* ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿ ನಡೆದ ಘಟನೆ * ಚಾಲನೆ ಮಾಡುವಾಗಲೇ ಡ್ರೈವರ್‌ಗೆ ಬಂದ ಮೂರ್ಛೆ ರೋಗ * ಐದಾರು ಜನರಿಗೆ ಸಣ್ಣಪುಟ್ಟ ಗಾಯ 

ಹುಬ್ಬಳ್ಳಿ(ಜೂ.19): ​ಚಾಲಕನಿಗೆ ಪೀಡ್ಸ್‌ ಬಂದ ಕಾರಣ ವಾಹನ ನಿಯಂತ್ರಣ ತಪ್ಪಿ 8ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಇಲ್ಲಿನ ಗೋಕುಲ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. 

ಪಾಲಿಕೆಯ ಕಸ ಸಂಗ್ರಹಿಸುವ ವಾಹನದ ಚಾಲಕ ಸುರೇಶ ಮಲ್ಲಾಡ (42) ಚಾಲನೆ ಮಾಡುವಾಗಲೇ ಮೂರ್ಛೆ ರೋಗ ಬಂದಿದೆ. ಇದರಿಂದ ವಾಹನ ನಿಯಂತ್ರಣ ತಪ್ಪಿದೆ. ಮುಂದೆ ಬರುತ್ತಿದ್ದ ಏಳೆಂಟು ವಾಹನಗಳಿಗೆ ಕಸದ ಟಿಪ್ಪರ್‌ ಡಿಕ್ಕಿ ಹೊಡೆದಿದೆ. 

ರಸ್ತೆ ದಾಟೋ ವೇಳೆ ಹುಷಾರ್‌: ಈ ವಿಡಿಯೋ ನೋಡಿದ್ರೆ ಎದೆ ಝಲ್‌ ಅನ್ನುತ್ತೆ..!

ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಐದಾರು ಜನರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.