Asianet Suvarna News Asianet Suvarna News

ಸಂಸ್ಕೃತ ಭಾಷೆಗೆ ಇಲ್ಲ ಗುಣಮಟ್ಟದ ಸ್ಥಾನಮಾನ

ಸುರ ಸರಸ್ವತಿಯಾದ ಮತ್ತು ಎಲ್ಲ ಭಾಷೆಗಳಿಗೂ ಜೀವಾತ್ಮವಾದ ಸಂಸ್ಕೃತ ಭಾಷೆಗೆ ಭಾರತದಲ್ಲಿ ಗುಣಮಟ್ಟದ ಸ್ಥಾನಮಾನ ಇನ್ನು ದೊರೆತಿಲ್ಲ ಎಂದು ಸಂಸ್ಕೃತ ವಿದ್ವಾಂಸ ಡಾ. ಟಿ.ಎನ್‌. ಪ್ರಭಾಕರ ವಿಷಾದಿಸಿದರು.

Sanskrit language has no quality status snr
Author
First Published Jul 1, 2023, 7:47 AM IST

  ಮೈಸೂರು :  ಸುರ ಸರಸ್ವತಿಯಾದ ಮತ್ತು ಎಲ್ಲ ಭಾಷೆಗಳಿಗೂ ಜೀವಾತ್ಮವಾದ ಸಂಸ್ಕೃತ ಭಾಷೆಗೆ ಭಾರತದಲ್ಲಿ ಗುಣಮಟ್ಟದ ಸ್ಥಾನಮಾನ ಇನ್ನು ದೊರೆತಿಲ್ಲ ಎಂದು ಸಂಸ್ಕೃತ ವಿದ್ವಾಂಸ ಡಾ. ಟಿ.ಎನ್‌. ಪ್ರಭಾಕರ ವಿಷಾದಿಸಿದರು.

ನಗರದ ಮಹಾರಾಜ ಸಂಸ್ಕೃತಿಕ ಮಹಾವಿದ್ಯಾಲಯದಲ್ಲಿ ಸಂಸ್ಕೃತಿ ಪ್ರತಿಷ್ಠಾನ ಮೈಸೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಎಚ್‌.ವಿ. ನಾಗರಾಜ…ರಾವ್‌ ವಿರಚಿತ ವಸಂತ ತಿಲಕಾ ಶತಕಂ ಹಾಗೂ ಶುಭಾಷಿತ ಶತಕಂ ಮತ್ತು ತಾರಾ ಮೂರ್ತಿ ಶಿವೊಹಮ… ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಸಂತ ತಿಲಕಾ ಶತಕಂ ಹಾಗೂ ಶುಭಾಷಿತ ಶತಕಂ,ಶಿವೋ ಹಮ… ಕೃತಿಗಳ ಕಾವ್ಯ ವ್ಯಾಚನ ವಾಚನವನ್ನು ಹಮ್ಮಿಕೊಳ್ಳಬೇಕು ಹಾಗೂ ಈ ಕೃತಿಗಳ ಪರಿಚಯಾತ್ಮಕವಾದ ಉದಬೋಧಕವಾದ ಉಪನ್ಯಾಸವಾಗಬೇಕು ಎಂದರು.

ನಾಗರಾಜ… ರಾವ್‌ ಅವರು ಇಂದು ನಮಗೆ ವಿದ್ಯೆಯ ಜೊತೆಗೆ ವಿನಯದ ಶ್ರೇಷ್ಠ ನಿಧಿಯಾಗಿದ್ದಾರೆ. ಅದನ್ನು ನಾವೆಲ್ಲ ಬೆಳಸಿಕೊಳ್ಳೋ ದೃಷ್ಟಿಯಿಂದ ಹಾಗೂ ಆ ಮನೋಭಾವವನ್ನು ಉದ್ದಿಪನ ಗೊಳಿಸುವ ದೃಷ್ಟಿಯಿಂದ ನಾವೆಲ್ಲರೂ ಎಂದೆದಿಗೂ ಅವರನ್ನು ಈಗ ಮಾತ್ರ ವಷ್ಟೇ ಅಲ್ಲ ಎಂದೆದಿಗೂ ಅವರ ಗ್ರಂಥಗಳ ಮೂಲಕ ನೆನೆಪಿಕೊಳ್ಳುವಂತೆ ಮಾಡಿದ್ದಾರೆ. ಹಾಗೂ ನಾಗರಾಜರಾವ್‌ ಅವರು ಸರಳವಾದ ಶೈಲಿಯಲ್ಲಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯವನ್ನು ರಚನೆ ಮಾಡಿದ್ದಾರೆ, ತಾರಮೂರ್ತಿ ಮತ್ತು ನಾಗರಾಜ… ರಾವ್‌ ಅವರು ನಿರಂತರ ಕಠಿಣ ಪರಿಶ್ರಮದಿಂದ ಕಾವ್ಯವನ್ನು ರಚನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಡಾ. ಎಚ್‌.ವಿ. ನಾಗರಾಜ್‌ ಾವ್‌, ತಾರಾಮೂರ್ತಿ, ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಸತ್ಯನಾರಾಯಣ ಮೊದಲಾದವರು ಇದ್ದರು.

ಪ್ರತಿಯೊಬ್ಬರು ಗೌರವ ಬೆಳೆಸಿಕೊಳ್ಳಿ

ಶಿಕಾರಿಪುರ (ಜೂ.11) ಸನಾತನ ಶ್ರೇಷ್ಟಧರ್ಮ, ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಗ್ಗೆ ಪ್ರತಿಯೊಬ್ಬರೂ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಸಮೀಪದ ಕಡೆನಂದಿಹಳ್ಳಿ ಕ್ಷೇತ್ರದಲ್ಲಿ ಆಯೋಜಿಸಿದ್ದ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

ಸನಾತನ ಧರ್ಮದ ರಕ್ಷಣೆ ಪ್ರತಿ ಹಿಂದೂಗಳ ಹೊಣೆ, ಪುಷ್ಪೇಂದ್ರ ಕುಲಶ್ರೇಷ್ಠ

ತೆಲಂಗಾಣದ ಕೊಲನುಪಾಕ ಸುಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಲ್ಲಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ತಮ್ಮ ತತ್ವಾದರ್ಶಗಳು ಮತ್ತು ವಿಚಾರ ಧಾರೆಗಳ ಮೂಲಕ ಸಮಸ್ತ ಮನುಕುಲದ ಹಿತ ಬಯಸಿದ್ದಾರೆ. ಅಂತಹ ಮಹಿಮಾ ಪುರುಷರ ಭವ್ಯ ಮೂರ್ತಿ ಇಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇದು ಶ್ರೀ ಮಠದ ಚಾರಿತ್ರಿಕ ಇತಿಹಾಸದಲ್ಲಿ ಸ್ಮರಣೀಯ ಕಾರ್ಯವಾಗಿದೆ. ಕಡೇನಂದಿಹಳ್ಳಿಯ ರೇವಣಸಿದ್ದೇಶ್ವರ ಸ್ವಾಮಿಗಳು ಮಳೆ ಮಲ್ಲೇಶ್ವರ ಕ್ಷೇತ್ರದಲ್ಲಿ ಸಂಕಲ್ಪದ ಸಾಧನೆಗಾಗಿ ಲೋಕಕಲ್ಯಾಣಕ್ಕಾಗಿ ನಿರಂತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವುದರ ಮೂಲಕ ಶೂನ್ಯವಾಗಿದ್ದ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮವನ್ನು ತಪೋಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ. ಧರ್ಮ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದರೆ, ಆ ಮಣ್ಣು ಪುಣ್ಯದ ಮಣ್ಣಾಗುತ್ತದೆ. ಶ್ರೀಗಳವರ ಜಪ ತಪ ಅನುಷ್ಠಾನಗಳ ಬಲದಿಂದ ಭಕ್ತರ ಸಹಕಾರದಿಂದ ಶ್ರೀ ಮಠ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ಕಡೇನಂದಿಹಳ್ಳಿ ಶ್ರೀಗಳ ಬಹುದಿನಗಳ ಪ್ರತಿಮೆ ನಿರ್ಮಾಣದ ಕನಸಿಗೆ ಇಂದು ಚಾಲನೆ ದೊರೆತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ತಂದ ಲೋಕಸಭಾ ಸದಸ್ಯರಲ್ಲಿ ಬಿ.ವೈ. ರಾಘವೇಂದ್ರ ಅವರ ಸಾಮಾಜಿಕ ಕಳಕಳಿ ಅನುಪಮವಾಗಿದೆ. ಕ್ಷೇತ್ರದ ನೂತನ ಶಾಸಕ ಬಿ.ವೈ. ವಿಜಯೇಂದ್ರ ತಂದೆಯಂತೆಯೇ ಸಾಮಾಜಿಕ ಇಚ್ಛಾಶಕ್ತಿ ಉಳ್ಳವರಾಗಿದ್ದಾರೆ. ಸ್ವಾಭಿಮಾನ, ಕರ್ತವ್ಯ ನಿಷ್ಠೆ, ನಿರಂತರ ಪ್ರಯತ್ನದಿಂದ ಮಾತ್ರ ಎಲ್ಲ ಕಾರ್ಯದಲ್ಲಿ ಜಯ ದೊರೆಯಲು ಸಾಧ್ಯ. ಯಡಿಯೂರಪ್ಪನವರ ಸಂಕಲ್ಪದಂತೆ ತಾಲೂಕು ಇನ್ನಷ್ಟುಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು

Follow Us:
Download App:
  • android
  • ios