Asianet Suvarna News Asianet Suvarna News

ಕೊಡಗಿನ ದುರಂತದ ಬಗ್ಗೆ ಆಘಾತಕಾರಿ ಮಾಹಿತಿ ಕೊಟ್ಟ ಭೂ ವಿಜ್ಞಾನಿಗಳು

ಭಾರೀ ಭೂ ಕುಸಿತ ಸೇರಿದಂತೆ ಮಹಾಮಳೆಗೆ ತತ್ತರಿಸಿದ ಕೂಡಗು ಜಿಲ್ಲೆ ಆಘಾತದಿಂದ ನಿಧಾನವಾಗಿ ಹೊರಬರುತ್ತಿದ್ದು,. ದುರಂತಗಳಿಂದ ನಲುಗಿ ಹೋಗಿರುವ ಕೆಚ್ಚೆದೆಯ ಕೊಡವರು ಸುಧಾರಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಭೂ ವಿಜ್ಞಾನಿಗಳು ಕೊಡಗಿನ ದುರಂತದ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

scientists reveals shocking facts about two hills land sliding In Kodagu
Author
Bengaluru, First Published Aug 17, 2019, 4:06 PM IST

ಕೊಡಗು (ಆ.17): ಭಾರೀ ಮಳೆ ಹಿನ್ನಲೆ ಕೊಡಗಿನಲ್ಲಿ ಬೆಟ್ಟ, ಗುಡ್ಡ ಕುಸಿತ ಹೆಚ್ಚಾಗಿದ್ದು,  ಮತ್ತೆ ಎರಡು ಬೆಟ್ಟಗಳು ಕುಸಿಯುವ ಆತಂಕ ಎದುರಾಗಿದೆ. ಇದರಿಂದ ಜನತೆ ಭಯದಿಂದ ದಿನ ದೂಡುವಂತಾಗಿದೆ.

ಬೆಟ್ಟ, ಗುಡ್ಡ ಕುಸಿಯುವ ಸಂಭವಿಸಿದ್ದು ಸಾರ್ವಜನಿಕರು ಎಚ್ಚರದಿಂದ ಇರುವಂತೆ ಈಗಾಗಲೇ ಜಿಲ್ಲಾಡಳಿತ ಸೂಚಿಸಿದೆ. ಇದರಿಂದ ಸಾರ್ವಜನಿಕರಲ್ಲಿ ಭಯ ಶುರುವಾಗಿದೆ.

ಕೊಡಗಿನ ಪಟ್ಟಣಕ್ಕೆ ಎದುರಾಗಿದೆ ಭೂ ಸಮಾಧಿ ಆತಂಕ

ಭೂ ವಿಜ್ಞಾನಿಗಳ ಪರಿಶೀಲನೆ
ವಿರಾಜಪೇಟೆ ನಗರದ ನೆಹರು ನಗರ ಮತ್ತು ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಸಂಬಂಧ ಸ್ಥಳಕ್ಕೆ ಭೂ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕಪೀಲ್ ಸಿಂಗ್ ಮತ್ತು ಸುನಂದ ಬಸು ವಿಜ್ಞಾನಿಗಳ ತಂಡ ಬಿರುಕಗೊಂಡಿರುವ ಗುಡ್ಡಗಳನ್ನು ಪರಿಶೀಲನೆ ನಡೆಸಿದ್ದು, ಮಳೆಗಾಲದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಆಘಾತಕಾರಿ ಮಾಹಿತಿಯನ್ನು ನೀಡಿದರು.

ಕರ್ನಾಟಕ ಪ್ರವಾಃದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೀಗಾಗಿ ಇಲ್ಲಿನ 54 ಕುಟುಂಬಗಳನ್ನು ಆಗಸ್ಟ್ 31 ವರೆಗೆ ನಿರಾಶ್ರಿತ ಶಿಬಿರದಲ್ಲೇ ಇರಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಧ್ಯಮಗಳಿಗೆ ತಿಳಿಸಿದರು.

ಈಗಾಗಲೇ ಭಾರೀ ಭೂ ಕುಸಿತ ಸೇರಿದಂತೆ ಮಹಾಮಳೆಗೆ ತತ್ತರಿಸಿದ ಕೊಡವರು ಸುಧಾರಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಭೂ ವಿಜ್ಞಾನಿಗಳು ನೀಡಿರುವ ಆಘಾತಕಾರಿ ಮಾಹಿತಿ ನೀಡಿರುವುದು, ಕೊಡವರ ನಿದ್ದೆಗೆಡಿಸಿದೆ.

Follow Us:
Download App:
  • android
  • ios