Asianet Suvarna News Asianet Suvarna News

ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದ ಬೇವು ಲೇಪಿತ ಯೂರಿಯಾ ಜಪ್ತಿ

ಬೇವು ಲೇಪಿತಾ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆ ಉದ್ದೇಶಕ್ಕೆ ಬಳಸಲು ಬಳ್ಳಾರಿಯಿಂದ ಲೋಡ್ ಮಾಡಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ತಾಲೂಕಿನ ಕಿಬ್ಬನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Seized of neem-coated urea being transported outside the state  snr
Author
First Published Dec 14, 2023, 8:55 AM IST

 ತಿಪಟೂರು:  ಬೇವು ಲೇಪಿತಾ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆ ಉದ್ದೇಶಕ್ಕೆ ಬಳಸಲು ಬಳ್ಳಾರಿಯಿಂದ ಲೋಡ್ ಮಾಡಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ತಾಲೂಕಿನ ಕಿಬ್ಬನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಾಣಿಜ್ಯ ತೆರಿಗೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ಅನುಮಾನಗೊಂಡು ಜಪ್ತಿ ಮಾಡಿ ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ಹೆಸರು ಮತ್ತು ವಿಳಾಸ ನಕಲಿ ಎಂಬುದಾಗಿ ದೃಢಪಟ್ಟಿದೆ. ನಂತರ ಕೃಷಿ ಇಲಾಖೆ ಜಾಗೃತ ಕೋಶಕ್ಕೆ ಸಾರ್ವಜನಿಕ ಅನಾಮಧೇಯ ದೂರು ಬಂದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಗಮನಕ್ಕೆ ತಂದಾಗ ಸದರಿ ರಸಗೊಬ್ಬರವನ್ನು ರೈತರಿಗೆ ಮಾತ್ರ ವಿತರಿಸಲು ಅವಕಾಶವಿದ್ದು ಕೈಗಾರಿಕೆ ಬಳಸಲು ಅವಕಾಶವಿಲ್ಲ ಎಂಬುದಾಗಿ ತನಿಖೆಯ ನಂತರ ತಿಳಿದು ಬಂದಿದೆ.

ಹೊರ ರಾಜ್ಯಕ್ಕೆ ನಿಷೇಧ ಮಾಡಿರುವ ಬಗ್ಗೆ ಲಿಖಿತ ಮಾಹಿತಿ ಮೂಲಕ ಪರಿಶೀಲನೆ ಕೈಗೊಂಡು ದಂಡ ವಸೂಲಿ ಮಾಡಿ 17.44 ಲಕ್ಷ ರು. ಮೌಲ್ಯದ ರಸಗೊಬ್ಬರ ಮತ್ತು ಲಾರಿ ಸಮೇತ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮಕ್ಕೆ ಹಾಗೂ ತನಿಖೆ ಮಾಡಲು ದೂರು ನೀಡಲಾಗಿದೆ. ಈಗಾಗಲೇ ಎಫ್‌ಐಆರ್ ದಾಖಲಿಸಿ ವಾಹನ ಮಾಲೀಕರು, ವಾಹನ ಚಾಲಕರು ಸರಬರಾಜುದಾರರ ಹಾಗೂ ಖರೀದಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ದಾಳಿಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ವಿ.ಕೆ. ಮಂಜುನಾಥ್, ಸಹಾಯಕ ಆಯುಕ್ತ ನಾಗರಾಜ ಸಿ. ಗಂಗನಗೌಡ, ಸಹಾಯಕ ಕೃಷಿ ನಿರ್ದೇಶಕ ವೈ. ಅಶ್ವತ್ಥ್ ನಾರಾಯಣ, ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ, ಇನ್ಸ್‌ಪೆಕ್ಟರ್ ಮಹೇಶ್ ಮಾಳಿ, ಆರಕ್ಷಕ ಎನ್. ಮಹೇಶ್ ಇದ್ದರು.

Follow Us:
Download App:
  • android
  • ios