ಹೊಸಕೋಟೆ (ಜ.28):  ಖಾಸಗಿ ಶಾಲೆಗಿಂತ ಭಿನ್ನವಾಗಿ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ತಾಲೂಕಿನ ರಾಳಕುಂಟೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪೋಷಕರಿಗೆ ಆಂಗ್ಲ ಭಾಷೆಯ ವ್ಯಾಮೋಹ ಹಾಗೂ ಸರ್ಕಾರಿ ಶಾಲೆಗಳ ಮೇಲಿನ ಕೀಳರಿಮೆ ವ್ಯಾಪಕವಾಗಿ ಕಾಡುತ್ತಿರುವ ಪರಿಣಾಮ ಮಕ್ಕಳನ್ನು ಗ್ರಾಮದ ಶಾಲೆಗಳಿಗೆ ದಾಖಲಿಸದೆ, ಲಕ್ಷಾಂತರ ರು. ಖರ್ಚು ಮಾಡಿ ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ನುರಿತ ತರಬೇತಿಯುಕ್ತ ಶಿಕ್ಷಕರನ್ನು ನೇಮಿಸುವುದರ ಜೊತೆಗೆ ಕಾಲಕಾಲಕ್ಕೆ ಸರ್ಕಾರ ಅಗತ್ಯ ತರಬೇತಿ ನೀಡುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ಉಚಿತ ಶೈಕ್ಷಣಿಕ ಸವಲತ್ತುಗಳ ಜೊತೆಗೆ ಆಂಗ್ಲಭಾಷೆ ಸಹ ಸರ್ಕಾರಿ ಶಾಲೆಗಳಿಗೆ ಲಭ್ಯವಾಗುತ್ತಿದೆ. ಇವೆಲ್ಲವನ್ನು ಅರಿತು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿ. ಇದರಿಂದ ವಾಷಿಕ ಕನಿಷ್ಠ 50 ಸಾವಿರ ಪೋಷಕರಿಗೆ ಉಳಿತಾಯ ಆಗಲಿದೆ. ಜೊತೆಗೆ ಸರ್ಕಾರಿ ಶಾಲೆ ಉಳಿವು ಸಾಧ್ಯವಾಗುತ್ತದೆ ಎಂದರು.

ಶೀಘ್ರ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾದ ಶಾಸಕ, ಬಿಜೆಪಿ ಮುಖಂಡರ ಪುತ್ರ ...

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಪ್ರತಿ ವ್ಯಕ್ತಿಗೆ ನೀಡುತ್ತಿದ್ದ 10 ಕೆ.ಜಿ. ಅನ್ನಭಾಗ್ಯ ಅಕ್ಕಿಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಡಿತಗೊಳಿಸಿ ಕೇವಲ 5 ಕೆ.ಜಿ. ಕೊಡುತ್ತಿದೆ. 

ಸರ್ಕಾರವನ್ನು ನಾವು ಪ್ರಶ್ನೆ ಮಾಡಲು ಆಗೊಲ್ಲ. ಆದ್ದರಿಂದ ಜನಪ್ರತಿನಿಧಿಗಳಾದ ನೀವು ವಿಧಾನಸೌಧದಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಎಂದು ರಾಳಕುಂಟೆ ಗ್ರಾಮದ ಹಿರಿಯ ಮುಖಂಡರು ಶಾಸಕರನ್ನು ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶರತ್‌ ಬಚ್ಚೇಗೌಡ, ನಾನು ಎಂದಿಗೂ ಬಡವರ ಪರ ನ್ಯಾಯದ ಪರ ಕೆಲಸ ಮಾಡಲಿದ್ದು, ನಾಳೆಯಿಂದ ಅಧಿವೇಶನ ಪ್ರಾರಂಭ ಆಗಲಿದ್ದು, ಅದಿವೇಶನದಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡುತ್ತೇನೆ. ಅನ್ನಭಾಗ್ಯ ಅಕ್ಕಿ ವಿತರಣೆ ಮಾಡುವಂತೆ ಒತ್ತಡ ಹಾಕುತ್ತೇನೆ ಎಂದರು.