ಕಾಂಗ್ರೆಸ್ ಹಿರಿಯ ಮುಖಂಡರೊಂದಿಗೆ ಮುಸ್ಲಿಂ ಮುಖಂಡರು ಕೈ ತೊರೆದು ಬಿಜೆಪಿ ಸೇರ್ಪಡೆ
- ಮುಸ್ಲಿಂ ಸಮುದಾ ಯದ ಹೆಚ್ಚೆಚ್ಚು ಕಾರ್ಯಕರ್ತರು, ಮುಖಂಡರು ಬಿಜೆಪಿ ಸೇರ್ಪಡೆ
- ಅಲ್ಪಸಂಖ್ಯಾತರ ವಿರೋಧಿ ಎಂದು ಬೊಬ್ಬೆ ಹೊಡೆ ಯುವ ಪ್ರತಿಪಕ್ಷಗಳಿಗೆ ಸ್ಪಷ್ಟ ಸಂದೇಶ
- ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿಕೆ
ಬೆಂಗಳೂರು (ಆ.16): ಮುಸ್ಲಿಂ ಸಮುದಾ ಯದ ಹೆಚ್ಚೆಚ್ಚು ಕಾರ್ಯಕರ್ತರು, ಮುಖಂಡರು ಬಿಜೆಪಿ ಸೇರುತ್ತಿದ್ದು, ಈ ಮೂಲಕ ಪಕ್ಷವು ಅಲ್ಪಸಂಖ್ಯಾತರ ವಿರೋಧಿ ಎಂದು ಬೊಬ್ಬೆ ಹೊಡೆ ಯುವ ಪ್ರತಿಪಕ್ಷಗಳಿಗೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವೇ ನೂರಾರು ಮುಸ್ಲಿಂ ಮುಖಂಡರು ಸೇರಿದಂತೆ ಇತರರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು. ನಗರದ ರಾಜಮಹಲ್ ಎಕ್‌ಸ್ಟೆನ್ಷನ್‌ನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಆರ್. ಗೀತಾಂಜಲಿ, ಆರ್.ವೇಣುಕುಮಾರ್, ಶಕೀಲ್ ಅಹಮ್ಮದ್ ಮತ್ತವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು.
50 ಜನರ ಜೊತೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಮುಖಂಡ
ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅಶ್ವತ್ಥ ನಾರಾಯಣ, ಬಿಜೆಪಿ ರಾಷ್ಟ್ರೀಯ ಪಕ್ಷ. ಸಹಬಾಳ್ವೆ, ಸೌಹಾರ್ದತೆಯನ್ನು ನಂಬಿರುವ ಪಕ್ಷ. ವಿನಾಕಾರಣ ಪಕ್ಷದ ವಿರುದ್ಧ ಹುಯಿಲೆಬ್ಬಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಮೂಲಕ ಬಿಜೆಪಿ ಏನೆಂಬುದು ಗೊತ್ತಾಗಲಿದೆ ಎಂದರು.
ಪಕ್ಷಕ್ಕೆ ಇಷ್ಟು ಪ್ರಮುಖರು, ಮುಖಂಡರು, ಕಾರ್ಯಕರ್ತರು ಸೇರ್ಪಡೆಯಾಗಿರುವುದು ಸಂತಸವ ನ್ನುಂಟು ಮಾಡಿದೆ. ಎಲ್ಲರೂ ಪಕ್ಷವನ್ನು ಕಟ್ಟಲಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಲು ಇವರೆಲ್ಲರೂ ಶ್ರಮಿಸಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವೇ ಮುಸ್ಲಿಂ ಸಮುದಾ ಯದವರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸೇರಿರುವುದು ನನಗೆ ಅಪಾರ ಸಂತೋಷವನ್ನುಂಟು ಮಾಡಿದೆ. ರಾಜ್ಯದ ಮುಂದಿನ ರಾಜಕೀಯಕ್ಕೆ ಇದು ಸ್ಪಷ್ಟ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.