ಸಿರುಗುಪ್ಪ: ಮಡಿತೇರು ಮುರಿದು ಬಿದ್ದು ಏಳು ಜನರಿಗೆ ಗಾಯ

ಎಳೆಯುವ ವೇಳೆ ತೇರು ಮುರಿದು ಬಿದ್ದು ಏಳು ಜನರಿಗೆ ಗಾಯ| ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಕೊತ್ತಲಚಿಂತೆಯಲ್ಲಿ ಘಟನೆ| 

Seven people were injured for Chariot collapsed in Ballari District

ಬಳ್ಳಾರಿ(ಸೆ.09): ರಥೋತ್ಸವ ಅಂಗವಾಗಿ ನಡೆದ ಮಡಿತೇರು ಎಳೆಯುವ ವೇಳೆ ತೇರು ಮುರಿದು ಬಿದ್ದು ಏಳು ಜನರು ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನ ಕೊತ್ತಲಚಿಂತೆ ಗ್ರಾಮದಲ್ಲಿ ಜರುಗಿದೆ.

ಗುಂಡಪ್ಪಸ್ವಾಮಿ, ರಾಘವೇಂದ್ರ ರೆಡ್ಡಿ, ಲಕ್ಷ್ಮೇಕಾಂತ ರೆಡ್ಡಿ, ಮಹೇಶ ಹಾಗೂ ತಿಕ್ಕಯ್ಯ ಎಂಬುವರಿಗೆ ಹೆಚ್ಚಿನ ಗಾಯಗಳಾಗಿವೆ. ಈ ಪೈಕಿ ಮಹೇಶ ಎಂಬಾತ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದಿಬ್ಬರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

Seven people were injured for Chariot collapsed in Ballari District

ಹರಪನಹಳ್ಳಿ: ಕೋವಿಡ್‌ ಸಂಕ​ಷ್ಟ​ದ​ಲ್ಲಿ ವೈದ್ಯರ ಕೊರ​ತೆ, ಆತಂಕ​ದಲ್ಲಿ ಜನತೆ

ಕೊತ್ತಲಚಿಂತೆ ಗ್ರಾಮದಲ್ಲಿ ಪ್ರತಿವರ್ಷದಂತೆ ನಡೆಯುವ ಶ್ರೀ ಹನುಮಂತಾವಧೂತರ ರಥೋತ್ಸವ ಮುನ್ನ ಮಂಗಳವಾರ ಮಡಿತೇರು ಎಳೆಯಲಾಗುತ್ತಿತ್ತು. ಇದೇ ವೇಳೆ ತೇರಿನ ಮೇಲ್ಭಾಗದ ಕಬ್ಬಿಣದ ಸರಳು ಮುರಿದಿದ್ದು ಕೂಡಲೇ ತೇರು ಕೆಳಗೆ ವಾಲಿ ಬಿದ್ದಿದ್ದು ಅಲ್ಲಿದ್ದವರು ಗಾಯಗೊಂಡಿದ್ದಾರೆ.
 

Latest Videos
Follow Us:
Download App:
  • android
  • ios