Asianet Suvarna News Asianet Suvarna News

50 ಜನರ ಜೊತೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಮುಖಂಡ

  • ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮುಖಂಡ
  • 50 ಬೆಂಬಲಿಗರೊಂದಿಗೆ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ
Dharwad JDS Leader Kareppa sunagara joins BJP with his supporters snr
Author
Bengaluru, First Published Aug 15, 2021, 12:19 PM IST
  • Facebook
  • Twitter
  • Whatsapp

ಧಾರ​ವಾ​ಡ (ಆ.15): ಯಾಲಕ್ಕಿ ಶೆಟ್ಟರ್‌ ಕಾಲನಿಯ ಅಂಬೇಡ್ಕರ್‌ ನಗರದ ನಿವಾಸಿ, ಕರೆಪ್ಪ ಸುಣಗಾರ ಜೆಡಿಎಸ್‌ ತೊರೆದು ತಮ್ಮ ಬೆಂಬಲಿಗರೊಂದಿಗೆ ಶನಿ​ವಾರ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಅವರ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಸಿಗದ ಸಚಿವ ಸ್ಥಾನ: ಅತೃಪ್ತ ಶಾಸಕರಿಂದ ಸಭೆ, ಬೆಲ್ಲದ ಹೇಳಿದ್ದೇನು?

ಕರೆಪ್ಪ ಸುಣಗಾರ ಹಾಗೂ ಅವರ ಬೆಂಬಲಿಗರನ್ನು ಪಕ್ಷದ ಶಾಲು ಹಾಕಿ ಸ್ವಾಗತಿಸಿ ಶುಭ ಕೋರಿದ ಶಾಸಕ ಅರವಿಂದ ಬೆಲ್ಲದ, ಪಕ್ಷದ ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯ ಮಾಡುವಂತೆ ಸಲಹೆ ನೀಡಿ​ದರು.

ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಇಬ್ಬರು ಕಾಂಗ್ರೆಸ್ ಮಾಜಿ ಶಾಸಕರು

 ಈ ವೇಳೆ ವಾರ್ಡ್‌ ನಂಬರ್‌ ನಂ. 23ರ ಪಕ್ಷದ ಪ್ರಮುಖರಾದ ಎನ್‌.ಆರ್‌. ಕುಲಕರ್ಣಿ, ವಕೀ​ಲ​ರಾದ ಶಿವಾನಂದ ಭಾವಿಕಟ್ಟಿ, ಮಹಾಂತೇಶ ಬೇತೂರಮಠ, ಅನಿಲ್‌ ಎಲಿಗಾರ, ಹೇಮಂತ್‌ ಬಿಸರಳ್ಳಿ ಹಾಗೂ ಹಿರಿಯರಾದ ಎಂ.ಆರ್‌. ಬಸವರಾಜಪ್ಪ, ವಿ.ಎಸ್‌. ಡುಮ್ಮನವರ, ಬಿ.ಎಸ್‌. ದೊಡಮನಿ, ಶಂಕರ ದೇವರೆಡ್ಡಿ, ರಾಜು ತುಪಸುಂದರ, ಗಾಡಗೋಳಿ ಸರ್‌, ಕೆ.ಐ. ನಿಕ್ಕಮ್ಮನವರ, ಶಿವಾಜಿ ತಳವಾರ, ಅರ್ಜುನ್‌ ಸೊಗಲದ, ಅಶೋಕ ಭಜಂತ್ರಿ, ಹನುಮಂತಪ್ಪ ಮರಡ್ಡಿ, ಪುಂಡಲಿಕ ಕುಂಬಾರ ಇದ್ದರು. ಕರೆಪ್ಪ ಸುಣ​ಗಾರ, ಗುರು​ನಾಥ ಬಾಡಗಿ ಸೇರಿ​ದಂತೆ ಸುಮಾರು 50ಕ್ಕೂ ಹೆಚ್ಚು ಯುವಕರು ಬಿಜೆಪಿ ಸೇರಿ​ದರು.

Follow Us:
Download App:
  • android
  • ios