ಮಂಡ್ಯ (ಅ.28):  ಚಿನ್ನ ವಂಚನೆ ಪ್ರಕರಣದೊಂದಿಗೆ ಸೆಕ್ಸ್‌ ಜಾಲವೂ ಇದೀಗ ಬಯಲಾಗಿದೆ. ಆರೋಪಿ ಸೋಮಶೇಖರ್‌ ಹಾಗೂ ಮಹಿಳೆ ನಡುವೆ ನಡೆದಿರುವ ಫೋನ್‌ ಸಂಭಾಷಣೆ ಆಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಆರೋಪಿ ಸೋಮಶೇಖರ್‌ಗೆ ಪ್ರತಿಷ್ಠಿತ ಹಾಗೂ ರಾಜಕೀಯ ಪ್ರಭಾವಿ ಮಹಿಳೆಯರಿಂದ ಸಾಮಾನ್ಯ ಮಹಿಳೆಯರವರೆಗೆ ವಿಶ್ವಾಸ ಹೊಂದಿದ್ದಾನೆ. ಅದೇ ವಿಶ್ವಾಸದೊಂದಿಗೆ ಆ ಮಹಿಳೆಯರಿಂದ ಸುಲಭವಾಗಿ ಚಿನ್ನ ಪಡೆದು ವಂಚಿಸುತ್ತಾ ಬಂದಿದ್ದನು. ಕೇವಲ ಚಿನ್ನ ವಂಚನೆಯಷ್ಟೇ ಅಲ್ಲದೆ ಸೆಕ್ಸ್‌ ಜಾಲದಲ್ಲೂ ಈತ ಪಾತ್ರವಿರಬಹುದೇ ಎಂಬ ಅನುಮಾನ ಪೊಲೀಸರಿಗೆ ಶುರುವಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ ಕದಿಯುತ್ತಿದ್ದ 7 ಆರೋಪಿಗಳ ಸೆರೆ

ಫೋನ್‌ ಸಂಭಾಷಣೆಯಲ್ಲಿ ಮಹಿಳೆಯೊಬ್ಬಳು ಹೇಳಿರುವ ಪ್ರಕಾರ, ಅಂತಾರಾಷ್ಟ್ರೀಯ ಫೋಟೋಗ್ರಾಫರ್‌ ಒಬ್ಬ ಆಕೆಯ ಸಂಪರ್ಕದಲ್ಲಿದ್ದು, ಆತ ಹೇಳಿರುವಂತೆ ಕೆಲವು ಮಹಿಳೆಯರನ್ನು ಕರೆದುಕೊಂಡು ಮೈಸೂರು ಅಥವಾ ಬೆಂಗಳೂರಿನ ಫಾಮ್‌ರ್‍ಹೌಸ್‌ಗಳಿಗೆ ಬರುವುದು. ಅಲ್ಲಿ ಮಹಿಳೆಯರ ಅಶ್ಲೀಲ ಫೋಟೋ ಹಾಗೂ ರತಿಕ್ರೀಡೆಯ ವಿಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ವಿದೇಶಗಳಿಗೆ ಕಳುಹಿಸುತ್ತಾನೆ. ಒಬ್ಬರಿಗೆ 2ಲಕ್ಷ ರೂ.ನಂತೆ ಹಣ ಸಿಗುತ್ತದೆ ಎಂದು ಫೋನ್‌ನಲ್ಲಿ ಮಾತನಾಡಿರುವ ಮಹಿಳೆ ಸೋಮಶೇಖರ್‌ಗೆ ಹೇಳಿದ್ದಾಳೆ.

ಮೊದಲು ಆ ವಿದೇಶಿ ಛಾಯಾಗ್ರಾಹಕ 50 ಸಾವಿರ ರೂ. ಹಣ ಕೊಡುತ್ತೇನೆಂದು ಹೇಳಿದ್ದನು. ಅದಕ್ಕೆ ನಾವು ಒಪ್ಪಲಿಲ್ಲ. ನಮ್ಮಿಂದ ನೀವು ಲಕ್ಷಾಂತರ ರೂ. ಹಣ ಮಾಡಿಕೊಳ್ಳುತ್ತೀರಿ. ನಮಗೆ 2 ಲಕ್ಷ ರೂ. ಕೊಡುವಂತೆ ಕೇಳಿದ್ದೇವೆ. ಅದಕ್ಕೆ ಅವನು ಒಪ್ಪಿದ್ದು, ಕೊರೋನಾ ಸಂಕಷ್ಟಮುಗಿದ ಕೂಡಲೇ ಫೋನ್‌ ಮಾಡುವುದಾಗಿ ತಿಳಿಸಿದ್ದಾನೆ. ಮುಂದೆ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಬೆಚ್ಚಿ ಬೀಳಿಸಿದ್ದ ಆ ಪ್ರಕರಣದ ಹಿಂದೆ 

ಜೊತೆಗೆ ಮಾಡೆಲಿಂಗ್‌ ಯಾರಾದರೂ ಇದ್ದರೆ ಪರಿಚಯಿಸು. ಸ್ಯಾರಿಯಲ್ಲಿರುವಂತೆ ಆಕೆಯ ಫೋಟೋಗಳು ಬೇಕಂತೆ. ಅದಕ್ಕೆ ನಿನಗೆ ಯಾರಾದರೂ ಪರಿಚಯಸ್ಥರಿದ್ದರೆ ಹೇಳು. ಹಣ ಕೊಡಿಸುತ್ತೇವೆ. ಅವಳು ಫೋಟೋಶೂಟ್‌ನಲ್ಲಿ ಭಾಗವಹಿಸಬೇಕು ಎಂದು ಸೋಮಶೇಖರ್‌ಗೆ ಹೇಳಿದಾಗ, ಸ್ವಲ್ಪ ಸಮಯಕೊಡಿ. ಯಾರನ್ನಾದರೂ ಹುಡುಕಿಕೊಡುವುದಾಗಿ ತಿಳಿಸಿರುವ ಸಂಭಾಷಣೆ ಎಲ್ಲೆಡೆ ವೈರಲ್‌ ಆಗಿದೆ.

ಸೋಮಶೇಖರ್‌ ಹಾಗೂ ಮಹಿಳೆಯೊಬ್ಬರ ನಡುವೆ ನಡೆದಿರುವ ಫೋನ್‌ ಸಂಭಾಷಣೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಆ ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಸದ್ಯಕ್ಕೆ ಆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ.ಪರಶುರಾಮ ಹೇಳಿದರು.