮಾರು 50 ಕೋಟಿ ವೆಚ್ಚದಲ್ಲಿ ನೂತನ ರಕ್ಷಾ ವಿವಿಯ ಕ್ಯಾಂಪಸ್ ಸಿದ್ಧಗೊಳ್ಳಲಿದ್ದು, ಬಿ ಕೆಟಗರಿಯ ಸೈನ್ಸ್ ಸೆಂಟರ್ ಸಹ ಆರಂಭಗೊಳ್ಳಲಿದೆ ಎಂದರು.
ಇನ್ನು ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇನ್ನು ಹದಿನೈದು ದಿನಗಳಲ್ಲಿ ವಿಮಾನ ಯಾನ ಶುರು ಆಗಲಿದೆ. ಪ್ರಧಾನಿ ನರೇಂದ್ರ ಮೋದಿಯ(PM Narendra Modi)ವರ ವಿಮಾನ ನಾಡಿದ್ದು ಶಿವಮೊಗ್ಗ ವಿಮಾನ ನಿಲ್ದಾಣ(Shivamogga airport)ದಲ್ಲಿ ಬಂದಿಳಿಯಲಿದೆ ಎಂದರು.
ಸಿಎಂ ಆಗಿದ್ದಾಗ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಾಗಿದೆ: ಬಿಎಸ್‌ವೈ
ಇಂಡಿಗೋ ಏರ್ಲೈನ್ಸ್(Indigo) ಅವರು ಇನ್ನೊಂದು ವಾರದಲ್ಲಿ ವಿಮಾನಯಾನ ಶುರು ಮಾಡಲಿದ್ದಾರೆ. ಸದ್ಯ ಶಿವಮೊಗ್ಗ ಬೆಂಗಳೂರು ಪ್ರತಿನಿತ್ಯ ವಿಮಾನ ಹಾರಾಟ ನಡೆಯಲಿದೆ ಎಂದರು. ಇದೇ ವೇಳೆ ತಾಳಗುಪ್ಪ ಗ್ರಾಮದಲ್ಲಿ ಅರಣ್ಯ ಒತ್ತುವರಿಯ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.