ಡಬಲ್‌ ಮಾರ್ಗದ ಕಾಮಗಾರಿ| ರೈಲುಗಳ ಸಂಚಾರ ರದ್ದು| ರೈಲು ಸಂಚಾರ ಮಾರ್ಗ ಬದಲು|ಹುಬ್ಬಳ್ಳಿ ನೈಋುತ್ಯ ರೈಲ್ವೆ ಇಲಾಖೆಯ ಪ್ರಕಟಣೆ|

ಬೆಳಗಾವಿ(ಡಿ.11): ಘಟಪ್ರಭಾ ಮತ್ತು ಚಿಕ್ಕೋಡಿ ರೈಲು ಮಾರ್ಗದ ನಡುವೆ ಡಬಲ್‌ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ರದ್ದು ಗೊಳಿಸಲಾಗಿದೆ. ಮತ್ತೆ ಕೆಲವು ರೈಲುಗಳ ಸಂಚಾರ ಮಾರ್ಗ ಬದಲಿಸಲಾಗಿದೆ ಎಂದು ಹುಬ್ಬಳ್ಳಿ ನೈಋುತ್ಯ ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿ.11 ರಂದು ರೈಲು ಸಂಖ್ಯೆ 51461/51464 ಮಿರಜ್‌-ಬೆಳಗಾವಿ-ಮಿರಜ್‌, ರೈಲು ಸಂಖ್ಯೆ 51431/51432 ಮಿರಜ್‌-ಲೋಂಡಾ-ಮಿರಜ್‌, ರೈಲು ಸಂಖ್ಯೆ 51420/51419 ಹುಬ್ಬಳ್ಳಿ-ಮಿರಜ್‌-ಹುಬ್ಬಳ್ಳಿ, ರೈಲು ಸಂಖ್ಯೆ 51462 ಬೆಳಗಾವಿ-ಮಿರಜ್‌, ರೈಲು ಸಂಖ್ಯೆ 51405 ಮಿರಜ್‌-ಕ್ಯಾಸಲ್‌ರಾಕ್‌, ರೈಲು ಸಂಖ್ಯೆ 51406 ಕ್ಯಾಸಲ್‌ರಾಕ್‌-ಮಿರಜ್‌ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 17317 ಹುಬ್ಬಳ್ಳಿ- ಲೋಕಮಾನ್ಯ ತಿಲಕ ಟರ್ಮಿನಸ್‌ ಡಿ.11ರಂದು, ರೈಲು ಸಂಖ್ಯೆ 17318 ಲೋಕಮಾನ್ಯ ತಿಲಕ ಟರ್ಮಿನಸ್‌ ರೈಲು ಸಂಚಾರ ಡಿ.11 ಮತ್ತು 12ರಂದು ರದ್ದುಗೊಳಿಸಲಾಗಿದೆ.

ರೈಲು ಸಂಚಾರ ಮಾರ್ಗ ಬದಲು:

ಡಿ.11 ರಿಂದ ರೈಲು ಸಂಖ್ಯೆ 11304 ಕೊಲ್ಲಾಪುರ-ಮನುಗುರು ಎಕ್ಸ್‌ಪ್ರೆಸ್‌ ಪ್ರಯಾಣವನ್ನು ಮೀರಜ್‌, ಪಂಢರಪುರ, ಸೋಲಾಪುರ, ಗದಗ ಮೂಲಕ ಓಡಿಸಲಾಗುವುದು. ರೈಲು ಸಂಖ್ಯೆ 17416 ಕೊಲ್ಹಾಪುರ-ತಿರುಪತಿ ಎಕ್ಸ್‌ಪ್ರೆಸ್‌ ರೈಲು ಮೀರಜ್‌, ಪಂಢರಪುರ, ಸೋಲಾಪುರ, ಗದಗ ಮಾರ್ಗವಾಗಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.