*   ಬೆಂಗಳೂರು ನಗರದಲ್ಲಿ ಪಟಾಕಿ ದುರಂತದಿಂದ 64 ಮಂದಿಗೆ ಗಾಯ*   ಪರಿಸರ ಕಾಳಜಿಯಿಂದ ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆ*   ಮೂವರು ಬಾಲಕರಿಗೆ ಕಣ್ಣಿಗೆ ಗಂಭೀರ ಸ್ವರೂಪದಲ್ಲಿ ಹಾನಿ

ಬೆಂಗಳೂರು(ನ.08): ದೀಪಾವಳಿ(Deepavali) ಹಬ್ಬದಲ್ಲಿ ಸಿಡಿಸಿದ ಪಟಾಕಿಯಿಂದ(Fireworks) ಭಾನುವಾರದವರೆಗೆ ಬರೋಬ್ಬರಿ 64 ಮಂದಿ ಗಾಯಗೊಂಡಿದ್ದು, ಐದು ಮಂದಿ ಕಣ್ಣಿಗೆ(Eye) ಗಂಭೀರ ಹಾನಿಯಾಗಿದೆ.

ಈ ಪೈಕಿ 8 ವರ್ಷ ಹಾಗೂ 14 ವರ್ಷದ ಇಬ್ಬರು ಮಕ್ಕಳು, 70 ವರ್ಷದ ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಶನಿವಾರ ತಡರಾತ್ರಿ ಕೆ.ಪಿ.ಅಗ್ರಹಾರದಲ್ಲಿ 55 ವರ್ಷದ ಸಂಪತ್‌ ಎಂಬ ವ್ಯಕ್ತಿ ಪಕ್ಕದ ಮನೆಯವರು ಸಿಡಿಸಿದ ಪಟಾಕಿ ತಗುಲಿ ಕಣ್ಣಿಗೆ ಗಂಭೀರ ಗಾಯವಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ(Minto Hospital) ಶಸ್ತ್ರಚಿಕಿತ್ಸೆ(Surgery) ನಡೆಸಿದ್ದು, ದೃಷ್ಟಿಬರುವ(Eyesight) ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು(Doctor) ಹೇಳಿದ್ದಾರೆ.

ಉಳಿದಂತೆ ಮೂವರು ಬಾಲಕರಿಗೂ ಕಣ್ಣಿಗೆ ಗಂಭೀರ ಸ್ವರೂಪದಲ್ಲಿ ಹಾನಿಯಾಗಿದ್ದು, ಅವರ ದೃಷ್ಟಿಯ ಬಗ್ಗೆ ಪರೀಕ್ಷೆ ನಡೆಸಿ ತಿಳಿಸಲಾಗುವುದು ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌ ಮಾಹಿತಿ ನೀಡಿದರು.
ಒಟ್ಟಾರೆ ಹಬ್ಬದಲ್ಲಿ(Festival) ಸಿಡಿಸಿದ ಪಟಾಕಿಯಿಂದ ನಗರದಲ್ಲಿ 60ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯಗಳಾಗಿದ್ದಾರೆ. ಗಂಭೀರ ಪ್ರಕರಣಗಳು ಕಳೆದ ವರ್ಷಕ್ಕಿಂತ ಕಡಿಮೆಯಾಗಿದ್ದರೂ ಒಟ್ಟಾರೆ ಪ್ರಕರಣಗಳು ಹೆಚ್ಚಾಗಿವೆ.

Deepavali| ಪಟಾಕಿ ಸಿಡಿತದಿಂದ ಮೂರೇ ದಿನದಲ್ಲಿ 52 ಮಂದಿಗೆ ಗಾಯ

ಭಾನುವಾರ ಸಂಜೆವರೆಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 26, ನಾರಾಯಣ ನೇತ್ರಾಲಯದಲ್ಲಿ(Narayana Nethralaya) 27, ಅಗರವಾಲ್‌ ಕಣ್ಣಿನ ಆಸ್ಪತ್ರೆಯಲ್ಲಿ ಇಬ್ಬರು ಸೇರಿದಂತೆ ವಿವಿಧ ಕಣ್ಣಿನ ಆಸ್ಪತ್ರೆಯಲ್ಲಿ(Eye Hospital) 59 ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ ಅವಘಡದಲ್ಲಿ ಮುಖ, ಕೈಕಾಲು ಸುಟ್ಟುಕೊಂಡು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಸುಟ್ಟಗಾಯಗಳ ಕೇಂದ್ರದಲ್ಲಿ ಐವರು ಚಿಕಿತ್ಸೆ ಪಡೆದಿದ್ದು, ಈ ಪೈಕಿ ಓರ್ವ ಬಾಲಕನಿಗೆ ಪ್ಲಾಸ್ಟಿಕ್‌ ಸರ್ಜರಿ ಅಗತ್ಯವಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಾದ ರಮೇಶ್‌ ತಿಳಿಸಿದ್ದಾರೆ.

ಪಟಾಕಿ ಸಿಡಿತ: ಇಬ್ಬರ ಕಣ್ಣಿಗೆ ಹಾನಿ

ಕೋಲಾರ: ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ 15ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು ಸಣ್ಣಪುಟ್ಟಕಣ್ಣಿನ ಸಮಸ್ಯೆಗಳು, ಸುಟ್ಟಗಾಯಗಳಿಂದ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಧಾವಿಸಿದ್ದು, ನಗರದ ವಿವೇಕ ನೇತ್ರಾಲಯದಲ್ಲಿ ಬಾಲಕನೊಬ್ಬನ ಕಾರ್ನಿಯಾಗೆ ಗಾಯವಾಗಿದ್ದು, ಚಿಕಿತ್ಸೆ ನೀಡಿದ್ದಾಗಿ ನೇತ್ರ ತಜ್ಞ ಡಾ.ಹೆಚ್‌.ಆರ್‌.ಮಂಜುನಾಥ್‌ ತಿಳಿಸಿದರು.

ಪರಿಸರ ಕಾಳಜಿಯಿಂದ ಅನೇಕರು ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆಯಾಗಿದ್ದು, ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲವಾದರೂ, ಇಬ್ಬರು ಮಕ್ಕಳ ಕಾರ್ನಿಯಾಗೆ ಹಾನಿಯಾಗಿದ್ದು, ಚಿಕಿತ್ಸೆ ನೀಡಿದ್ದಾಗಿ ಅವರು ತಿಳಿಸಿದರು. ನಗರದ ಶಂಕರನೇತ್ರಾಲಯದಲ್ಲೂ ಒಂದೆರಡು ಪ್ರಕರಣಗಳು ವರದಿಯಾಗಿದ್ದು, ಸಣ್ಣಪುಟ್ಟಪ್ರಕರಣ ಹೊರತುಪಡಿಸಿ ದೃಷ್ಟಿಗೆ ತೊಂದರೆಯಾಗುವ ಯಾವುದೇ ಪ್ರಕರಣ ಬರಲಿಲ್ಲ ಎಂದು ನೇತ್ರ ತಜ್ಞ ಡಾ.ಶಂಕರ್‌ ನಾಯಕ್‌ ತಿಳಿಸಿದರು. ಇದೇ ರೀತಿ ಜಿಲ್ಲಾಸ್ಪತ್ರೆ, ಜಾಲಪ್ಪ ಆಸ್ಪತ್ರೆ, ನೇತ್ರದೀಪ ರೋಟರಿ ಕಣ್ಣಾಸ್ಪತ್ರೆಗೂ ಕೆಲವು ಗಾಯಾಳುಗಳು ಬಂದು ಚಿಕಿತ್ಸೆ ಪಡೆದಿದ್ದಾರೆ.

Diwali: ಪಟಾಕಿಯಿಂದ ಗಾಯಗೊಂಡರೆ ಈ ಮನೆ ಮದ್ದು ತಕ್ಷಣವೇ ಮಾಡಿ

ಸ್ಕೂಟರ್‌ನಲ್ಲಿ ಪಟಾಕಿ ಒಯ್ಯುವಾಗ ಸ್ಫೋಟ: ತಂದೆ, ಮಗ ಸಾವು

ಪುದುಚೇರಿ: ದೀಪಾವಳಿ ಹಬ್ಬಕ್ಕಾಗಿ ಸ್ಕೂಟರಿನಲ್ಲಿ ಸಾಗಿಸುತ್ತಿದ್ದ ಪಟಾಕಿಗಳು ಸ್ಫೋಟಗೊಂಡ ಪರಿಣಾಮ ತಂದೆ ಮಗ ಇಬ್ಬರು ಸಾವಿಗೀಡಾದ ದುರ್ಘಟನೆ ಪುದುಚೇರಿಯ ಪಾಂಡಿ ಬಳಿ ನಡೆದಿದೆ. ಪುದುಚೇರಿಯಿಂದ(Puducherry) ತಮಿಳುನಾಡಿನ(Tamil Nadu) ವಿಲ್ಲುಪುರಂಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ.

ಮೃತ(Death) ದುರ್ದೈವಿಗಳನ್ನು ಕಾಲೈನೇಶನ್‌ ಹಾಗೂ ಪ್ರದೀಶ್‌ (7) ಎಂದು ಗುರುತಿಸಲಾಗಿದೆ. ಹಬ್ಬಕ್ಕಾಗಿ ಪುದುಚೇರಿಯಲ್ಲಿ ಪಟಾಕಿ ಖರೀದಿಸಿದ ಇವರು ಸ್ಕೂಟರಿನಲ್ಲಿ ಸಾಗಿಸುವಾಗ ಪಟಾಕಿಗಳ ಪರಸ್ಪರ ಘರ್ಷಣೆಯಿಂದ ಬೆಂಕಿ ಹೊತ್ತಿಕೊಂಡು ಅವು ಸಿಡಿದಿರಬಹುದು. ಆದ್ದರಿಂದ ತಂದೆ ಮಗ ಇಬ್ಬರಿಗೂ ಸುಟ್ಟಗಾಯಗಳಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ, ಇವರಿಗೆ ಪಟಾಕಿ ಮಾರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು(Police) ಹೇಳಿದ್ದಾರೆ.

ಪಟಾಕಿಯಿಂದ ಹಾನಿ ಪ್ರಕರಣ

ಮಿಂಟೋ ಕಣ್ಣಿನ ಆಸ್ಪತ್ರೆ- 26 (5 ಗಂಭೀರ)
ನಾರಾಯಣ ನೇತ್ರಾಲಯ- 27
ಅಗರವಾಲ್‌ ಕಣ್ಣಿನ ಆಸ್ಪತ್ರೆ- 2
ವಿಕ್ಟೋರಿಯಾದ ಮಹಾಬೋಧಿ ಸುಟ್ಟಗಾಯಗಳ ಕೇಂದ್ರ (ಬನ್ಸ್‌ರ್‍ ವಾರ್ಡ್‌)- 05
ಇತರೆ ಆಸ್ಪತ್ರೆ: 4
ಒಟ್ಟು = 64