ಅಭಿವೃದ್ಧಿ ನೋಡಿ ಕೈ ಹಿಡಿಯಿರಿ : ಶಾಸಕ ವೆಂಕಟರಮಣಪ್ಪ
ನನ್ನ ಅಧಿಕಾರ ಅವಧಿಯ ಜನಪರ ಸೇವೆ, ಶಾಶ್ವತವಾದ ಅಭಿವೃದ್ಧಿ ಪರಿಗಣಿಸಿ ತಮ್ಮ ಪುತ್ರ ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್‌ರನ್ನ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿ ಡಿ.ಕೆ.ಶಿವಕುಮಾರ್ ಕೈಬಲಪಡಿಸುವಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಮಣಪ್ಪ ತಾಲೂಕಿನ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಪಾವಗಡ : ನನ್ನ ಅಧಿಕಾರ ಅವಧಿಯ ಜನಪರ ಸೇವೆ, ಶಾಶ್ವತವಾದ ಅಭಿವೃದ್ಧಿ ಪರಿಗಣಿಸಿ ತಮ್ಮ ಪುತ್ರ ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್‌ರನ್ನ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿ ಡಿ.ಕೆ.ಶಿವಕುಮಾರ್ ಕೈಬಲಪಡಿಸುವಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಮಣಪ್ಪ ತಾಲೂಕಿನ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಶಾಸಕ ವೆಂಕಟರಮಣಪ್ಪ, ತಮ್ಮ ಅಧಿಕಾರ ಅವಧಿಯಲ್ಲಿ ತಾಲೂಕಿನದ್ಯಂತ ನೂರಾರು ಕೋಟಿಯ ಆನೇಕ ಪ್ರಗತಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ವಿಚಾರ ನಿಮ್ಮಗೆಲ್ಲಾ ಗೊತ್ತಿದೆ. ತಾಲೂಕಿನದ್ಯಂತ ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ರಸ್ತೆ ಪ್ರಗತಿ, ರೈತರ ಜಮೀನುಗಳಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ, ಶುಭ ಸಮಾರಂಭಗಳಿಗೆ ಸಮುದಾಯ ಭವನ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವೈಯುಕ್ತಿಕ ಸಹಾಯ, ರೈಲ್ವೆ ಮಾರ್ಗ ಪ್ರಗತಿ, ಹೊಸ ಶಾಲಾ ಕಾಲೇಜುಗಳ ನಿರ್ಮಾಣ ಹಾಗೂ ದುರಸ್ತಿ, ಚರಂಡಿ ವ್ಯವಸ್ಥೆ, ಸಹಿತ ಹಲವು ಪ್ರಗತಿ ಕಾರ್ಯಕ್ಕೆ ಸಹಕರಿಸಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಜನಪರ ವಾದ ಕೆಲಸ ಮಾಡಿದ್ದೇನೆ. ಎಲ್ಲರನ್ನು ಸಮಾನತೆಯಿಂದ ಕಂಡಿದ್ದು, ತಮ್ಮ ಪುತ್ರ ವೆಂಕಟೇಶ್ ಸಹ ಜನತೆಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ನಿಮಗೆ ಕೈಮುಗಿದು ಬೇಡಿಕೊಳ್ಳುತ್ತೇನೆ, ನಮ್ಮ ಸೇವೆ ಪರಿಗಣಿಸಿ, ಸಹಾಯ ಮಾಡಿ. ಕಾಂಗ್ರೆಸ್ ಬೆಂಬಲಿಸುವ ಮೂಲಕ ತಮ್ಮ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್‌ರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಇಲ್ಲಿಇದಕ್ಕೂ ಮೊದಲು ಕಾರ್ಯಕರ್ತರ ಸಮಾವೇಶದ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾವಗಡಕ್ಕೆ ಆಗಮಿಸಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಇಲ್ಲಿನ ಅಭ್ಯರ್ಥಿ ಎಚ್.ವಿ.ವೆಂಕಟೇಶ್‌ರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಗಾಳಿ
ಚನ್ನಪಟ್ಟಣ(ಮೇ.08): ಕಳೆದ ಬಾರಿ ಜೆಡಿಎಸ್ 38 ಸ್ಥಾನ ಗೆದ್ದಿದ್ದರೂ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬಾರದು ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ಕೆಪಿಸಿಸಿ ಅಧಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಪರ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಅಂದು ಸಮ್ಮಿಶ್ರ ಸರ್ಕಾರವನ್ನು ಉಳಿಸಲು ನಾನು ಬಾಂಬೆವರೆಗೆ ಹೋಗಿ ಹೋರಾಟ ಮಾಡಿದೆ. ಆದರೂ ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಜೋಡೆತ್ತಿನ ಸರ್ಕಾರವಿದ್ದು, ಕಾಂಗ್ರೆಸ್ ಬೆಂಬಲ ನೀಡಿದರೂ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಹಾಗೂ ಮಂಡ್ಯದ ಜನ ಏನು ತೀರ್ಮಾನ ಮಾಡಿದರು ಎಂದು ಎಲ್ಲರಿಗೂ ಗೊತ್ತಿದೆ. 8 ಜನ ಶಾಸಕರು, ಮೂವರು ಸಚಿವರು ಸೇರಿದಂತೆ ಜೋಡೆತ್ತಿನ ಸರ್ಕಾರದ ಬಹುತೇಕರು ಪ್ರಚಾರ ನಡೆಸಿದರೂ, ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಪರ ಜನ ಏನು ತೀರ್ಮಾನ ಮಾಡಿದರು ಎಂದು ಪ್ರಶ್ನಿಸಿದ ಅವರು, ರಾಮನಗರದಲ್ಲಿ ಅಂಬರೀಶ್ ಅವರನ್ನೇ ಜನ ಸೋಲಿಸಿ, ಸಿ.ಎಂ.ಲಿಂಗಪ್ಪ ಅವರನ್ನು ಗೆಲ್ಲಿಸಿದರು. ರಾಜಕೀಯದಲ್ಲಿ ಏನೂ, ಯಾವುದೂ ಶಾಶ್ವತವಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್ ಕಣ್ಣೀರಧಾರೆ!
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹದು. ಡಿ.ಟಿ.ರಾಮು, ಸಾದತ್ ಅಲಿಖಾನ್ ಅವರನ್ನು ಇಲ್ಲಿನ ಜನ ಬೆಂಬಲಿಸಿದ್ದಾರೆ. ಇಲ್ಲಿನ ಜನ ಬಯಸಿದರೆ ಏನು ಬದಲಾವಣೆ ಬೇಕಾದರೂ ಮಾಡುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಸ್ಪರ್ಧಿಸಿದ್ದಾರೆ. ಆದರೆ, ಇಲ್ಲಿಂದ ಡಿ.ಕೆ.ಶಿವಕುಮಾರ್ ಅವರೇ ಅಭ್ಯರ್ಥಿ ಎಂದು ತಿಳಿದು ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಮುಖ್ಯಮಂತ್ರಿ, ಸ್ಪೀಕರ್ ಗಾದಿಯಂತಹ ಉನ್ನತ ಹುದ್ದೆ ಅಲಂಕರಿಸಿದ್ದ ಜಗದೀಶ್ ಶೆಟ್ಟರ್, ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ, ಶಿವಲಿಂಗೇಗೌಡ, ಎಂಎಲ್‌ಸಿ ಆಗಿದ್ದ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಸುಮ್ಮನೆ ಬರಲು ಇವರೇನು ದಡ್ಡರಲ್ಲ. ಕಾಂಗ್ರೆಸ್‌ನತ್ತ ಗಾಳಿ ಬೀಸುತ್ತಿರುವುದರಿಂದಲೇ ಇವರೆಲ್ಲ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ರೈತರ, ಕಾರ್ಮಿಕರ ಕಲ್ಯಾಣಕ್ಕೆ ಯಾವುದೇ ಯೋಜನೆ ಜಾರಿಗೆ ತರಲಿಲ್ಲ. ಗ್ಯಾಸ್ ಬೆಲೆ 440ರುಗಳಿಂದ 1200 ರು.ಗಳಿಗೆ ಏರಿಕೆಯಾಗಿದೆ. ದಿನಸಿ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಬಿಜೆಪಿಯಾಗಲಿ ಜೆಡಿಎಸ್ ಆಗಲಿ ಬಡವರು, ರೈತರ ಬದುಕಿನಲ್ಲಿ ಬದಲಾವಣೆ ತರಲು ಯಾವುದೇ ಕೆಲಸ ಮಾಡಲಿಲ್ಲ. ಎಲ್ಲ ಸ್ತರದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿದ್ದು, ಈ ಬಾರಿ ರಾಜ್ಯದ ಜನ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.