IAS ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ
: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರಿ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವುದಾಗಿ ವಿಪ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಮೈಸೂರು (ಡೊ. 10 ) : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರಿ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವುದಾಗಿ ವಿಪ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕರ ಸೇವಕರು. ಈ ವಿಚಾರ ಮರೆತಂತಿರುವ ಅವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುವಂತೆ ನಡೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಅವರ ವಿಚಾರದಲ್ಲಿ ದಿವ್ಯ ಮೌನಕ್ಕೆ ಶರಣಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ಪಾರಂಪರಿಕ ಕಟ್ಟಡ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ತಪ್ಪು ಎಂದು ವರದಿ ತಿಳಿಸಿದೆ. ತನಿಖೆ ನಡೆಸಿದ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ಧರಣಿ ನಡೆಸುವುದಾಗಿ ಅವರು ಹೇಳಿದರು.
ರೋಹಿಣಿ ಸಿಂಧೂರಿ ಅವರು ಈಗ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಕೂಡ ಅಕ್ರಮ ಎಸಗಿದ್ದಾರೆ. ಇಲಾಖೆ ವ್ಯಾಪ್ತಿಗೆ ಬರುವ ಎ ಮತ್ತು ಬಿ ದರ್ಜೆಯ ದೇವಾಲಯಗಳ ಹಣಕಾಸು ಲೆಕ್ಕ ಪರಿಶೋಧನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರಿದರು.
ಸರ್ಕಾರದ ಯಾವುದೇ ಇಲಾಖೆಯಲ್ಲಿನ ಲೆಕ್ಕಪತ್ರಗಳ ಪರಿಶೀಲನೆ ಸ್ಟೇಟ್ ಅಕೌಂಟಕ್ ಮೂಲಕವೇ ನಡೆಯಬೇಕು. ಆದರೆ, ಕಮಿಷನ್ ಆಸೆಗಾಗಿ ಲೆಕ್ಕ ಪರಿಶೋಧನೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದಾರೆ. ಈ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಯಾವುದೇ ಅಧಿಕಾರಿಯಾದರೂ ಕಚೇರಿಗೆ ಬಂದು ಕೆಲಸ ನಿರ್ವಹಿಸಬೇಕು. ಆದರೆ, ರೋಹಿಣಿ ಸಿಂಧೂರಿ ವಾರದಲ್ಲಿ ಮೂರು ದಿನವೂ ಕಚೇರಿಗೆ ಬರುವುದಿಲ್ಲ. ಮನೆಯಲ್ಲಿ ಕುಳಿತೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಅವರ ಕಚೇರಿ ಮುಂಭಾಗ ಅಳವಡಿಸಿರುವ ಸಿಸಿಟಿವಿ ಪರಿಶೀಲಿಸಿದಲ್ಲಿ ಅವರು ತಿಂಗಳಲ್ಲಿ ಎಷ್ಟುದಿನ ಕೆಲಸಕ್ಕೆ ಬಂದಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು. ಗ್ರಾಪಂ ಸದಸ್ಯ ಶಿವಕುಮಾರ್, ಅಪೆಕ್ಸ್ ಶ್ರೀನಿವಾಸ್, ದಿನೇಶ್ ಇದ್ದರು.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಕೆಲದಿನ ಎಟಿಐ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಪಾಪಸ್ ಆಗುವಾಗ ಬೆಲೆಬಾಳುವ ಪೀಠೋಪಕರಣಗನ್ನು ಕೊಂಡೊಯ್ದಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಸಾಕಷ್ಟುಪತ್ರ ವ್ಯವಹಾರ ನಡೆದಿದೆ. ಈ ಸಂಬಂದ ಸೂಕ್ತ ತನಿಖೆಯಾಗಬೇಕು.
- ಸಿ.ಎನ್. ಮಂಜೇಗೌಡ, ವಿಧಾನಪರಿಷತ್ ಸದಸ್ಯ
ವಸ್ತು ಮರಳಿಸಲು ಸೂಚನೆ
ಮೈಸೂರು (ಡಿ.5) : ಶಾಸಕ ಸಾ.ರಾ ಮಹೇಶ್ ವಿರುದ್ಧ ಸಿಡಿದು ಬಾರಿ ಸದ್ದು ಮಾಡಿದ್ದ ಅಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕರೋನಾ ಸಂಧರ್ಭದಲ್ಲಿ ಹಣಕಾಸು ದುರ್ಬಳಕೆ ಆರೋಪ ಹೊತ್ತಿದ್ದ ರೋಹಿಣಿ ಸಿಂಧೂರಿ ವಿರುದ್ದ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಬಾರಿ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳೇ ಪತ್ರ ಬರೆದಿದ್ದು, ತಮ್ಮ ಸಂಸ್ಥೆಯಿಂದ ಹೊತ್ತೊಯ್ದ ವಸ್ತುಗಳನ್ನ ಮರಳಿ ನೀಡುವಂತೆ ಕೇಳಿಕೊಂಡಿದ್ದಾರೆ.
ಒಂದು ಮಂಚ, ಒಂದು ಹಾಸಿಗೆ, ಎರೆಡು ಯೋಗ ಮ್ಯಾಟ್, ಎರೆಡು ಪ್ಲಾಸ್ಟಿಕ್ ಸ್ಟೂಲ್, ಒಂದು ಮೈಕ್ರೋ ಓವನ್ ಹೀಗೆ ಒಟ್ಟು 23 ಬಗ್ಗೆಯ ಗೃಹ ಬಳಕೆ ವಸ್ತುಗಳನ್ನ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಆಡಳಿತ ತರಭೇತಿ ಸಂಸ್ಥೆಯಿಂದ ಹೊತ್ತೊಯ್ದ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ 2020 ಅಕ್ಟೋಬರ್ನಲ್ಲಿ ಮೈಸೂರಿಗೆ ಆಗಮಿಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆಡಳಿತ ತರಭೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. 40 ದಿನಗಳ ವಾಸ್ತವ್ಯದ ನಂತರ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ತೆರಳಿದ ರೋಹಿಣಿ ಸಿಂಧೂರಿ ಹೋಗುವಾಗ ತಾವು ಬಳಸುತ್ತಿದ್ದ ಗೃಹ ಬಳಕೆ ವಸ್ತುಗಳ ಜೊತೆ ಆಡಳಿತ ತರಭೇತಿ ಸಂಸ್ಥೆಗೆ ಸೇರಿದ ಈ ಕಳಗೆ ನಮೂದಿಸಲಾದ ವಸ್ತುಗಳನ್ನ ತೆರದುಕೊಂಡು ಹೋಗಿದ್ದಾರೆ ಎಂಬ ಕೇಳಿ ಬಂದಿದೆ.
ಆಡಿಯೋ ವೈರಲ್: ಕಾನೂನು ಕುಣಿಕೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
ಸಂಸ್ಥೆಯಿಂದ ನಾಲ್ಕನೇ ಬಾರಿ ಪತ್ರ: ಐಎಎಸ್ ರೋಹಿಣಿ ಸಿಂಧೂರಿ ಕಾಲದಲ್ಲಿ ಸಂಸ್ಥೆಯಿಂದ ತೆಗೆದುಕೊಂಡು ಹೋಗಲಾದ ವಸ್ತುಗಳನ್ನ ಮರಳಿಸುಂತೆ ಸತತವಾಗಿ ನಾಲ್ಕು ಬಾರಿ ಪತ್ರ ಬರೆಯಲಾಗಿದೆ. ಮೂರಿ ಭಾರಿ ಪತ್ರ ಬರೆದ ನಂತರ ಪಟ್ಟಿಯಲ್ಲಿರುವ ಹಲವು ವಸ್ತುಗಳನ್ನ ವಾಪಸ್ ಮಾಡಿರುವ ಜಿಲ್ಲಾಧಿಕಾರಿ ನಿವಾಸದ ಸಿಬ್ಬಂದಿ ಇನ್ನೂ 12 ಬಗೆಯ ವಸ್ತುಗಳನ್ನ ವಾಪಸ್ ಮಾಡದೆ ಸಾತಯಿಸುತ್ತಿದ್ದಾರೆ. ಹೀಗಾಗಿ 2022 ನವೆಂಬರ್ 30 ರಂದು ನಾಲ್ಲನೇ ಬಾರಿ ಪತ್ರ ಬರೆದಿರುವ ಆಡಳಿತ ತರಭೇತಿ ಸಂಸ್ಥೆಯ ಜಂಟಿ ನಿರ್ದೇಶಕರು ರೋಹಿಣಿ ಸಿಂಧೂರಿ ವಾಸ್ತವ್ಯದ ಸಂಧರ್ಭದಲ್ಲಿ ತೆಗೆದುಕೊಂಡು ಹೋಗಲಾಗಿರುವ ಮರಳಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಇರುವಂತೆ ಮಂಚ, ಹಾಸಿಗೆ, ಯೋಗ ಮ್ಯಾಟ್, ಸ್ಟೀಲ್ ವಾಟರ್ ಜೆಗ್ ಸೇರಿ ಇನ್ನೂ ಹಲವು ವಸ್ತುಗಳನ್ನ ಮರಳಿಸಬೇಕಿದೆ.
ರೋಹಿಣಿ ಸಿಂಧೂರಿ ವಿರುದ್ಧ 1200 ಪುಟಗಳ ಎಲ್ಲಾ ದಾಖಲೆ ಸಲ್ಲಿಕೆ
ವಸ್ತು ಮರಳಿಸದಿದ್ದರೆ ಮತ್ತೆ ವಿವಾದ: ಹೀಗೆ 23 ಗೃಹ ಉಪಯೋಗಿ ವಸ್ತುಗಳು ಆಡಳಿತ ಸಂಸ್ಥೆ ಅತಿಥಿ ಗೃಹದಿಂದ ಜಿಲ್ಲಾಧಿಕಾರಿ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗಿದೆ. ಅವುಗಳನ್ನ ಹಿಂದುಗಿರಿಸುವಂತೆ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ಧೇಶಕರು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಒಂದಿಲ್ಲೊಂದು ವಿಚಾರಗಳಲ್ಲಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಗೃಹ ಉಪಯೋಗಿ ವಸ್ತುಗಳ ಬಳಕೆ ವಿಚಾರದಲ್ಲೂ ವಿವಾದ ಸೃಷ್ಟಿಕೊಂಡಿರುವುದು ವಿಪರ್ಯಾಸವೆ ಸರಿ.