ಸಚಿವ ಜಮೀರ್ ಬಂಟನಿಗೆ ಸಾರ್ವಜನಿಕರ ಗೂಸಾ! ಬಡ್ಡಿ ಹಣದ ಕೊಡದವರಿಗೆ ಮಂಚಕ್ಕೆ ಕರೆಯುತ್ತಿದ್ದ ಹಿದಾಯತ್! ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಸಾನಿಯಾ ಖಾನ್! ಹಿದಾಯತ್ ನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
ಬೆಂಗಳೂರು(ಆ.10): ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಬಂಟನೋರ್ವ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ನಡೆದಿದೆ.
ಬಡ್ಡಿ ಧಂಧೆ ನಡೆಸುವ ಜಮೀರ್ ಬಂಟ ಹಿದಾಯತ್ ಖಾನ್, ಬಡ್ಡಿ ಕೊಡದಿದ್ದರೆ ಹೆಣ್ಣುಮಕ್ಕಳನ್ನು ಮಂಚಕ್ಕೆ ಕರೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಹಣದ ಅವಶ್ಯಕತೆ ಇರುವವರಿಗೆ ಶೇ. 30 ರಷ್ಟು ಬಡ್ಡಿ ಆಧಾರದ ಮೇಲೆ ಸಾಲ ಕೊಡುತ್ತಿದ್ದ ಹಿದಾಯತ್, ಅದನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಮನೆಯ ಹೆಣ್ಣುಮಕ್ಕಳನ್ನು ತನ್ನ ಮನೆಗೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಚಾಮರಾಜಪೇಟೆಯ ಟಿಪ್ಪು ನಗರದ ನಿವಾಸಿಯಾಗಿರುವ ಹಿದಾಯತ್ ವಿರುದ್ಧ ಹಾನೇಕ ಹೆಣ್ಣುಮಕ್ಕಳ ಜೀವನ ಹಾಳು ಮಾಡಿದ ಆರೋಪ ಕೆಳಿ ಬಂದಿದೆ. ಬಡ್ಡಿಗೆ ಸಾಲ ನೀಡಿ ಅದನ್ನು ಕೊಡಲು ಸಾಧ್ಯವಾಗದ ಹೆಣ್ಣುಮಕ್ಕಳನ್ನು ಮಂಚಕ್ಕೆ ಕರೆಯುತ್ತಿದ್ದ ಹಿದಾಯತ್, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸಾನಿಯಾ ಖಾನ್ ಎಂಬ ಮಹಿಳೆ, ಹಿದಾಯತ್ ಅನೇಕ ಹೆಣ್ಣುಮಕ್ಕಳ ಜೀವನ ಹಾಳು ಮಾಡಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೇ ಇದೇ ಕಾರಣಕ್ಕೆ ಸಾರ್ವಜನಿಕರು ತಿಲಕ್ ನಗರದಲ್ಲಿರುವ ಹಿದಾಯತ್ ಮನೆಗೆ ನುಗ್ಗಿ ಆತನಿಗೆ ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೇವಲ ಹೆಣ್ಣುಮಕ್ಕಳಲ್ಲದೇ ಅಪ್ರಾಪ್ತ ಬಾಲಕಿಯರ ಮೇಲೂ ಹಿದಾಯತ್ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ.
