ಶಿರಸಿ(ಫೆ.05): ಅಕ್ರಮವಾಗಿ ಮನೆ ಪ್ರವೇಶಿಸಿ ಮಹಿಳೆಯ ಮಾನಭಂಗ ಮಾಡಿದ್ದ ನಾಲ್ವರಿಗೆ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 24 ಸಾವಿರ ದಂಡ ವಿಧಿಸಿದೆ. 

2017 ಮಾರ್ಚ್‌ ತಿಂಗಳಿನಲ್ಲಿ ನಗರದ ಗಣೇಶನಗರದಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳಾದ ಹಿತ್ಲಳ್ಳಿಯ ಕವಿತಾ ಬೋವಿವಡ್ಡರ, ಶಿವಾನಂದ ಬೋವಿವಡ್ಡರ್‌, ಕಲಾವತಿ ಬೋವಿವಡ್ಡರ್‌ ಹಾಗೂ ರಾಘವೇಂದ್ರ ಬೋವಿವಡ್ಡರ್‌ ಅವರ ಮೇಲೆ ಪ್ರಕರಣ ದಾಖಲಾಗಿತ್ತು. 

ಬಹುತೇಕ ಜಡ್ಜ್‌ಗಳು ಭ್ರಷ್ಟರು ಎಂದ ಮಾಜಿ ಸಚಿವಗೆ ಜೈಲು!

ಸರ್ಕಾರಿ ಅಭಿಯೋಜಕಿ ಸೊಫಿಯಾ ಇನಾಮದಾರ, ದೇವರಾಜ ಶಿಲ್ಲಾಗೋಳ ನ್ಯಾಯಾಲಯದಲ್ಲಿ ವಾದಿಸಿದ್ದರು.