Asianet Suvarna News Asianet Suvarna News

Dharwad News: ಮರೀಚಿಕೆಯಾದ ಸರ್ಕಾರದ ಸಹಾಯಧನ!

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿ ಆಶ್ರಯ ಮನೆ ನಿರ್ಮಿಸಿಕೊಂಡ 500ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೂರು ವರ್ಷಗಳಿಂದ ಸಹಾಯಧನ ಸರಿಯಾಗಿ ಬಾರದೇ ಮನೆಗಳು ಅಪೂರ್ಣಗೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

Shelter subsidy is not available Awas yajane kalaghatagi rav
Author
Hubli, First Published Aug 22, 2022, 12:19 PM IST

ಕಲಘಟಗಿ (ಆ.22) : ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿ ಆಶ್ರಯ ಮನೆ ನಿರ್ಮಿಸಿಕೊಂಡ 500ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೂರು ವರ್ಷಗಳಿಂದ ಸಹಾಯಧನ ಸರಿಯಾಗಿ ಬಾರದೇ ಮನೆಗಳು ಅಪೂರ್ಣಗೊಂಡಿರುವ ಸಂಗತಿ ಪಟ್ಟಣದಲ್ಲಿ ನಡೆದಿದೆ. ವಾಜಪೇಯಿ ಅವಾಸ್‌ ಯೋಜನೆ(Vajapeyi Awas Yojane) ಹಾಗೂ ಪ್ರಧಾನಮಂತ್ರಿ, ರಾಜೀವ ಗಾಂ​ಧಿ ಅವಾಸ್‌ ಯೋಜನೆ(Rajeev Gandhi Awas Yajane)ಯಡಿಯ ಫಲಾನುಭವಿಗಳು ಹಣ ಜಮೆಯಾಗುತ್ತದೆ ಎಂದು ಮನೆ ನಿರ್ಮಾಣ ಆರಂಭಿಸಿದ್ದು,

Chitradurga; ಆಶ್ರಯ ಮನೆ ಯೋಜನೆಯಲ್ಲಿ ಗೋಲ್ ಮಾಲ್, ಕವಾಡಿಗರ ಹಟ್ಟಿಯಲ್ಲಿ ಪ್ರತಿಭಟನೆ

ಬಹುತೇಕ ಅಪೂರ್ಣಗೊಂಡಿವೆ. ಸಾಕಷ್ಟುಫಲಾನುಭವಿಗಳಿಗೆ ಒಂದೂ ರುಪಾಯಿ ಜಮೆಯಾಗದೆ ಸಾಲದ ಸುಳಿಗೆ ಸಿಲುಕಿದ್ದಾರೆ. ಬಡವರು ಸರ್ಕಾರದ ಸಹಾಯಧನ ಇಂದು-ನಾಳೆ ಬರಲಿದೆ ಎಂಬ ಭರವಸೆಯ ಮೂಲಕ ವಿವಿಧ ಖಾಸಗಿ ಹಾಗೂ ಫೈನಾನ್ಸ್‌ ಬ್ಯಾಂಕ್‌ ಮೂಲಕ ಸಾಲ ಪಡೆದು ಒಂದು ಹಂತದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಮೂರು ವರ್ಷಗಳಿಂದ ಹಣ ಬಾರದೇ ದಿನಾಲೂ ಪಟ್ಟಣ ಪಂಚಾಯಿತಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನು ಕೆಲವರು ಬಾಡಿಗೆ ಮನೆಯಲ್ಲಿ ಇದ್ದವರು ಸಮಯಕ್ಕೆ ಸರಿಯಾಗಿ ಹಣ ಬಾರದೆ ಇದ್ದಿದ್ದರಿಂದ ಬಾಡಿಗೆ ಕಟ್ಟಲು ಆಗದೆ ಸಾಲ ಮಾಡಿ ಹಣ ಪಡೆದು ಗೋಗರೆಯುತ್ತಿದ್ದಾರೆ.

ಚಿತ್ರದುರ್ಗ: ಬಡವರ ಆಶ್ರಯ ಮನೆ ಯೋಜನೆಯಲ್ಲೂ ಅಕ್ರಮದ ವಾಸನೆ

ಸರ್ಕಾರದ ಸಹಾಯಧನ ಬರಲಿದೆ ಎಂದು ಕೈಗಡ ಸಾಲ ಪಡೆದವರ ಮನೆ ಪೂರ್ಣಗೊಳ್ಳುತ್ತಿಲ್ಲ. ಸರ್ಕಾರ ನಮ್ಮ ಖಾತೆಗೆ ಹಣ ಜಮಾ ಮಾಡಬೇಕೆಂದು ಪಟ್ಟಣದ ಜೋಶಿ ಓಣಿಯ ಮೋದಿನಾಬಿ ರೂಸ್ತುಮಸಾಬ್‌ ನನ್ನೆನ್ನವರ ಹಾಗೂ ಶಾಹಿನ್‌ ರಫೀಕ್‌ ನನ್ನೆನ್ನವರ ಅಳಲು ತೋಡಿಕೊಂಡಿದ್ದಾರೆ. ಬಡ್ಡಿಸಾಲ ತಂದು ಆಭರಣಗಳನ್ನು ಒತ್ತೆ ಇಟ್ಟು ಮನೆ ನಿರ್ಮಾಣ ಮಾಡಿದ್ದೇವಿ, ಎರಡು ಮೂರು ವರ್ಷ ಕಳೆದರೂ ಸರ್ಕಾರದಿಂದ ಸರಿಯಾಗಿ ಬರಬೇಕಾದ ಅನುದಾನ ಇದುವರೆಗೂ ಬಂದಿಲ್ಲ. ಮನೆ ನಿರ್ಮಾಣ ಮಾಡಿ ನೆಮ್ಮದಿ ಇಲ್ಲದಂತಾಗಿದೆ ಮತ್ತು ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಶ್ರಯ ಮನೆ ಪಡೆದ ಕಲಘಟಗಿಯ ಫಲಾನುಭವಿ ಸಂತೋಷ ಕೂಡಲಗಿ ಗೋಳು ತೋಡಿಕೊಂಡರು.

ಪಟ್ಟಣದಲ್ಲಿ ಮನೆಗಳನ್ನು ನಿರ್ಮಿಸಿಕೊಂಡ 500 ಕುಟುಂಬಗಳ ಫಲಾನುಭವಿಗಳ ಖಾತೆಗೆ .4 ಕೋಟಿಗೂ ಹೆಚ್ಚಿನ ಹಣ ಬಂದಿದೆ. ಇನ್ನೂ ಉಳಿದ ಬಾಕಿ ಹಣ ಸಧ್ಯದಲ್ಲಿ ಬರಲಿದೆ. ಈಗ ನಿರ್ಮಿಸಿದ ಮನೆಗಳ ಜಿಪಿಎಸ್‌ ಮಾಡಿ ಕಳುಹಿಸಲಾಗಿದೆ. ಆದರೆ ಸರ್ಕಾರದಿಂದ ಅನುದಾನ ಮುಂಜೂರ ಆಗಬೇಕಿದೆ.

ವೈ.ಜಿ. ಗದ್ದಿಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

Follow Us:
Download App:
  • android
  • ios