Asianet Suvarna News Asianet Suvarna News

ಸಹ್ಯಾದ್ರಿಯಲ್ಲಿ ಸೆನ್ಸಾರ್‌ ಆಧಾರಿತ ಸ್ಯಾನಿಟೈಸರ್‌ ತಯಾರಿ

ಕೋವಿಡ್‌-19 ವಿರುದ್ಧ ಹೋರಾಡಲು ಮಂಗಳೂರಿನ ಸಹ್ಯಾದ್ರಿ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಫುಟ್‌ಪ್ರೆಸ್‌ ಮತ್ತು ಸೆನ್ಸಾರ್‌ ಆಧಾರಿತ ಹ್ಯಾಂಡ್‌ ಸ್ಯಾನಿಟೈಜರ್‌ ಗಳನ್ನು ತಯಾರಿಸಿದೆ.

sensor based sanitizer dispenser in mangalore
Author
Bangalore, First Published May 26, 2020, 9:04 AM IST
  • Facebook
  • Twitter
  • Whatsapp

ಮಂಗಳೂರು(ಮೇ 26): ಕೋವಿಡ್‌-19 ವಿರುದ್ಧ ಹೋರಾಡಲು ಮಂಗಳೂರಿನ ಸಹ್ಯಾದ್ರಿ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಫುಟ್‌ಪ್ರೆಸ್‌ ಮತ್ತು ಸೆನ್ಸಾರ್‌ ಆಧಾರಿತ ಹ್ಯಾಂಡ್‌ ಸ್ಯಾನಿಟೈಜರ್‌ ಗಳನ್ನು ತಯಾರಿಸಿದೆ.

ಸಹ್ಯಾದ್ರಿ ಕಾಲೇಜು ಆಫ್‌ ಎಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್‌, ಮೆಕ್ಯಾನಿಕಲ್‌ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ.ರವಿಚಂದ್ರ ಕೆ.ಆರ್‌. ಮೇಲ್ವಿಚಾರಣೆಯಲ್ಲಿ ಈ ಮಾದರಿಗಳು ತಯಾರಾಗಿವೆ. ಆರ್ಡಿಎಲ್‌ ಟೆಕ್ನಾಲಜೀಸ್‌ ಸಿಇಒ ರಾಘವೇಂದ್ರ ಶೆಟ್ಟಿಮಾರ್ಗದರ್ಶನದಲ್ಲಿ ಸೆನ್ಸಾರ್‌ ಆಧಾರಿತ ವಿತರಕಗಳನ್ನು ಸಹ್ಯಾದ್ರಿಯ ರಿಸರ್ಚ್ ಡಿಸೈನ್‌ ಲ್ಯಾಬ್ಸ್‌ನಲ್ಲಿ ತಯಾರಿಸಿದ್ದಾರೆ.

ಕೊರೋನಾ ತಾಂಡವ, ರಾಮ ಮಂದಿರ ಆದಾಯ ಕುಸಿತ!

ಸಹ್ಯಾದ್ರಿಯ ವಿದ್ಯಾರ್ಥಿಗಳು ಈ ಉತ್ಪನ್ನಗಳ ವಿನ್ಯಾಸ ಮತ್ತುಅನುಷ್ಠಾನದಲ್ಲಿ ಭಾಗವಹಿಸಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಕೈಗಾರಿಕೆಗಳು ಈ ಸೆನ್ಸಾರ್‌ ಆಧಾರಿತ ಹ್ಯಾಂಡ್‌ ಸ್ಯಾನಿಟೈಜರ್‌ ಬಳಸಬಹುದಾಗಿದೆ.

ವೈಶಿಷ್ಟ್ಯಗಳು: ಫäಟ್‌ ಪ್ರೆಸ್‌ ಹ್ಯಾಂಡ್‌ ಸ್ಯಾನಿಟೈಜರ್‌ ಸ್ಪರ್ಶ ಮುಕ್ತ ಬಳಕೆ, ಉಕ್ಕಿನಿಂದ ಮಾಡಿದ ದೀರ್ಘಾಯುಷ್ಯ, 2 ಲೀಟರ್‌ ಸಾಮರ್ಥ್ಯ ಹೊಂದಿವೆ. ಸೆನ್ಸರ್‌ ಆಧಾರಿತ ಸ್ಯಾನಿಟೈಜರ್‌ ಕೂಡ ಸ್ಪರ್ಶ ಮುಕ್ತ ಬಳಕೆ, 12 ಲೀಟರ್‌ ಸಾಮರ್ಥ್ಯ, ಸ್ಯಾನಿಟೈಜರ್‌ ಹರಿವನ್ನು ನಿಯಂತ್ರಿಸುವ ತಂತ್ರಜ್ಞಾನ ಹೊಂದಿದೆ

Follow Us:
Download App:
  • android
  • ios