Asianet Suvarna News Asianet Suvarna News

ಬಿರುಸಿನ ರಾಜಕೀಯ : ಈಗಲೇ ಸಿದ್ಧರಾಗಿ ಎಂದ ಶಾಸಕ ಶರತ್ ಬಚ್ಚೇಗೌಡ

ಮುಂದಿನ ರಾಜಕೀಯಕ್ಕೆ ಈಗಲೇ ಸಿದ್ಧರಾಗಿ ಎಂದು ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ

Sharath Bachegowda Speaks About Grama Panchayat Election Preparation  snr
Author
Bengaluru, First Published Nov 23, 2020, 11:51 AM IST

ಸೂಲಿಬೆಲೆ (ನ.23):  ಕೆಲವೆ ದಿನಗಳಲ್ಲಿ ಗ್ರಾ.ಪಂ. ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಗ್ರಾಮಗಳಲ್ಲಿ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದ್ದಾರೆ.

ಕಾರ್ಯಕರ್ತರು ಈಗಿನಿಂದಲೇ ಉತ್ತಮ ವ್ಯಕ್ತಿಗಳ ಆಯ್ಕೆಯ ಜೊತೆಗೆ ಚುನಾವಣೆಗೆ ಸಿದ್ದರಾಗಬೇಕು ಎಂದು ಸೂಚಿಸಿದರು. ಸೂಲಿಬೆಲೆ ಹೋಬಳಿ ನಾನಾ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲ್ಲಿ ಪೂಜೆ ನಡೆಸಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ ಜನರಿಗೆ ಅನುಕೂಲವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಕೊಂಡು ಬರುತ್ತಿದ್ದು, ಭಾನುವಾರ ಎಂಟು ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ತೆನೆಯೂರು ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಚಿಕ್ಕರಳಿಗೆರೆ ಗ್ರಾಮದಲ್ಲಿ ಸಿಸಿ ರಸ್ತೆ, ದ್ಯಾವಸಂದ್ರ ಗ್ರಾಮದಲ್ಲಿ ನೂತನ ಡೈರಿ ಕಟ್ಟಡ, ಗುಳ್ಳಹಳ್ಳಿ, ದೊಡ್ಡ ಕೋಲಿಗ, ಚಿಕ್ಕ ಕೋಲಿಗ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿ ನಗರೇನಹಳ್ಳಿಯಲ್ಲಿ ಸುಮಾರು 1.50 ಲಕ್ಷ ಲೀಟರ್‌ ಸಾಮರ್ಥ್ಯ ಹೊಂದಿರುವ ನೀರು ಸಂಗ್ರಹ ಸಂಪು ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮಗಳಲ್ಲಿರುವ ಜನರ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೈನುಗಾರಿಕೆ ಹೊಸಕೋಟೆ ತಾಲೂಕಿನ ಪ್ರಮುಖ ಆರ್ಥಿಕ ಚಟುವಟಿಕೆ ಕಸುಬಾಗಿದೆ ಎಂದರು.

ಕರ್ನಾಟಕ ರಾಜಕೀಯದಲ್ಲಿ 'ಜೋಡೆತ್ತು' ಹೊಯ್ತು ಜೋಡಿ ಹುಲಿ ಬಂತು...! .

ಬಮುಲ್‌ ಮಾಜಿ ಅಧ್ಯಕ್ಷ ಸಿ.ಮಂಜುನಾಥ್‌ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ ಡೈರಿಗಳಿಗೆ ಹಾಲು ಬಮೂಲ್‌ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗಿದೆ. ಹಾಲು ಉತ್ಪಾದಕರ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ತಂದು ಜಾರಿ ಮಾಡಲಾಗಿದೆ. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಗ್ರಾಮಸ್ಥರು ಮುಂದಾಗಬೇಕು ಎಂದರು.

ಹಿರಿಯ ಮುಖಂಡ ಬಿ.ಎನ್‌ ಗೋಪಾಲಗೌಡ ಸಹಕಾರ ಬ್ಯಾಂಕ್‌ ಅಧ್ಯಕ್ಷ ಬಿ.ವಿ ಸತೀಶ್‌ ಗೌಡ,ಯುವ ಮುಖಂಡ ಬಿ.ಜಿ ನಾರಾಯಣಗೌಡ, ತಾಪಂ ವಿಪಕ್ಷ ನಾಯಕ ಡಿ.ಟಿ.ವೆಂಕಟೇಶ್‌, ಯಾದವ ಮಹಾಸಭಾ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ಕಂಬಳೀಪುರ ದೇವರಾಜ್‌, ಗುಳ್ಳಹಳ್ಳಿ ಮುನಿಯಪ್ಪ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Follow Us:
Download App:
  • android
  • ios