Asianet Suvarna News Asianet Suvarna News

ಬೆಳಗಾವಿ ಬೈಎಲೆಕ್ಷನ್‌ಗೆ ಸ್ಪರ್ಧಿಸುವಂತೆ ರಾಹುಲ್‌ ಕರೆ: ಜಾರಕಿಹೊಳಿ ಹೇಳಿದ್ದೇನು..?

ಚುನಾವಣೆಗೆ ಸ್ಪರ್ಧಿಸುವಂತೆ ಕರೆ ಮಾಡಿದ ಒತ್ತಡ ಹೇರಿದ ರಾಹುಲ್‌ ಗಾಂಧಿ?| ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವೆ| ಉಪಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಭ್ಯರ್ಥಿ ಹೆಸರು ಹೇಳಲಾಗುವುದು| ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್‌ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸತೀಶ್‌ ಜಾರಕಿಹೊಳಿ| 

Satish Jarkiholi Talks Over Belagavi Byelection grg
Author
Bengaluru, First Published Feb 1, 2021, 12:49 PM IST

ಬೆಳಗಾವಿ(ಫೆ.01): ಬೆಳಗಾವಿ ಲೋಕಸಭಾ ಉಪಚುನಾವಣೆಗೆ ತಮಗೆ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕರೆ ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ರಾಹುಲ್‌ ಗಾಂಧಿ ಕರೆ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದ್ದಾರೆ ಎಂದು ಮಾಧ್ಯಮಗಳ ವರದಿಯನ್ನು ಅಲ್ಲಗೆಳೆದ ಅವರು, ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವೆ ಎಂದಷ್ಟೇ ತಿಳಿಸಿದರು. 

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಮಾಜಿ MLAಗೆ ಬಿಜೆಪಿ ಗಾಳ, ಚರ್ಚೆಯಾಗಿದೆ ಎಂದ ಡಿಸಿಎಂ

ಉಪಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಭ್ಯರ್ಥಿ ಹೆಸರು ಹೇಳಲಾಗುವುದು. ನಾಲ್ವರ ಹೆಸರು ಕೇಳಿಬಂದಿದೆ. ಅದರಲ್ಲಿ ಒಬ್ಬರಿಗೆ ಟಿಕೆಚ್‌ ನೀಡಲಾಗುತ್ತದೆ. ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. ಇದೇ ವೇಳೆ ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್‌ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಇಲ್ಲಿಯೂ ಅಭ್ಯರ್ಥಿಗಳಿದ್ದಾರೆ. ತಮ್ಮ ಕ್ಷೇತ್ರವನ್ನೇ ಮರಳಿ ಪಡೆಯಲು ಅವರಿಗೆ ಇನ್ನೂ ಮೂರು ವರ್ಷ ಅವಕಾಶವಿದೆ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios