ಕಲಬುರಗಿ[ಸೆ. 13]  ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶರಣನಗೌಡ ಕಂದಕೂರ ಹೊಸ ಬಾಂಬ್ ಸಿಡಿಸಿದ್ದಾರೆ.  ಆಪರೇಷನ್ ಕಮಲದ ಆಡಿಯೋ ಕೇಸ್ ರೀ ಓಪನ್ ಮಾಡಲು ಬಿಜೆಪಿ ಆಫರ್ ನೀಡಿದ್ದಾರೆ ಎನ್ನುವುದು ಕಂದಕೂರ ಅವರ ಆರೋಪ.

ಯಡಿಯೂರಪ್ಪ ಅವರಿಗೆ ನನ್ನ ಮುಖಾಂತರ ಬಿಜೆಪಿಗರೇ ಕುಣಿ ತೊಡಿದ್ದಾರೆ. ಗುರುಮಠಕಲ್ ನಲ್ಲಿ ಮಾತನಾಡಿ ಬಿಜೆಪಿ ಅಗ್ರಗಣ್ಯ ನಾಯಕರೊಬ್ಬರು ಕೇಸ್ ರಿ ಓಪನ್ ಮಾಡಲು ಕೇಳಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಸೇರಲು ಸಜ್ಜಾದರಾ ರಾಜ್ಯದ ಕಾಂಗ್ರೆಸ್ ಶಾಸಕ?

ಬಿಎಸ್ ಯಡಿಯೂರಪ್ಪ  ಹಿಂದೆ ಆಪರೇಶನ್ ಕಮಲ ಮಾಡುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ಆಮಿಷ ನೀಡಿದ್ದರು ಎಂದು ಆರೋಪಿಸಿದ್ದ  ಶರಣನಗೌಡ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಸ್ವತಃ ಸಿಎಂ ಕುಮಾರಸ್ವಾಮಿ ಪಕ್ಕದಲ್ಲಿ ಕೂರಿಸಿಕೊಂಡು ಆಡಿತೋ ಬಿಡುಗಡೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.