ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ಕೆಲಸ ಕೊಡದೆ ಹುನ್ನಾರ: ಎನ್.ಮಹದೇವಸ್ವಾಮಿ

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ಕಾಮಗಾರಿಯಲ್ಲಿ ಮೀಸಲಾತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದರೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಕೆಲಸ ಕೊಡದೆ ದಲಿತ ಗುತ್ತಿಗೆದಾರರನ್ನು ದೂರ ಇಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ರಾಜ್ಯ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ ಆರೋಪಿಸಿದರು.

Scheduled Caste and Scheduled Caste Contractors not given jobs in Hunan: N. Mahadevaswamy snr

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ಕಾಮಗಾರಿಯಲ್ಲಿ ಮೀಸಲಾತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದರೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಕೆಲಸ ಕೊಡದೆ ದಲಿತ ಗುತ್ತಿಗೆದಾರರನ್ನು ದೂರ ಇಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ರಾಜ್ಯ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಾವರಿ ನಿಗಮದ ಜಿಲ್ಲೆಯ 7 ಹೇಮಾವತಿ ಎಡದಂಡೆ ನಾಲಾ ವಿಭಾಗ, ಕೃಷ್ಣ ರಾಜಸಾಗರ, ಮಳವಳ್ಳಿ ವಿಭಾಗ, ವಿಸಿ ವಿಭಾಗಗಳ ಕಾರ್‍ಯಪಾಲಕ ಅಭಿಯಂತರರು ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಮೂಲಕ ಟೆಂಡರ್‌ ಆಹ್ವಾನಿಸಿದ್ದಾರೆ. ಇದು ಪರಿಶಿಷ್ಟ ಗುತ್ತಿಗೆದಾರರನ್ನು ಮೀಸಲಾತಿಯಿಂದ ದೂರವಿಡುವ ಹುನ್ನಾರವಾಗಿದೆ ಎಂದು ದೂರಿದರು.

ಈ ಅನ್ಯಾಯದ ಬಗ್ಗೆ ಕೇಳಿದರೆ ಶಾಸಕರು ಈ ರೀತಿ ಪ್ಯಾಕೇಜ್ ಮಾಡಲು ಆದೇಶಿಸಿದ್ದಾರೆ ಎಂಬ ಕಾರಣ ನೀಡಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಆರೋಪಿಸಿದರು.

ಪಾರದರ್ಶಕ ಕಾಯ್ದೆ ಉಲ್ಲಂಘನೆ ಮಾಡಿರುವ ಎಂಜಿನಿಯರ್‌ಗಳ ವಿರುದ್ಧ ಸೆಕ್ಷನ್ 23ರಂದು ಕಾನೂನು ಕ್ರಮ ಜರುಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು. ವಾರದೊಳಗೆ ಸರಿಪಡಿಸಿ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಸಣ್ಣ ಕಾಮಗಾರಿ ನೀಡದಿದ್ದರೆ ಕಾರ್‍ಯಪಾಲಕ ಅಭಿಯಂತರರ ವಿರುದ್ಧ ಜಾತಿನಿಂದನೆ ಕಾಯ್ದೆಯಡಿ ದೂರು ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಪದಾಕಾರಿಗಳಾದ ಹೇಮಂತ್‌ಕುಮಾರ್, ಎಸ್.ಡಿ.ಜಯರಾಂ, ಎಸ್.ಎಸ್. ಪ್ರಭಾಕರ್, ಯೋಗೇಶ್, ರಮೇಶ, ರಾಮಕೃಷ್ಣ ಇದ್ದರು.

Latest Videos
Follow Us:
Download App:
  • android
  • ios