Chikkaballapura : ಖರ್ಗೆ ಆಯ್ಕೆ, ಜೋಡೊ ‘ಕೈ’ಗೆ ಶಕ್ತಿ ತರಲಿದೆ
ಈಗಾಗಲೇ ಭಾರತ್ ಜೋಡೋ ಯಾತ್ರೆ ಒಂದು ಕಡೆ ಕಾಂಗ್ರೆಸ್‌ಗೆ ಶಕ್ತಿ ತುಂಬುತ್ತಿದ್ದರೆ ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ತಂದುಕೊಡಲಿದೆಯೆಂದು ಕಾಂಗ್ರೆಸ್ ವಕ್ತರಾ ರಮೇಶ್ ಬಾಬು ಹೇಳಿದರು.
ಚಿಕ್ಕಬಳ್ಳಾಪುರ (ನ.08): ಈಗಾಗಲೇ ಭಾರತ್ ಜೋಡೋ ಯಾತ್ರೆ ಒಂದು ಕಡೆ ಕಾಂಗ್ರೆಸ್‌ಗೆ ಶಕ್ತಿ ತುಂಬುತ್ತಿದ್ದರೆ ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ತಂದುಕೊಡಲಿದೆಯೆಂದು ಕಾಂಗ್ರೆಸ್ ವಕ್ತರಾ ರಮೇಶ್ ಬಾಬು ಹೇಳಿದರು.
ಚಿಕ್ಕಬಳ್ಳಾಪುರ (Chikkaballapura) ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, AICC ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕದಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ನಲ್ಲಿ ಮೂರನೇ ಶಕ್ತಿ ಕೇಂದ್ರ ಉದಯ ಆಗಿದೆಂದು ಬಿಜೆಪಿ ನಾಯಕರು ಬಿಂಬಿಸಲು ಹೊರಟಿದ್ದು ಅದು ಸಂಪೂರ್ಣ ಸುಳ್ಳು ಎಂದರು.
ಗುಂಪುಗಾರಿಕೆ ಕಡಿಮೆ ಆಗಲಿದೆ
ಖರ್ಗೆ ನೇಮಕದಿಂದ ಕರ್ನಾಟದೊಳಗೆ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆ ಕಡಿಮೆಯಾಗಿ ಪಕ್ಷದ ಶಕ್ತಿ ಹೆಚ್ಚಾಗಲಿದೆ. ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಪ್ರಕಾರ ಯಾರೇ ಪಿಸಿಸಿ (ಶಿವಕುಮಾರ್) ಅಧ್ಯಕ್ಷರಾದರೂ ಅವರು ಒಂದು ಶಕ್ತಿ ಕೇಂದ್ರ. ಅದೇ ರೀತಿ ಶಾಸಕಾಂಗ ಪಕ್ಷ ನಾಯಕರು ಯಾರು ಆಗಿರುತ್ತಾರೆ ಅವರು ಒಂದು ಶಕ್ತಿ ಕೇಂದ್ರ. ಇಬ್ಬರ ನಡುವೆ ಏನೇ ವ್ಯತ್ಯಾಸ ಆದರೂ ಸರಿಪಡಿಸುವ ಶಕ್ತಿ ಮಲ್ಲಿಕಾರ್ಜುನ ಖರ್ಗೆಗೆ ಇದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದ್ದಾರೆಂದರು.
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರಲ್ಲಿ ಪಕ್ಷದ ಶಾಸಕರಾಗಿದ್ದಾರೆ. 2023ರ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಚುನಾವಣೆ ಕೇವಲ 6 ತಿಂಗಳು ಇದೆ. ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಅಧಿಕೃತ ಘೋಷಣೆ ಬಾಕಿದೆ ಇದೆ. ಎಲ್ಲಾ ಕಡೆ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸ್ಥಳೀಯರನ್ನೆ ಅಭ್ಯರ್ಥಿ ಮಾಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಪಕ್ಷಕ್ಕೂ ಪೂರಕ ವಾತಾವರಣ ಇದ್ದು ತಿಂಗಳೊಳಗೆ ಚಿಕ್ಕಬಳ್ಳಾಪುರಕ್ಕೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದರು.
ಸಿದ್ದರಾಮಯ್ಯಗೆ ವರುಣಾ ಸೂಕ್ತ
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ನಿಲ್ಲಬೇಕೆಂದು ಬಹಳಷ್ಟುಜನ ಅಪೇಕ್ಷೆ ಪಟ್ಟಿದ್ದಾರೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಅವರು ವರುಣಾದಲ್ಲಿಯೇ ನಿಲ್ಲುವುದು ಉತ್ತಮ ಎಂದು ರಮೇಶ್ ಬಾಬು ಹೇಳಿದರು. ಅವರು 224 ಕ್ಷೇತ್ರದಲ್ಲೂ ಕೂಡ ಸುತ್ತಬೇಕು, ಅವರನ್ನು ಒಂದು ಕಡೆ ಕಟ್ಟಿಹಾಕುವ ಸಂದರ್ಭ ಸೃಷ್ಟಿಆಗಬಾರದು. ಕೋಲಾರದಲ್ಲಿ ನಿಂತರೂ ಅವರು ಗೆಲ್ಲತ್ತಾರೆ. ಆದರೆ ವರುಣಾ ಕ್ಷೇತ್ರ ಅವರಿಗೆ ಎಲ್ಲಕ್ಕಿಂತ ಸೂಕ್ತವೆಂದರು.
ಖರ್ಗೆಗೆ ಅಭಿನಂದನೆ
ಬೆಂಗಳೂರು : ‘ಕೆಪಿಸಿಸಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಭರವಸೆ ನೀಡುತ್ತಿದ್ದೇನೆ. ಬಿಜೆಪಿಯ ಭ್ರಷ್ಟಹಾಗೂ ನಿಷ್ಕ್ರಿಯ ಸರ್ಕಾರವನ್ನು ಕಿತ್ತೊಗೆದು ಆ ಮೂಲಕ ನೀವು ಎಐಸಿಸಿ ಅಧ್ಯಕ್ಷರಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಇದರಲ್ಲಿ ಯಾವ ಸಂಶಯವೂ ಬೇಡ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭರವಸೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಭಾನುವಾರ ಹಮ್ಮಿಕೊಂಡಿದ್ದ ‘ಸರ್ವೋದಯ ಸಮಾವೇಶದಲ್ಲಿ’ ಮಾತನಾಡಿದರು.
‘ಎಐಸಿಸಿ ಅಧ್ಯಕ್ಷರಾಗಿ ಅಭಿನಂದನೆ ಸ್ವೀಕರಿಸುತ್ತಿರುವುದಕ್ಕೆ ಸಂತೋಷವಿಲ್ಲ, ವಿಧಾನಸಭೆ ಚುನಾವಣೆ ಗೆದ್ದರಷ್ಟೇ ಸಂತೋಷ ಎಂದು ಖರ್ಗೆ ಹೇಳಿದ್ದಾರೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಭ್ರಷ್ಟಬಿಜೆಪಿಯನ್ನು ಕಿತ್ತೊಗೆದು ತನ್ಮೂಲಕ ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಹೇಳಿದರು. ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಆದರೆ ನಮಗೆ ಇರುವ ಸವಾಲು ಕರ್ನಾಟಕದಲ್ಲಿ ಕೋಮುವಾದಿ, ಬಡವರ ವಿರೋಧಿ, ರೈತರ ಮತ್ತು ಅಲ್ಪಸಂಖ್ಯಾತರ ವಿರೋಧಿ ಸರ್ಕಾರವನ್ನು ಕಿತ್ತು ಹಾಕುವುದು. ದ್ವೇಷ ರಾಜಕಾರಣ, ನಿರುದ್ಯೋಗ, ರೈತರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡಿಲ್ಲ. ಶೇ.40 ರಷ್ಟುಕಮಿಷನ್ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ಹೀಗಾಗಿ ನನ್ನ ಪ್ರಕಾರ ರಾಜ್ಯದ ಜನತೆ ಈಗಾಗಲೇ ಈ ಬಗ್ಗೆ ಸಂಕಲ್ಪ ಮಾಡಿದ್ದಾರೆ ಎಂದರು.
ಸಿಎಂ ಆಗುವ ಸಿದ್ದರಾಮಯ್ಯ ಕನಸು ಭಗ್ನ ಆಗುತ್ತೆ: ಸಚಿವೆ ಶೋಭಾ ಕರಂದ್ಲಾಜೆ
ಖರ್ಗೆ ಸಮಚಿತ್ತದ ರಾಜಕಾರಣಿ: ಖರ್ಗೆ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ, ಅವರು ಆಡಳಿತ ನಡೆಸಿರುವ ಎಲ್ಲಾ ಇಲಾಖೆಗಳಲ್ಲೂ ತಮ್ಮೆ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಬಡವರ ಪರವಾದ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ನಾನು ಕಂಡಂತೆ ಕರ್ನಾಟಕದಲ್ಲಿ ಸಮಚಿತ್ತವಿರುವ, ಮೌಢ್ಯವಿರೋಧಿ, ಪ್ರಗತಿಪರ ರಾಜಕಾರಣಿಯಿದ್ದರೆ ಅದು ಮಲ್ಲಿಕಾರ್ಜುನ ಖರ್ಗೆ ಮಾತ್ರ. ಅವರು ಅಧ್ಯಕ್ಷ ಗಾದಿ ಹಿಡಿದಿರುವುದು 7 ಕೋಟಿ ಕನ್ನಡಿಗರಿಗೆ ಹೆಮ್ಮೆ ಜತೆಗೆ, ಕಾಂಗ್ರೆಸ್ ದೊಡ್ಡ ಶಕ್ತಿ ತಂದುಕೊಟ್ಟಿದೆ ಎಂದರು.