Asianet Suvarna News Asianet Suvarna News

ಹಿರಿಯ ಲೇಖಕಿ ಮಮ್ತಾಜ್‌ ಬೇಗಂ ಬೆಳಪು ಇನ್ನಿಲ್ಲ

ಸುಮಾರು 5 ದಶಕಗಳಿಂದ ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ   ಮಮ್ತಾಜ್‌ ಬೇಗಂ (73)  ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು

Senior Writer Mumtaz Begum belapu Passes Away   snr
Author
Bengaluru, First Published Apr 7, 2021, 10:44 AM IST

ಉಡುಪಿ(ಏ.07) : ಖ್ಯಾತ ಸಾಹಿತಿ, ಕಾಪು ತಾಲೂಕು ಕಸಾಪ ಘಟಕದ ಸದಸ್ಯೆ ಬೆಳಪು ಮಿಲಿಟರಿ ಕಾಲೋನಿಯ ಮಮ್ತಾಜ್‌ ಬೇಗಂ (73) ಮಂಗಳವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಓರ್ವ ಪುತ್ರ, ಇಬ್ಬರು ಪುತ್ರಿ ಹಾಗೂ ಕನ್ನಡ ಸಾಹಿತ್ಯ ಲೋಕದ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ.

ಸುಮಾರು 5 ದಶಕಗಳಿಂದ ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಇವರು ಅವ್ಯಕ್ತ, ಪರದೇಶಿ, ವರ್ತುಲ, ಬಂದಳಿಕೆ, ಚಿಂಪಿ, ಸರ್ವ ಋುತುಗಳೂ ನಿನಗಾಗಿ, ಅಂಕುರ ಸಹಿತ ಅನೇಕ ಕಥೆ, ಕವನ, ಕಾದಂಬರಿ ಸಹಿತ ವಿವಿಧ ಪುಸ್ತಕಗಳನ್ನು ಬರೆದಿದ್ದರು. ಅವರ ಪರದೇಶಿ ಧಾರಾವಾಹಿ ತರಂಗ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರ ಸ್ವಾತಂತ್ರ್ಯದ ಕಹಳೆ ಪುಸ್ತಕ ಕಾಪು ತಾಲೂಕು ಕಸಾಪದ ವತಿಯಿಂದ ಬಿಡುಗಡೆಯಾಗಿತ್ತು.

ಮಣಿಪಾಲ ಕಾಲೇಜಿನಲ್ಲಿ ಸಾವಿರದ ಗಡಿ ದಾಟಿತು ಸೋಂಕಿತರ ಸಂಖ್ಯೆ .

ಇವರ ಸಾಹಿತ್ಯ, ಬರಹ ಕ್ಷೇತ್ರದ ಸಾಧನೆಗಾಗಿ ಹಲವು ಪ್ರಶಸ್ತಿಗಳು ಲಭಿಸಿವೆ. ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಮೇವುಂಡಿ ಮಲ್ಲಾರಿ, ಮಕ್ಕಳ ಕಥಾ ಪುರಸ್ಕಾರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕಸಾಪ ದತ್ತಿ ಪ್ರಶಸ್ತಿ, ಹಿರಿಯ ನಾಗರಿಕರ ಸಾಹಿತ್ಯ ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳನ್ನು ಪಡೆದಿದ್ದರು.

ಗುಜರಾತ್‌ನಲ್ಲಿ ವೈದ್ಯೆಯಾಗಿರುವ ಮಗಳ ಜೊತೆಯಲ್ಲಿದ್ದ ಇವರು ಅಲ್ಲಿ ತಾವು ಬರೆದಿದ್ದ ‘ಸೂರ್ಯಾಸ್ತ’ ಪುಸ್ತಕದ ಬಿಡುಗಡೆಗಾಗಿ ಮಾಚ್‌ರ್‍ 20 ರಂದು ಮಂಗಳೂರಿಗೆ ಆಗಮಿಸಿದ್ದರು. 23 ರಂದು ಪುಸ್ತಕ ಬಿಡುಗಡೆಗೊಂಡಿದ್ದು, ಬಳಿಕ ಕೋವಿಡ್‌ ಪಾಸಿಟಿವ್‌ ಆಗಿ 25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಮಮ್ತಾಜ್‌ ಅವರ ನಿಧನಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್‌, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಬೆಳಪು ದೇವಿಪ್ರಸಾದ್‌ ಶೆಟ್ಟಿ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಶಿರ್ವ ಸಹಿತ ಸಾಹಿತ್ಯಕ್ಷೇತ್ರದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios