ಧಾರವಾಡ (ಡಿ.15): ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಲಾಗಿದೆ.   ಶ್ರೀಗಂಧದ ಮರಗಳನ್ನ ಕದ್ದು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.  

  ಅರಣ್ಯ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ಜಿಲ್ಲೆಯ ದೇವರ ಗುಡಿಹಾಳದ ಮೆಹಬೂಬಸಾಬ ಸವಣೂರ, ಕಲಘಟಗಿ ಶಿಗಿಗಟ್ಟಿಯ ಕೃಷ್ಣಪ್ಪ  ಲಮಾಣಿ,  ಮುರ್ಕವಾಡ ಗ್ರಾಮದ ಅರ್ಜುನ ಮಾಚಕ ಎಂಬುವರನ್ನು ಅರೆಸ್ಟ್ ಮಾಡಲಾಗಿದೆ.  

ಶಿವಮೊಗ್ಗ; ಬಾವಿಯೊಳಗೆ ಶ್ರೀಗಂಧ ಅಡಗಿಸಿಟ್ಟಿದ್ದರು. ಚಾಲಾಕಿಗಳು! ...

ಶ್ರೀಗಂಧದ ಮರಗಳನ್ನ ಕಡಿದು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದು ಅವರಿಂದ   71 ಕೆಜಿಯಷ್ಟು ಶ್ರೀಗಂಧ ವಶಕ್ಕೆ ಪಡೆಯಲಾಗಿದೆ.  

ಬರೋಬ್ಬರಿ ಐದು ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.