ಮಂಗ​ಳೂ​ರು(ಮಾ.10): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀಡುವ ಏರ್‌ಪೋರ್ಟ್‌ ಸರ್ವಿಸ್‌ ಕ್ವಾಲಿಟಿಗಾಗಿ 2019ನೇ ಸಾಲಿನ ವಿಶ್ವ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ.

ಗ್ರಾಹಕರಿಗೆ ನೀಡುವ ಉತ್ತಮ ಮಟ್ಟದ ಸೇವೆ, ವಿಶ್ವ ದರ್ಜೆಯ ಸೌಲಭ್ಯಗಳಿಗಾಗಿ ಮಂಗಳೂರು, ತಿರುವನಂತಪುರಂ, ಚಂಡೀಗಢ, ಲಕ್ನೋ ವಿಮಾನ ನಿಲ್ದಾಣ ಆಯ್ಕೆಯಾಗಿವೆ.

ಕೋಟಿ-ಚೆನ್ನಯರ ಜನ್ಮಭೂಮಿ ಇನ್ನು ಪ್ರವಾಸಿ ತಾಣ..!

ಎಎಸ್‌ಕ್ಯೂ ಸರ್ವೆಯನ್ನು ಜಾಗತಿಕ ಸಂಸ್ಥೆಯಾಗಿರುವ ಏರ್‌ಪೋಟ್ಸ್‌ರ್‍ ಕೌನ್ಸಿಲ್‌ ಇಂಟರ್‌ನ್ಯಾಷನಲ್‌ ಕೈಗೊಳ್ಳುತ್ತದೆ. ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ವ್ಯಕ್ತಪಡಿಸುವ ತೃಪ್ತಿಯನ್ನು ಆಧರಿಸಿ ಎಎಸ್‌ಕ್ಯೂ ಅಂಕ ನೀಡಲಾಗುತ್ತದೆ. ಸಂಪರ್ಕ, ಚೆಕ್‌ ಇನ್‌, ಭದ್ರತೆ, ಸೌಲಭ್ಯ, ಆಹಾರ-ಪಾನೀಯ, ಪರಿಸರ ಮತ್ತು ಆಗಮನ ಸೇವೆಗಳೂ ಸೇರಿದಂತೆ 34 ಪ್ರಮುಖ ಅಂಶಗಳನ್ನು ಇದು ಒಳಗೊಂಡಿದೆ. ಇದಕ್ಕಾಗಿ 2019ರಲ್ಲಿ ಜಗತ್ತಿನ 356 ವಿಮಾನ ನಿಲ್ದಾಣಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

ಏನಿದು ಮಂಗಳೂರಿನ ಹಿರಿಮೆ?

ಪ್ರಯಾಣಿಕರ ಸೇತುವೆ ನಿರ್ಮಾಣ, ಟರ್ಮಿನಲ್‌ ಕಟ್ಟಡದ ಸುಧಾರಣೆ ಮೂಲಕ ಪರಿಸರ ಸುಂದರೀಕರಣಗೊಳಿಸಲಾಗಿದೆ. ಬೃಹತ್‌ ವಿಮಾನ ಮಾಹಿತಿ ಪ್ರದರ್ಶನ ಫಲಕಗಳನ್ನು ಅಳವಡಿಸಿರುವುದು, ಆ್ಯಪ್‌ ಆಧರಿತ ಕ್ಯಾಬ್‌ ಆಗ್ರಿಗೇಟರ್‌ ವ್ಯವಸ್ಥೆ, ಅಟೊಮ್ಯಾಟಿಕ್‌ ಇಲೆಕ್ಟ್ರಾನಿಕ್‌ ಆಕ್ಸೆಸ್‌ ಕಂಟ್ರೋಲ್‌, ಆಗಮನ-ನಿರ್ಗಮನಕ್ಕೆ ಇ-ಗೇಟ್‌ ವ್ಯವಸ್ಥೆ, ಟರ್ಮಿನಲ್‌ ಹಾಗೂ ನಗರದ ಕಡೆಗೆ ಉತ್ತಮ ಸೈನೇಜ್‌ ಫಲಕಗಳು, ಎಟಿಎಂ, 500ರಷ್ಟುಟ್ರಾಲಿಗಳು, ಪರಿಸರ ಸ್ನೇಹಿ ವ್ಯವಸ್ಥೆಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿದೆ.

ಮಂಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊರೋನಾ ಶಂಕಿತ ವ್ಯಕ್ತಿ ಪತ್ತೆ

ಅಂಗವಿಕಲರಿಗಾಗಿ ಪೂರಕ ವ್ಯವಸ್ಥೆ, ಸಹಾಯ ಕೇಂದ್ರ, ಅನೇಕ ನಗದು ರಹಿತ ಪಾವತಿ ವ್ಯವಸ್ಥೆ, ಟರ್ಮಿನಲ್‌ ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ಸ್ಥಳೀಯ ಕಲೆ, ಜಾನಪದವನ್ನು ಪ್ರತಿಬಿಂಬಿಸುವ ಕಲೆ ಪ್ರದರ್ಶನವನ್ನು ಪ್ರಯಾಣಿಕರು ಮೆಚ್ಚಿಕೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.