ಬೆಂಗಳೂರು[ಫೆ.13]: ದೆಹಲಿ ಚುನಾವಣಾ ಫಲಿತಾಂಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವೇನೂ ಕುಗ್ಗಿಲ್ಲ. ದೆಹಲಿ ಚುನಾವಣೆ ಬೆಂಗಳೂರು ಕಾರ್ಪೋರೇಷನ್‌ ಮಟ್ಟದ್ದು. ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದ್ದಾರೆ.

ಹೊನ್ನಾವರ ತಾಲೂಕಿನ ಕೆಳಗಿನೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ದೆಹಲಿ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಕೇಂದ್ರದ ಚುನಾವಣೆ ವೇಳೆ ಎಲ್ಲರೂ ಒಂದಾಗಿ ಮೋದಿ ಬೆಂಬಲಿಸುತ್ತಾರೆ. ಕೇಜ್ರಿವಾಲ್‌ ನಗರ ಪ್ರದೇಶಕ್ಕೆ ಸೀಮಿತವಾಗಿ ಗೆದ್ದಿದ್ದಾರೆ. ಅವರಿಗೆ ನಾನೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ದೆಹಲಿ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರ ರಾಜೀನಾಮೆ!

ನೂತನ ಶಾಸಕರಿಗೆ ಖಾತೆ ಹಂಚಿಕೆ ಅಸಮಾಧಾನ ವಿಚಾರ ಕುರಿತು ಪ್ರಶ್ನಿಸಿದ ವೇಳೆ, ಅಸಮಾಧಾನಗೊಂಡವರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದ್ದಾರೆ. ಖಾತೆ ಪುನರ್‌ ಹಂಚಿಕೆ ಮಾಡಿ ಅವರಿಗೆ ಸೂಕ್ತ ಇಲಾಖೆ ಕೊಡುವ ಕೆಲಸ ಮಾಡಿದ್ದಾರೆ. ಕೆಲವರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ ಅಷ್ಟೆಎಂದರು.

ಯಾವುದೇ ಅಡೆತಡೆಯಿಲ್ಲದೇ ಸರ್ಕಾರ ಮುಂದಿನ ಅವಧಿಯಲ್ಲಿ ಉತ್ತಮ ಆಡಳಿತ ನೀಡಲಿದೆ. ಸಚಿವರ ಕಾರ್ಯಕ್ಷಮತೆಯನ್ನು ಅಳೆಯುವಷ್ಟುಇನ್ನೂ ಕಾಲವಾಗಿಲ್ಲ. ಮುಂದಿನ ಒಂದು ವರ್ಷದಲ್ಲಿ ಸಚಿವರು ಏನೇನು ಮಾಡಲಿದ್ದಾರೆನ್ನುವುದನ್ನು ತೋರಿಸಿ ಕೊಡಲಿದ್ದಾರೆ ಎಂದರು.

ರಾಜೀನಾಮೆ ನೀಡುವುದಾಗಿ ಹೇಳಿದ ಮನೋಜ್ ತಿವಾರಿ: ಬಿಜೆಪಿ ರೆಸ್ಪಾನ್ಸ್?