Asianet Suvarna News Asianet Suvarna News

ಕಾಂಗ್ರೆಸ್ - ಶರತ್ ಬಚ್ಚೇಗೌಡ ಮೈತ್ರಿ ಒಲಿದ ಅಧಿಕಾರ

ರಾಜ್ಯದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ - ಶರತ್ ಬಚ್ಚೇಗೌಡ ಮೈತ್ರಿಗೆ ಗೆಲುವಾಗಿದೆ. 

Sharat Bachegowda Party Got Power in Hosakote TAPCMS Election snr
Author
Bengaluru, First Published Oct 27, 2020, 12:49 PM IST

ಹೊಸಕೋಟೆ (ಅ.27):  ತಾಲೂಕು ಸೊಸೈಟಿಯ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿ, ಎಲ್ಲ ನಿರ್ದೇಶಕರನ್ನು ಗಣನೆಗೆ ತೆಗೆದುಕೊಂಡು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಟಿಎಪಿಸಿಎಂಎಸ್‌ ನೂತನ ಅಧ್ಯಕ್ಷ ಎ.ಮಂಜುನಾಥ್‌ ತಿಳಿಸಿದರು. ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘ (ಟಿಎಪಿಸಿಎಂಎಸ್‌) ದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಸಂಘದ ಎಲ್ಲಾ ನಿರ್ದೇಶಕರು ನಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ನನ್ನನ್ನು, ಉಪಾಧ್ಯಕ್ಷರಾಗಿ ಎಚ್‌.ಕೆ.ರಮೇಶ್‌ ಅವಿರೋಧವಾಗಿ ಆಯ್ಕೆ ಮಾಡಿದ್ಧಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಸಂಘದ ಸರ್ವತೋಮುಖ ಅಭಿವೃದ್ದಿಗೆ ದುಡಿಯುತ್ತೇನೆ. ಸರ್ಕಾರದಿಂದ ಬರುವ ಸವಲತ್ತುಗಳನ್ನು ಬಡವರಿಗೆ ತಲುಪಿಸುವ ಕೆಲಸವನ್ನು ಸಹ ಮಾಡಲಾಗುವುದು ಎಂದರು.

'ಹಿಂದಿನ ಸರ್ಕಾರ ಬೀಳಿಸೋದ್ರಲ್ಲಿ ನಾನು ವಿಲನ್ ಅಲ್ಲ, ನನ್ನದೇನಿದ್ರೂ ಹೀರೋ ಪಾತ್ರ' ...

ಅಭಿವೃದ್ಧಿಗೆ ಶ್ರಮಿಸಲಿ:  ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ ಅ.18ರಂದು ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ವಾಭಿಮಾನಿ ಹಾಗೂ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಎಲ್ಲಾ 11 ಸ್ಥಾನಗಳಿಗೂ ಆಯ್ಕೆಯಾಗಿದ್ದರು. ಎ.ಮಂಜುನಾಥ್‌ ಹೊಸಕೊಟೆ ಟೌನ್‌ ಮತ್ತು ಕಸಬಾ ಹೋಬಳಿ ಕ್ಷೇತ್ರದಿಂದಲೂ, ಎಚ್‌.ಕೆ.ರಮೇಶ್‌ ಜಡಿಗೇನಹಳ್ಳಿ ಮತ್ತು ಅನುಗೊಂಡನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇಂದು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಿ ಎಂದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಶರತ್‌ ಬಚ್ಚೇಗೌಡ, ಮುಖಂಡರಾದ ಟಿ.ಸೊಣ್ಣಪ್ಪ, ಬಿ.ಎನ್‌.ಗೋಪಾಲಗೌಡ, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ಮಂಜುನಾಥ್‌, ಸಂಘದ ನಿರ್ದೇಶಕರಾದ ಎಂ.ಬಾಬುರೆಡ್ಡಿ, ಹನುಮಂತೇಗೌಡ, ಸಿ.ಮುನಿಯಪ್ಪ, ಎಚ್‌.ವಿ.ಆಂಜಿನಪ್ಪ, ಆರ್‌.ರವೀಂದ್ರ, ನಾಗರಾಜ, ಸವಿತ, ಎನ್‌.ಸುರೇಶ್‌, ಪಿ.ರಾಣಿ, ಎಂ.ಭತ್ಯಪ್ಪ ಅಭಿನಂದಿಸಿದ್ದಾರೆ.

Follow Us:
Download App:
  • android
  • ios