ವರದಿ : ಎಂ.ಅ​ಫ್ರೋಜ್ ಖಾನ್‌

ರಾಮ​ನ​ಗರ (ಡಿ.11):  ಗ್ರಾಮ ಪಂಚಾ​ಯಿತಿ ಚುನಾ​ವ​ಣೆ​ಯಲ್ಲಿ ನಾಮ​ಪತ್ರ ಸಲ್ಲಿ​ಸಲು ಒಂದು ದಿನ​ವಷ್ಟೇ ಬಾಕಿ ಉಳಿ​ದಿದೆ. ನಾಮ​ಪತ್ರ ಸಲ್ಲಿ​ಸಿ​ರುವ ಹಾಗೂ ಸಲ್ಲಿ​ಸಲು ಸಿದ್ಧ​ವಾ​ಗಿ​ರುವ ಆಕಾಂಕ್ಷಿ​ಗಳು ಅದೃ​ಷ್ಟದ ಚಿಹ್ನೆ​ಗ​ಳನ್ನು ಪಡೆ​ಯಲು ಕಾತ​ರ​ರಾ​ಗಿ​ದ್ದಾ​ರೆ.

ಈ ಚುನಾ​ವಣೆ ಮೂಲಕ ರಾಜ​ಕೀಯ ಪ್ರವೇ​ಶಿ​ಸಲು ಇಚ್ಛಿ​ಸು​ತ್ತಿ​ರುವ ಆಕಾಂಕ್ಷಿ​ಗಳು ಸ್ಪರ್ಧೆಗೆ ಬಿರು​ಸಿನ ಸಿದ್ಧತೆ ನಡೆ​ಸು​ತ್ತಿ​ದ್ದಾರೆ. ಚುನಾ​ವ​ಣೆ​ಯಲ್ಲಿ ಅಭ್ಯ​ರ್ಥಿ​ಗ​ಳಾ​ಗು​ವ​ವರು ಅದೃ​ಷ್ಟದ ಚಿಹ್ನೆ​ಗ​ಳನ್ನು ಆಯ್ಕೆ ಮಾಡು​ತ್ತಿ​ದ್ದಾರೆ. ಮತ​ದಾ​ರರು ಸುಲ​ಭ​ವಾಗಿ ನೆನ​ಪಿ​ನಲ್ಲಿ ಇಟ್ಟು​ಕೊ​ಳ್ಳಲು ಅನು​ಕೂ​ಲ​ವಾ​ಗು​ವಂತೆ ಹೆಚ್ಚು ಪ್ರಸಿ​ದ್ಧಿ ಪಡೆ​ದಿ​ರುವ ಚಿಹ್ನೆ​ಗ​ಳನ್ನೇ ಈಗಾ​ಗಲೇ ನಾಮ​ಪತ್ರ ಸಲ್ಲಿ​ಸಿ​ರುವ ಅಭ್ಯ​ರ್ಥಿ​ಗಳು ಗುರು​ತಿ​ಸಿ​ದ್ದಾರೆ. ಕಡೆ ದಿನ​ವಾದ ನಾಳೆ ಉಮೇ​ದು​ವಾ​ರಿಕೆ ಸಲ್ಲಿ​ಸ​ಲಿ​ರುವ ಆಕಾಂಕ್ಷಿ​ಗಳು ಚಿಹ್ನೆ​ಗ​ಳನ್ನು ಆರಿ​ಸಿ​ಕೊ​ಳ್ಳುವ ಪ್ರಕ್ರಿ​ಯೆ​ಯಲ್ಲಿ ನಿರ​ತ​ರಾ​ಗಿ​ದ್ದಾ​ರೆ.

ರಾಜ್ಯ ಚುನಾ​ವಣಾ ಆಯೋಗ 194 ಮುಕ್ತ ಚಿಹ್ನೆ​ಗಳ ಪಟ್ಟಿಪ್ರಕ​ಟಿ​ಸಿದೆ. ಇದ​ರಲ್ಲಿ ಕಹಳೆ ಊದು​ತ್ತಿ​ರುವ ಮನುಷ್ಯ ಚಿಹ್ನೆ, ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತ , ಆಟೋ, ಟೀವಿ, ವಜ್ರ, ಕ್ಯಾಮೆರಾ, ಗ್ಯಾಸ್‌ ಒಲೆ, ಕರಣಿ, ಕುಕ್ಕರ್‌, ತೆಂಗಿನ ತೋಟ, ಬ್ಯಾಟರಿ, ಟೆಲಿ​ಫೋನ್‌, ಉಂಗುರ ಸೇರಿ​ದಂತೆ ಇನ್ನು ಕೆಲವು ಗುರು​ತು​ಗಳು ಹೆಚ್ಚು ಪ್ರಚ​ಲಿ​ತ​ದ​ಲ್ಲಿವೆ. ಗ್ರಾಮ ಪಂಚಾ​ಯಿತಿ ಚುನಾ​ವಣೆ ರಾಜ​ಕೀ​ಯ ಪಕ್ಷದ ಬೆಂಬ​ಲದ ಜೊತೆಗೆ ಸ್ಥಳೀ​ಯ​ವಾ​ಗಿ​ರುವ ಸಂಬಂಧ, ನೆಂಟ​ಸ್ಥಿಕೆ, ಜನ​ಪ​ರತೆ ಆಧಾ​ರದ ಮೇಲೆ ಸೋಲು ಗೆಲುವನ್ನು ನಿರ್ಧ​ರಿ​ಸು​ತ್ತದೆ. ಇದ​ರೊಂದಿಗೆ ಚಿಹ್ನೆಯ ಪಾತ್ರವೂ ಅಷ್ಟೇ ಪ್ರಮು​ಖ​ವಾ​ಗಿದೆ.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...

ಅಭ್ಯ​ರ್ಥಿ​ಗಳು ಆರಿ​ಸಿ​ಕೊ​ಳ್ಳುವ ಚಿಹ್ನೆ ಜನ​ಪ್ರಿ​ಯತೆ ಮತ್ತು ಆಕ​ರ್ಷಕವಾಗಿ​ದ್ದರೆ ಗೆಲುವು ಇನ್ನಷ್ಟುಸುಲ​ಭ​ವಾ​ಗ​ಲಿದೆ ಎಂಬು​ದರ ಮೇಲೂ ಹಲ​ವ​ರಿಗೆ ನಂಬಿ​ಕೆ​ಯಿದೆ. ಹೀಗಾಗಿ ಮುಕ್ತ ಚಿಹ್ನೆ​ಗ​ಳೊ​ಳಗೆ ಸೇರಿ​ಕೊಂಡಿ​ರುವ ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತ, ಕಹಳೆ ಊದು​ತ್ತಿ​ರುವ ಮನುಷ್ಯ ಚಿಹ್ನೆ ಹೆಚ್ಚಿನ ಮಹತ್ವ ಪಡೆ​ದು​ಕೊಂಡಿದೆ ಎಂದು ಹೇಳ​ಲಾ​ಗು​ತ್ತಿದೆ.

ಜೆಡಿ​ಎಸ್‌ ಬೆಂಬ​ಲಿ​ತ​ರಿಂದ ಟ್ರ್ಯಾಕ್ಟರ್‌ ಗೆ ಬೇಡಿಕೆ:

ಗ್ರಾಮ ಪಂಚಾ​ಯಿತಿ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಬೆಂಬ​ಲ​ದೊಂದಿಗೆ ಸ್ಪರ್ಧೆ ಮಾಡು​ತ್ತಿ​ರುವ ಬಹು​ತೇಕ ಸ್ಪರ್ಧಿ​ಗಳು ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತನ ಚಿಹ್ನೆ​ಗಾಗಿ ಬೇಡಿಕೆ ಇಡು​ತ್ತಿ​ದ್ದಾರೆ. ​ಜೆ​ಡಿ​ಎಸ್‌ ತೆನೆ ಹೊತ್ತ ಮಹಿಳೆ ಚಿಹ್ನೆ ಹೊಂದಿ​ರು​ವು​ರಿಂದ ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತನ ಸಿಂಬಲ್‌ ದೊರೆ​ತರೆ ಮತ​ದಾ​ರ​ರಿಗೆ ತಾನು ಜೆಡಿ​ಎಸ್‌ ಬೆಂಬಲಿತ ಅಭ್ಯರ್ಥಿ ಎಂಬು​ದನ್ನು ಸು​ಲ​ಭ​ವಾಗಿ ಮನ​ವ​ರಿಕೆ ಮಾಡಿ​ಕೊ​ಡ​ಬ​ಹುದು ಎಂದು ಭಾವಿ​ಸಿ​ದ್ದಾರೆ.

ಕಹಳೆ ಗುರು​ತಿಗೆ ಹೆಚ್ಚಿದ ಮಹ​ತ್ವ:

ಮುಕ್ತ ಚಿಹ್ನೆ​ಗಳ ಪಟ್ಟಿ​ಯಲ್ಲಿರುವ ಕಹಳೆ ಊದು​ತ್ತಿ​ರುವ ಮನು​ಷ್ಯನ ಚಿಹ್ನೆಯತ್ತಲೂ ಹೆಚ್ಚಿ​ನ​ವರು ಆಸಕ್ತಿ ತೋರು​ತ್ತಿ​ದ್ದಾರೆ. ಕಳೆದ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಮಂಡ್ಯ ಕ್ಷೇತ್ರ​ದಲ್ಲಿ ಚಿತ್ರ​ನಟಿ ಸುಮ​ಲತಾ ಅವರು ಇದೇ ಚಿಹ್ನೆ ಇಟ್ಟು​ಕೊಂಡು ಸ್ಪರ್ಧಿ​ಸಿ​ದ್ದರು. ರೋಚ​ಕತೆ ಸೃಷ್ಟಿಸಿ ಎಲ್ಲರ ಗಮನ ಸೆಳೆ​ದಿದ್ದ ಆ ಚುನಾ​ವ​ಣೆ​ಯಲ್ಲಿ ಸುಮ​ಲತಾ ಅವ​ರಿಗೆ ಕಹಳೆ ಊದು​ತ್ತಿ​ರುವ ಮನು​ಷ್ಯನ ಚಿಹ್ನೆ ಗೆಲು​ವಿನ ಅದೃಷ್ಟತಂದು​ಕೊ​ಟ್ಟಿತು. ಅದೇ ಗೆಲು​ವಿನ ಅದೃ​ಷ್ಟ​ವನ್ನು ತಮಗೂ ತಂದು​ಕೊ​ಡ​ಬ​ಹು​ದೆಂಬ ನಂಬಿಕೆ ಅನೇಕ ಅಭ್ಯ​ರ್ಥಿ​ಗ​ಳ​ಲ್ಲಿದೆ. ಹಾಗಾಗಿ ಈ ಚಿಹ್ನೆ​ಯಡಿ ಸ್ಪರ್ಧಿ​ಸಲು ಹೆಚ್ಚಿ​ನ​ವರು ಆಸಕ್ತಿ ತೋರು​ತ್ತಿ​ದ್ದಾರೆ.

ಅಭ್ಯ​ರ್ಥಿ​ಗ​ಳಿಗೆ ನಿರಾಸೆ:

ಅನ್ಯ ರಾಜ್ಯ​ಗ​ಳ್ಲಲಿ ನೋಂದಾ​ಯಿತ ಮಾನ್ಯತೆ ಪಡೆದ ಪಕ್ಷ​ಗಳು ಕಾರು, ಬೈಸಿ​ಕಲ್‌, ಸೀಲಿಂಗ್‌ ಫ್ಯಾನ್‌, ಆನೆ, ತೆಂಗಿನ ಕಾಯಿ, ನೇಗಿಲು, ಬಿಲ್ಲು -ಬಾಣ, ಬಾಣ, ಕಿರೀಟ, ಏಣಿ, ತಕ್ಕಡಿ, ಉದ​ಯಿ​ಸು​ತ್ತಿ​ರುವ ಸೂರ್ಯ, ಕೊಡೆ, ಎರಡು ಎಲೆ​ಗಳು, ಕಾರು​ಸೇ​ರಿ​ದಂತೆ ಹಲವು ಗುರು​ತು​ಗ​ಳನ್ನು ಹೊಂದಿವೆ.

ಇವು ಆಕ​ರ್ಷ​ಣೀಯ ಚಿಹ್ನೆ​ಗ​ಳಾ​ಗಿ​ದ್ದರೂ ಗ್ರಾಪಂ ಚುನಾ​ವ​ಣೆ​ಗ​ಳಲ್ಲಿ ಅಭ್ಯ​ರ್ಥಿ​ಗ​ಳಾ​ಗು​ವ​ವ​ರಿಗೆ ನೀಡ​ಲಾ​ಗು​ವು​ದಿಲ್ಲ. ಇದು ಹಲ​ವ​ರಲ್ಲಿ ನಿರಾ​ಸೆ​ಯನ್ನೂ ಉಂಟು ಮಾಡಿದೆ. ಅಭ್ಯ​ರ್ಥಿ​ಗಳು ಮುಕ್ತ ಚಿಹ್ನೆ​ಗ​ಳ​ಲ್ಲಿ​ರುವ ಗುರು​ತು​ಗ​ಳನ್ನು ಮಾತ್ರ ಆಯ್ಕೆ ಮಾಡಿ​ಕೊ​ಳ್ಳಲು ಅವ​ಕಾ​ಶ​ವಿದೆ. ಕರ್ನಾ​ಟಕ ಸೇರಿ​ದಂತೆ ಬೇರೆ ರಾಜ್ಯ​ಗ​ಳಲ್ಲಿ ಮಾನ್ಯತೆ ಪಡೆದ ಪಕ್ಷ​ಗ​ಳಿಗೆ ನೀಡ​ಲಾ​ಗಿ​ರುವ ಚಿಹ್ನೆ​ಗ​ಳನ್ನು ಆಯ್ಕೆ ಮಾಡಿ​ಕೊ​ಳ್ಳು​ವು​ದಕ್ಕೆ ಅವ​ಕಾ​ಶ​ವಿಲ್ಲ ಎಂದು ಚುನಾ​ವ​ಣಾ​ಧಿ​ಕಾ​ರಿ​ಗಳು ‘ಕನ್ನ​ಡ​ಪ್ರ​ಭ‘ಕ್ಕೆ ಪ್ರತಿ​ಕ್ರಿ​ಯೆ ನೀಡಿ​ದ​ರು.