Asianet Suvarna News Asianet Suvarna News

ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ-ಸಂಗೀತ ವಿಭಾಗ ಆರಂಭ..?

ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ -ಸಂಗೀತ ವಿಭಾಗ ತೆರೆಯುವ ಚಿಂತನೆ ಇದೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Sanskrit Classical music classes to be started in all universities
Author
Bangalore, First Published Feb 13, 2020, 3:22 PM IST

ಶಿವಮೊಗ್ಗ(ಫೆ.13): ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ -ಸಂಗೀತ ವಿಭಾಗ ತೆರೆಯುವ ಚಿಂತನೆ ಇದೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಶಿವಮೊಗ್ಗದ ಸಂಸ್ಕೃತ ಗ್ರಾಮ ಎಂದೇ ಕರೆಸಿಕೊಳ್ಳುವ ಮತ್ತೂರಿಗೆ ಗುರುವಾರ ಭೇಟಿ ನೀಡಿದ ಸಚಿವರು, ಅಲ್ಲಿ ಸಂಸ್ಕೃತ ವಿದ್ವಾಂಸರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ವಿದೇಶಗಳಲ್ಲಿಂದು ಸಂಸ್ಕೃತದ ಬಗ್ಗೆ ವಿಶೇಷ ಆಸಕ್ತಿ ಮೂಡಿದೆ. ನಾವು ನಮ್ಮ ಭಾಷೆಯನ್ನು ಕಡೆಗಣಿಸುವಂತಿಲ್ಲ. ನಮ್ಮ ಸರ್ಕಾರ ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ. ಈ  ಹಿಂದೆ ಇಂಥ ಪ್ರಯತ್ನ ನಡೆದಿದ್ದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಈಗಾಗಲೇ 100 ಎಕರೆ ಜಾಗ ನಿಗದಿಯಾಗಿದೆ. ಇದಲ್ಲದೇ ಎಲ್ಲ ವಿವಿಗಳಲ್ಲೂ ಸಂಸ್ಕೃತ- ಸಂಗೀತ ವಿಭಾಗ ತೆರೆಯುವ ಚಿಂತನೆ ಇದೆ ಎಂದು ಹೇಳಿದ್ದಾರೆ.

'ದಿಲ್ಲಿ ಎಲೆಕ್ಷನ್‌ ಬೆಂಗಳೂರು ಪಾಲಿಕೆ ಮಟ್ಟದ್ದು'.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ್‌ ಪಟ್ಟಾಭಿರಾಮ ಇದ್ದರು. ಕುವೆಂಪು ವಿವಿಯಲ್ಲಿ 'ಶಂಕರಾಚಾರ್ಯ ಅದ್ವೈತ ಅಧ್ಯಯನ ಕೇಂದ್ರ' ಸ್ಥಾಪಿಸುವಂತೆ ಪಟ್ಟಾಭಿರಾಮ ಅವರು ಡಾ. ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದ್ದಾರೆ.

Follow Us:
Download App:
  • android
  • ios