Asianet Suvarna News Asianet Suvarna News

ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷಕ ಅಮಾನತು

ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಪ್ರಕರಣದಡಿ ತಾಲೂಕಿನ ರಂಟವಳಲು ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಲಕ್ಷ್ಮೀಕಾಂತನನ್ನು ಮಧುಗಿರಿ ಡಿಡಿಪಿಐ ಎಂ.ಆರ್‌.ಮಂಜುನಾಥ್‌ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

Sexual assault case: Teacher suspended snr
Author
First Published Nov 30, 2023, 8:47 AM IST

ಮಧುಗಿರಿ:ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಪ್ರಕರಣದಡಿ ತಾಲೂಕಿನ ರಂಟವಳಲು ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಲಕ್ಷ್ಮೀಕಾಂತನನ್ನು ಮಧುಗಿರಿ ಡಿಡಿಪಿಐ ಎಂ.ಆರ್‌.ಮಂಜುನಾಥ್‌ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಶಿಕ್ಷಕ ಶಾಲೆಯಲ್ಲಿ ಓದುತ್ತಿರುವ ಕೆಲ ಹೆಣ್ಣು ಮಕ್ಕಳೊಂದಿಗೆ ಕೆಟ್ಟ ಭಾಷೆ ಉಪಯೋಗಿಸಿ ಬಲವಂತವಾಗಿ ಅಂಗಾಂಗ ಸ್ಪರ್ಶಿಸುವುದು ಮತ್ತು ಈ ಬಗ್ಗೆ ಎಲ್ಲಿಯೂ ಪ್ರಚಾರ ಮಾಡಬೇಡಿ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿ, ಹಣ ಕೊಡುವುದು, ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಮಕ್ಕಳು ತಮ್ಮ ಪೋಷಕರಲ್ಲಿ ಹೇಳಿದ್ದಾರೆ.

ಪೋಷಕರು ಇಲಾಖಾ ಅಧಿಕಾರಿಗಳಿಗೆ ನೀಡಿರುವ ದೂರಿನ ಮೇರೆಗೆ ಬಡವನಹಳ್ಳಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಪಾದನೆಗಳ ಬಗ್ಗೆ ವಿಚಾರಣೆ ಹಾಗೂ ಸೂಕ್ತ ಶಿಸ್ತು ಕ್ರಮ ಕಾಯ್ದಿರಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಗೊಳಿಸಿ ಆದೇಶಿಸಲಾಗಿದೆ ಎಂದು ಡಿಡಿಪಿಐ ಮಂಜುನಾಥ್‌ ತಿಳಿಸಿದ್ದಾರೆ.

ತಾಯಿ ಪ್ರೇಮಿಗಳಿಂದ ಮಕ್ಕಳ ಹತ್ಯೆ

ತಿರುವನಂತಪುರ: ಕೇರಳದ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಮಹಿಳೆಯೋರ್ವಳಿಗೆ 40 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ.  ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ರಕ್ಷಣೆ ಕಾಯ್ದೆಯಡಿ ಕೇರಳದ ನ್ಯಾಯಾಲಯ ಈ ಶಿಕ್ಷೆ ವಿಧಿಸಿದ್ದು, ಈ ಪ್ರಕರಣದ ಹಿನ್ನೆಲೆ ಅರಿತರೇ ನಿಜಕ್ಕೂ ನಾಗರಿಕ ಸಮಾಜ ಗಾಬರಿಯಾಗುವುದು ಪಕ್ಕಾ. 

ಈ ಪ್ರಂಪಚದಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಮಾತ್ರ ಇರಲಾರಳು ಎಂಬ ಲೋಕೋಕ್ತಿ ಇದೆ. ಯಾರ ಋಣ ತೀರಿಸಿದರೂ ತಾಯಿ ಋಣ ತೀರಿಸಲಾಗದು ಎಂಬ ಮಾತಿದೆ. ಇದಕ್ಕೆ ಕಾರಣ ಮಕ್ಕಳಿಗಾಗಿ ತಾಯಿ ಮಾಡುವ ತ್ಯಾಗ ಹಾಗೂ ಕರುಳ ಕುಡಿಯ ಮೇಲೆ ಇರುವ ಆಕೆಯ ನಿಷ್ಕಲ್ಮಶ  ಪ್ರೇಮ ಆದರೆ ಕೇರಳದಲ್ಲಿ ಇದೆಲ್ಲದ್ದಕ್ಕೆ ತದ್ವಿರುದ್ಧವಾದ ಘಟನೆ 2018ರಲ್ಲಿ ನಡೆದಿತ್ತು. ತಾಯಿಯೊಬ್ಬಳು ತನ್ನ ಗೆಳೆಯರಿಂದಲೇ ತನ್ನದೇ ಅಪ್ರಾಪ್ತ ಮಕ್ಕಳಿಬ್ಬರ ಮೇಲೆ ಅತ್ಯಾಚಾರವೆಸಗಲು ಸಹಕರಿಸಿದ್ದಳು.. ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳದ ಫಸ್ಟ್ ಟ್ರ್ಯಾಕ್ ನ್ಯಾಯಾಲಯ ಈ ಕೆಟ್ಟ ತಾಯಿಗೆ 20 ಸಾವಿರ ದಂಡದ ಜೊತೆಗೆ 40 ವರ್ಷದ ಕಠಿಣ ಸಜೆಗೆ ಆದೇಶಿಸಿದೆ. 

ಅಂದು ಆಗಿದ್ದೇನು?
ವರದಿಯ ಪ್ರಕಾರ ಮಾರ್ಚ್‌ 2018ರಿಂದ ಸೆಪ್ಟೆಂಬರ್ 2019ರ ನಡುವೆ ಈ ಘಟನೆ ನಡೆದಿತ್ತು. ಆರೋಪಿ ತಾಯಿ ತನ್ನ ಮಾನಸಿಕ ಅಸ್ವಸ್ಥ ಗಂಡನನ್ನು ತೊರೆದು ಹೋಗಿ ತನ್ನ ಗೆಳೆಯ ಶಿಶುಪಾಲನ್ ಎಂಬಾತನೊಂದಿಗೆ ವಾಸ ಮಾಡಲು ಶುರು ಮಾಡಿದ್ದಳು. ಈ ಸಮಯದಲ್ಲೇ ತಾಯಿಯ ಪ್ರೇಮಿ ಶಿಶುಪಾಲ ಮಕ್ಕಳ ಪಾಲಿಗೆ ಶಿಶುಕಾಮಿಯಾಗಿದ್ದ. ಮಹಿಳೆಯ ಮಗಳ ಮೇಲೆ ಆತ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದ. ಇದರಿಂದ ಮಗುವಿನ ಗುಪ್ತಾಂಗದಲ್ಲಿ ಗಂಭೀರ ಗಾಯಗಳಾಗಿದ್ದರು. ಆತನಿದ್ದಲ್ಲಿಗೆ ಈ ಕಿರಾತಕಿ ತಾಯಿ ಆಗಾಗ ತನ್ನ ಮಗಳನ್ನು ಕರೆದೊಯ್ಯುತ್ತಿದ್ದಳು. ಅಲ್ಲಿ ಆ ಮಗುವಿನ ಮೇಲೆ ಈ ಕಾಮುಕ ಶಿಶುಪಾಲ ತಾಯಿ ಎದುರೇ ಹಲ್ಲೆ ಮಾಡುತ್ತಿದ್ದ. 

ರೇಪ್ ಮಾಡಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಮೂರ್ನಾಲ್ಕು ಜನರಾದ್ರೂ ಬೇಕು: ಮಾಜಿ ಶಾಸಕ ಬಯ್ಯಾಪುರ ಕೀಳು ಹೇಳಿಕೆ ವೈರಲ್

ಇದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ, ಆ ಮಗುವಿನ 11 ವರ್ಷದ ಹಿರಿಯ ಸಹೋದರಿಗೆ ಈ ವಿಚಾರವನ್ನು ಮಗು ತಿಳಿಸಿತ್ತು. ಆದರೆ ಈ ಪಾಪಿಗಳು ಆ 11 ವರ್ಷದ ಬಾಲಕಿ ಮೇಲೆ ಕೂಡ ದೌರ್ಜನ್ಯವೆಸಗಿದ್ದರು. ಅಲ್ಲದೇ ಈ ವಿಚಾರವನ್ನು ಯಾರಿಗಾದರು ಹೇಳಿದರೆ ಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಹೀಗಾಗಿ ಮಕ್ಕಳಿಬ್ಬರು ಈ ವಿಚಾರವನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ, ಇದಾದ ಸ್ವಲ್ಪ ದಿನದಲ್ಲಿ ಈ 11 ವರ್ಷದ ಹಿರಿಯ ಸಹೋದರಿ ತನ್ನ ಪುಟಾಣಿ ತಂಗಿಯನ್ನು ಕರೆದುಕೊಂಡು ಆ ಮನೆಯಿಂದ ತಪ್ಪಿಸಿಕೊಂಡು ಬಂದು ಅಜ್ಜಿ ಮನೆ ಸೇರಿದ್ದಳು. ಅಲ್ಲಿ ಅಜ್ಜಿಗೆ ವಿಚಾರ ತಿಳಿದು ಆ ಅಜ್ಜಿ ಆ ಮಕ್ಕಳನ್ನು ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಳು. 

ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಮಕ್ಕಳು ಈ ಭಯಾನಕ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ವಿಚಾರಕ್ಕೆ ಸಂಬಂಧಿಸಿದಂತೆ  ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಾಯಿಗೆ 40 ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಲಾಗಿದೆ ಮಕ್ಕಳಿಬ್ಬರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ. ಮಹಿಳೆ ಹಾಗೂ ಆಕೆಯ ಗೆಳೆಯ ಈ ಮಕ್ಕಳಿಬ್ಬರ ಮೇಲೆ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ. ಈ ಮಹಿಳೆಯ ನಿಜವಾದ ಗಂಡ ಮಾನಸಿಕ ಅಸ್ವಸ್ಥನಾಗಿದ್ದಾನೆ. ಇದೇ ಕಾರಣಕ್ಕೆ ಆಕೆ ಆತನನ್ನು ತೊರೆದು ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಗೆಳೆಯನ ಬಳಿ ಬಂದು ಜೀವನ ಮಾಡುತ್ತಿದ್ದಳು. ಈಕೆಗೆ ಇಬ್ಬರು ಪ್ರೇಮಿಗಳಿದ್ದರು.

Follow Us:
Download App:
  • android
  • ios