ಬೇಲೂ​ರು(ಮೇ.25): ಕೋವಿಡ್‌-19 ನಿಂದಾಗಿ ಸಾಂಕ್ರಾಮಿಕ ವೈರಸ್‌ ರೋಗ ಹರಡದಂತೆ ಪುರಸಭೆ ವ್ಯಾಪ್ತಿಗೆ ಬರುವಂತ ಸ್ಥಳಗಳು ಹಾಗೂ 23 ವಾರ್ಡ್‌ಗಳಿಗೂ 15 ದಿನಕ್ಕೊಮ್ಮೆ ಸ್ಯಾನಿಟರಿ ಸ್ಪ್ರೇ ಸಿಂಪಡಿಸುವ ಮೂಲಕ ಈ ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಪುರಸಭೆ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ಹೇಳಿದರು.

ಪಟ್ಟ​ಣದ ಪುರಸಭೆ ವ್ಯಾಪ್ತಿ ಹಾಗೂ 23 ವಾರ್ಡ್‌ಗೆ ಸ್ಯಾನಿಟೈ​ರ​ಸ್‌ ಸ್ಪ್ರೇ ಸಿಂಪರಣೆ ಮಾಡು​ವ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಿ ಮಾತ​ನಾ​ಡಿದ ಅವರು, ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಜನನಿಬಿಡ ಪ್ರದೇಶಗಳಾದ ಬಸ್‌ ಸ್ಟಾಂಡ್‌, ಜೆಪಿನಗರ, ನೆಹರೂನಗರ, ಬಸವೇಶ್ವರ ವೃತ್ತ, ಪೋಲಿಸ್‌ ಠಾಣೆಗಳಿಗೆ ಸ್ಯಾನಿಟರಿ ಸ್ಪ್ರೇ ಹೊಡೆಸುತ್ತೇವೆ. ಸಾರ್ವಜನಿಕರು ದಿನನಿತ್ಯ ಅಗತ್ಯಕ್ಕೆ ಬೇಕಾದ ವಸ್ತುಗಳನ್ನು ಮಾತ್ರ ತೆಗೆದುಕೊಳ್ಳಬೇಕು ಎಂದ​ರು.

ರಸ್ತೆಗಿಳಿದಿವೆ KSRTC;ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಯಾಣಿಕರ ಸ್ಪಂದನೆ ಹೀಗಿದೆ

ಅನಾವಶ್ಯಕವಾಗಿ ಗುಂಪುಗೂಡಿ ಒಟ್ಟಿಗೆ ಇರಬಾರದು,ಆರೋಗ್ಯದ ದೃಷ್ಟಿಯಿಂದ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಓಡಾಡಬೇಕು, ಮಾಸ್ಕ್‌ ಇಲ್ಲದೆ ಓಡಾಡುವವರನ್ನು ಹಿಡಿದು ದಂಡ ವಿಧಿಸಲಾಗುವುದು.ಈಗಾಗಲೇ ಈ ಕೋವಿಡ್‌ 19 ವಿರುದ್ಧ ಸಮರ ಸಾರಲು ತಾಲೂಕು ಆಡಳಿತ,ಪುರಸಭೆ ಹಾಗೂ ಇತರೆ ಎಲ್ಲಾ ಅಧಿಕಾರಿ ಇಲಾಖೆಯ ವರ್ಗಗಳು ಕೈಜೋಡಿಸಿದ್ದು ,ಇದಕ್ಕೆ ಸಾರ್ವಜನಿಕರ ಸಹಕಾರವೂ ಅತಿ ಮುಖ್ಯವಾಗಿದೆ ಎಂದರು.