Asianet Suvarna News Asianet Suvarna News

ಕೊಡಗಿನಲ್ಲಿ ಭಾನು​ವಾರ, ಮಂಗ​ಳ​ವಾರ ಸ್ವಂಯ ಪ್ರೇರಿತ ಬಂದ್‌

ಕೊರೋನಾ ಸೋಂಕು ವೈರಸ್‌ ಸೊಂಕು ಹರಡುವಿಕೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಂಚಿನಲ್ಲಿರುವ ಕೊಡಗಿನ ಗಡಿಪ್ರದೇಶವಾದ ಕುಟ್ಟಪಟ್ಟಣದಲ್ಲಿ ವಾರದ ಮಂಗಳವಾರ ಹಾಗೂ ಭಾನುವಾರ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂ ಲಾಕ್‌ಡೌನ್‌ ಮಾಡಲು ಸ್ಥಳೀಯ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರವನ್ನು ಕುಟ್ಟಗ್ರಾ.ಪಂ. ವ್ಯಾಪ್ತಿಗೆ ಅನ್ವಯಿಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Self lockdown in madikeri as covid19 cases increase
Author
Bangalore, First Published Jun 30, 2020, 9:53 AM IST

ಪೊನ್ನಂಪೇಟೆ(ಜೂ.30): ಕೊರೋನಾ ಸೋಂಕು ವೈರಸ್‌ ಸೊಂಕು ಹರಡುವಿಕೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಂಚಿನಲ್ಲಿರುವ ಕೊಡಗಿನ ಗಡಿಪ್ರದೇಶವಾದ ಕುಟ್ಟಪಟ್ಟಣದಲ್ಲಿ ವಾರದ ಮಂಗಳವಾರ ಹಾಗೂ ಭಾನುವಾರ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂ ಲಾಕ್‌ಡೌನ್‌ ಮಾಡಲು ಸ್ಥಳೀಯ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರವನ್ನು ಕುಟ್ಟಗ್ರಾ.ಪಂ. ವ್ಯಾಪ್ತಿಗೆ ಅನ್ವಯಿಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕುಟ್ಟಮಸೀದಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ತಾ.30ರಂದು (ಇಂದು) ಕುಟ್ಟದಲ್ಲಿ ನಡೆಯುವ ಸಂತೆಯನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ ವಾರದ ಇತರ ದಿನಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಚಿಕಿತ್ಸೆ ಸಿಗದೇ ಬಲಿಯಾದ ಮಗು ಎದೆಗಪ್ಪಿಕೊಂಡು ಪೋಷಕರ ಆಕ್ರಂದನ!

ಸಭೆಯಲ್ಲಿ ಕುಟ್ಟಗ್ರಾ.ಪಂ. ವ್ಯಾಪ್ತಿಯ ಎಲ್ಲ ಹೋಂಸ್ಟೇಗಳನ್ನು ಸೋಮವಾರದಿಂದ ಅನ್ವಯವಾಗುವಂತೆ ಮುಂದಿನ ಮೂರು ವಾರದ ವರೆಗೆ ಮುಚ್ಚುವುದಾಗಿ ಸಭೆಯಲ್ಲಿ ಹಾಜರಿದ್ದ ಹೋಂಸ್ಟೇ ಮಾಲೀಕರು ತಮ್ಮ ಸ್ವಯಂ ನಿರ್ಧಾರವನ್ನು ಪ್ರಕಟಿಸಿದರು.

ಪೊಲೀಸ್‌ ಇಲಾಖೆಯ ಪರವಾಗಿ ಸಭೆಯಲ್ಲಿ ಹಾಜರಿದ್ದ ಎಎಸ್‌ಐ ಮೊಹಿದ್ದೀನ್‌ ಮಾತನಾಡಿ ನಾಗರಿಕರು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಹಾಕಬೇಕು. ಇಲ್ಲದಿದ್ದರೆ 200 ರು. ದಂಡ ವಿಧಿಸಲಾಗುವುದು. ಈ ನಿಟ್ಟಿನಲ್ಲಿ ಕುಟ್ಟವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಕೇರಳದಿಂದ ಗಡಿಗೇಟ್‌ ಮೂಲಕ ಜಿಲ್ಲೆಗೆ ಪ್ರವೇಶಿಸುವುದು ಅಥವಾ ಕೇರಳಕ್ಕೆ ತೆರಳುವುದನ್ನು ತಡೆಗಟ್ಟಲು ರಸ್ತೆಗೆ ಮಣ್ಣು ಹಾಕಿ ತಡೆ ಮಾಡಲಾಗಿದೆ. ಆದರೂ ಆ ಮೂಲಕ ತೆರಳಲು ಪ್ರಯತ್ನಿಸುವುದನ್ನು ತಡೆಯಲು ಗಡಿಗೇಟಿನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರೈತ ಮುಖಂಡ​ರನ್ನು ಕಚೇರಿ ಹೊರಗೆ ನಿಲ್ಲಿ​ಸಿದ ಅಧಿ​ಕಾ​ರಿ!

ಸಭೆಯಲ್ಲಿ ಕುಟ್ಟವರ್ತಕರ ಸಂಘದ ಅಧ್ಯಕ್ಷ ಮುಕ್ಕಾಟೀರ ನವೀನ್‌ ಅಯ್ಯಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಪಿಡಿಒ ಎಚ್‌.​ಎಸ್‌. ಅನೀಲ್‌ ಕುಮಾರ್‌, ಸದಸ್ಯರಾದ ಎಚ್‌.ವೈ. ರಾಮಕೃಷ್ಣ, ತೀತಿರ ರುಕ್ಮಿಣಿ, ಹೋಂಸ್ಟೇ ಮಾಲೀಕರಾದ ಮಚ್ಚಮಾಡ ಪ್ರಕಾಶ್‌, ತೀತಿರ ಕಬೀರ್‌, ತೀತಿರ ರಾಜ ಮತ್ತಿತರು ಉಪ​ಸ್ಥಿ​ತ​ರಿ​ದ್ದರು.

Follow Us:
Download App:
  • android
  • ios