ಮಂಡ್ಯ (ಅ.28): ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರಿ ಶಾಲೆಗಳನ್ನೇ ಗುರಿಯಾಗಿಸಿಕೊಂಡು ಕಂಪ್ಯೂಟರ್‌ ಕಳವು ಮಾಡುತ್ತಿದ್ದ 7 ಕಳ್ಳರ ತಂಡವೊಂದವನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

 ನಾಗಮಂಗಲದ ಸಿ.ರವಿಕುಮಾರ (39), ಮಂಡ್ಯದ ಎಸ್‌.ಆರ್‌.ಮಂಜುನಾಥ (33), ಸಾದಿಕ್‌ (50), ಎಸ್‌.ಪಿ.ನಾಗರಾಜು (33), ಸಿ.ಬಿ.ಹೇಮಂತ್‌ಕುಮಾರ (27), ಬೆಂಗಳೂರಿನ ಎನ್‌.ವೈ.ರಾಮಕೃಷ್ಣ (46), ಬಿ.ಜಿ.ವೆಂಕಟೇಶ್‌ (39) ಬಂಧಿತರು. 

ಮಾಡೆಲ್‌ ಆಗಲು ಹೊರಟ ಹಳ್ಳಿ ಹುಡುಗಿ ಕಂಡಿದ್ದು ದುರಂತ ಅಂತ್ಯ; ಇದು ಅಂತಿಂಥ ಕಹಾನಿಯಲ್ಲ!

ಈ ಆರೋಪಿಗಳು ಮಂಡ್ಯ, ಮೈಸೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಳವು ಮಾಡಿದ್ದ ಸುಮಾರು 61 ಲಕ್ಷ ರು. ಮೌಲ್ಯದ 160 ಕಂಪ್ಯೂಟರ್‌, 16 ಬ್ಯಾಟರಿ, 3 ಟಿವಿ, 1 ವಾಷಿಂಗ್‌ಮೆಷಿನ್‌, 1 ವೇಯಿಂಗ್‌ ಮೆಷಿನ್‌, 2 ಯುಪಿಎಸ್‌, 3 ಜೆರಾಕ್ಸ್‌ ಯಂತ್ರ, 1 ಪ್ರಿಂಟರ್‌, 1 ಸ್ಕಾರ್ಪಿಯೋ ಕಾರು, 1 ಬೊಲೇರೋ ಲಗೇಜ್‌ ವಾಹನ, 1 ಟಾಟಾ ಸುಮೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.