Asianet Suvarna News Asianet Suvarna News

ಬಳ್ಳಾರಿಯಲ್ಲಿ ತಲೆ ಎತ್ತಲಿವೆ ‘ಸಂತೋಷ್‌ ಲಾಡ್‌ ಕ್ಯಾಂಟೀನ್‌'..!

* ಬಳ್ಳಾರಿ ನಗರದಲ್ಲಿ ಎರಡು ಕಡೆ ಕ್ಯಾಂಟೀನ್ ಆರಂಭ
* ಆಗಸ್ಟ್ 12ರಿಂದ ಉಚಿತ ಊಟದ ಕ್ಯಾಂಟೀನ್‌ ಶುರು
* ನಿತ್ಯ 2500 ಜನರಿಗೆ ಉಚಿತ ಊಟ
 

Santosh Lad Canteen Will Be Start in Ballari on August 12th grg
Author
Bengaluru, First Published Aug 11, 2021, 3:10 PM IST

ಕೆ.ಎಂ. ಮಂಜುನಾಥ್

ಬಳ್ಳಾರಿ(ಆ.11): ಬಡವರು ಹಸಿವಿನಿಂದ ಬಳಲಬಾರದು ಎಂಬ ಕಾರಣದಿಂದ ವಿವಿದೆಡೆ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಆರಂಭಿಸಿದ್ದರೆ, ಇದೀಗ ನಗರದಲ್ಲಿ ‘ಸಂತೋಷ್‌ ಲಾಡ್‌’ ಕ್ಯಾಂಟೀನ್‌ಗಳು ಶುರುವಾಗುತ್ತಿವೆ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನವಾದ ಆಗಸ್ಟ್ 12ರಂದು ನಗರದಲ್ಲಿ ಎರಡು ಕಡೆ ‘ಸಂತೋಷ್‌ ಲಾಡ್‌’ ಕ್ಯಾಂಟೀನ್ ಆರಂಭಿಸಲಾಗುತ್ತಿದ್ದು, ನಿತ್ಯ 2500 ಜನರಿಗೆ ಉಚಿತ ಊಟ ಕೊಡುವ ಉದ್ದೇಶ ಹೊಂದಲಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಈಗಾಗಲೇ ಉಚಿತ ಊಟದ ಕ್ಯಾಂಟೀನ್ ಆರಂಭಿಸಿರುವ ಸಂತೋಷ್ಲಾಡ್, ಇದೀಗ ಬಳ್ಳಾರಿ ನಗರಕ್ಕೂ ವಿಸ್ತರಿಸಿದ್ದಾರೆ. ನಗರದ ತಹಸೀಲ್ದಾರ್ಕಚೇರಿ ಮುಂಭಾಗ ಹಾಗೂ ವಿಮ್ಸ್ಆವಣರದಲ್ಲಿ ಕ್ಯಾಂಟೀನ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಖುದ್ದು  ಸಂತೋಷ್‌ ಲಾಡ್‌ ಅವರೇ ಕ್ಯಾಂಟೀನ್‌ಗೆ ಚಾಲನೆ ನೀಡಲಿದ್ದಾರೆ.

ಕ್ಯಾಂಟೀನ್ ಉದ್ದೇಶ

ಹಸಿದವರಿಗೆ ಅನ್ನ ನೀಡುವ ಕುರಿತು ಆಲೋಚಿಸಿ, ಕ್ಯಾಂಟೀನ್ ಆರಂಭಕ್ಕೆ ನಿರ್ಧರಿಸಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಎರಡು ಕಡೆ, ಹರಪನಹಳ್ಳಿಯಲ್ಲಿ ಎರಡು ಕಡೆ ಈಗಾಗಲೇ ಕ್ಯಾಂಟೀನ್ಆರಂಭಿಸಲಾಗಿದೆ. ನಾನು ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದಲ್ಲಿ ಕ್ಯಾಂಟೀನ್‌ ಶುರು ಮಾಡಿದ್ದು, ಜನರ ಒತ್ತಾಸೆಯಂತೆ ಅಳ್ಳಾವರದಲ್ಲೂ ಕ್ಯಾಂಟೀನ್ ಆರಂಭಿಸಲಾಗಿದೆ. ಇದೀಗ ಬಳ್ಳಾರಿಯಲ್ಲಿ ಎರಡು ಕಡೆ ಆರಂಭಿಸುತ್ತಿದ್ದೇವೆ. ಕ್ಯಾಂಟೀನ್ಆರಂಭದ ಹಿಂದೆ ಯಾವ ರಾಜಕೀಯ ಉದ್ದೇಶವಿಲ್ಲ. ಎಲ್ಲ ಕಡೆ ನಾನು ಚುನಾವಣೆ ನಿಲ್ಲಲು ಸಹ ಬರಲ್ಲ. ಹಸಿದವರಿಗೆ ಅನ್ನ ಸಿಗಬೇಕು ಎಂಬ ಆಶಯದಲ್ಲಿ ಕ್ಯಾಂಟೀನ್‌ ಶುರು ಮಾಡಿದ್ದೇನೆ ಎನ್ನುತ್ತಾರೆ ಸಂತೋಷ ಲಾಡ್.

'ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಿದ್ರೆ ಬಿಜೆಪಿ ಇಟ್ಟಹೆಸರುಗಳಿಗೆ ಮಸಿ'

ಮಧ್ಯಾಹ್ನ 12ರಿಂದ ಊಟ

ಪ್ರತಿನಿತ್ಯ ಮಧ್ಯಾಹ್ನ 12 ಗಂಟೆಯಿಂದ ಇಲ್ಲಿ ಊಟ ಲಭಿಸಲಿದೆ. ಚಿತ್ರಾನ್ನ, ಪಲಾವ್, ಮೊಸರನ್ನ, ಬಿಸಿ ಬೇಳೆಬಾತ್, ಪುಳಿಯೋಗರೆ, ಟೋಮೊಟೋ ಬಾತ್, ರೈಸ್ಬಾತ್, ಘೀ ರೈಸ್, ಜೀರಾ ರೈಸ್ಸೇರಿದಂತೆ ವಿವಿಧ ರೀತಿಯ ಆಹಾರವನ್ನು ತಯಾರಿಸಿ ನೀಡಲು ಸಂತೋಷ್‌ ಲಾಡ್‌ ಅಭಿಮಾನ ಬಳಗ ಸಿದ್ಧತೆ ಮಾಡಿಕೊಂಡಿದೆ. ಗ್ರಾಮೀಣ ಭಾಗದಿಂದ ಬರುವ ರೈತರು, ಸಣ್ಣಪುಟ್ಟ ವ್ಯಾಪಾರಿಗಳು, ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ.

ಉಚಿತ ಊಟದ ಕ್ಯಾಂಟೀನ್ ಆರಂಭಿಸುವ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ದೇವರು ನಮಗೆ ಎಲ್ಲವನ್ನು ಕೊಟ್ಟಿದ್ದಾನೆ. ನಮ್ಮಿಂದಾದ ಸೇವೆ ಮಾಡಬೇಕು ಎಂಬ ಉದ್ದೇಶವಿದೆಯಷ್ಟೇ. ಕ್ಯಾಂಟೀನ್ ಆರಂಭಕ್ಕೆ ನಾನೇ ಬರುತ್ತಿದ್ದೇನೆ. ನಮ್ಮ ಪಕ್ಷದ ನಾಯಕರು ಉಪಸ್ಥಿತರಿರುತ್ತಾರೆ ಎಂದು  ಮಾಜಿ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios